ಮಹಾನ್ ಋಷಿ ಮಹರ್ಷಿ ಅಗಸ್ತ್ಯರು. ಜೀವನದ ಪರಿಚಯ!!

0
1024

ಮಹರ್ಷಿ ಅಗಸ್ತ್ಯರು ವೇದಗಳ ಮಂತ್ರದ್ರಷ್ಟಾ ಋಷಿಗಳು. ಅವರ ಜನ್ಮದ ಬಗ್ಗೆ ವಿವಿಧ ಪ್ರಕಾರಗಳ ಕಥೆಗಳು ಇವೆ. ಒಂದೆಡೆ ಅವರು ಪುಲಸ್ತ್ಯರ ಪತ್ನಿ ಹವಿರ್ಭೂತ ಗರ್ಭದಿಂದ ವಿಶ್ವವಾನೊಂದಿಗೆ ಜನಿಸಿದರು ಎಂದಿದ್ದರೆ, ಮತ್ತೊಂದೆಡೆ ಮಿಕ್ತಾವರುಣರ ಮೂಲಕ ವಶಿಷ್ಟರೊಂದಿಗೆ ಗಡಿಗೆಯಲ್ಲಿ ಜನಿಸಿದರು ಎಂದು ಇದೆ.
ಒಮ್ಮೆ ವಿಂಧ್ಯಾಚಲ ಪರ್ವತ ಎಷ್ಟು ಎತ್ತರಕ್ಕೇರಿತು ಎಂದರೆ ಸೂರ್ಯನ ಪ್ರಯಾಣಕ್ಕೆ ತೊಂದರೆಯಾಯಿತು. ಸೂರ್ಯ ಮಹರ್ಷಿ ಅಗಸ್ತ್ಯರ ಬಳಿಗೆ ಹೋಗಿ ಶರಣಾಗತನಾದನು. ಆಗ ಅಗಸ್ತ್ಯರು ಅವನಿಗೆ ಆಶ್ವಾಸನೆ ನೀಡಿ ಸ್ವತಃ ವಿಂಧ್ಯಾಚಲದಲ್ಲಿ ನೆಲೆಸಿದರು. ವಿಂಧ್ಯಾಚಲ ಅತ್ಯಂತ ಶ್ರದ್ಧೆ ಭಕ್ತಿಗಳಿಂದ ನಮಸ್ಕರಿಸಿತು. ಆಗ ಮಹರ್ಷಿಗಳು, ಸಹೋದರಾ ನಾನು ತೀರ್ಥಯಾತ್ರೆಗಾಗಿ ದಕ್ಷಿಣ ದಿಕ್ಕಿಗೆ ಹೋಗಬೇಕು. ಆದರೆ ನಿನ್ನ ಈ ಎತ್ತರವನ್ನು ದಾಟಿ ಹೋಗುವುದು ಬಹಳ ಕಷ್ಟ ಎನಿಸುತ್ತದೆ. ಹೇಗೆ ಹೋಗಲಿ? ಎಂದರು.
ಅವರ ಮಾತುಗಳನ್ನು ಕೇಳಿದೊಡನೆ ವಿಂಧ್ಯಾಚಲ ಅವರ ಪಾದಗಳಲ್ಲಿ ಮಲಗಿತು. ಆಗ ಸುಲಭವಾಗಿ ಪರ್ವತ ದಾಟಿದ ಅಗಸ್ತ್ಯರು’’ ನಾನು ಹಿಂದಿರುಗಿ ಬರುವವರೆಗೆ ನೀನು ಹೀಗೇ ಮಲಗಿರು’’ ಎಂದು ಹೇಳಿ ನಡೆದರು. ವಿಂಧ್ಯಾಚಲ ವಿನಮ್ರತೆಯಿಂದ ಅವರ ಆಜ್ಞೆ ಪಾಲಿಸಿತು. ಆದರೆ ಅಗಸ್ತ್ಯರು ಮರಳಿ ಬಾರದೇ ಇದ್ದುದರಿಂದ ವಿಂಧ್ಯಾಚಾಲ ಮಲಗಿಯೇ ಇದೆ.
ಒಮ್ಮೆ ಓಡಾಡುತ್ತಿದ್ದಾಗ ಮಹರ್ಷಿ ಅಗಸ್ತ್ಯರಿಗೆ ಕೆಲವರು ತಲೆ ಕೆಳಗೆ ಮಾಡಿಕೊಂಡು ಬಾವಿಯಲ್ಲಿ ಜೋತಾಡುತ್ತಿರುವುದು ಕಾಣಿಸಿತು. ವಿಚಾರಿಸಿದಾಗ ಅವರು ತಮ್ಮ ಸ್ವಂತ ಪಿತೃಗಳೆಂದೂ ಮತ್ತು ಅವರ ಉದ್ಧಾರದ ಉಪಾಯವೆಂದರೆ ಅವರು ಸಂತಾನವನ್ನು ಹೊಂದಬೇಕೆಂದೂ ಆಗಿತ್ತು. ಹಾಗೆ ಮಾಡದಿದ್ದರೆ ಪಿತೃಗಳ ಕಷ್ಟ ಅಳಿಯುವುದಿಲ್ಲವೆಂದು ತಿಳಿಯಿತು. ಆಗ ಅವರು ವಿದರ್ಭರಾಜನ ಪುತ್ರಿಯಾಗಿದ್ದ ಅಪೂರ್ವ ಸುಂದರಿ ಲೋಪಾಮುದ್ರೆಯನ್ನು ಪತ್ನಿಯಾಗಿ ಸ್ವೀಕರಿಸಿದರು.
ಆಗ ಇಲ್ವಲ ಮತ್ತು ವಾತಾಪಿ ಎಂಬ ಇಬ್ಬರು ರಾಕ್ಷಸರು ಬಹಳ ಗಲಾಟೆ ಮಾಡಲಾರಂಭಿಸಿದರು. ಅವರು ಋಷಿಗಳನ್ನು ತಮ್ಮಲ್ಲಿಗೆ ಕರೆಸಿಕೊಂಡು ಅವರಿಗೆಲ್ಲ ವಾತಾಪಿ ಸ್ವತಃ ಅಡುಗೆ ಮಾಡುತ್ತಿದ್ದನು. ಋಷಿಗಳೆಲ್ಲರೂ ಊಟ ಮಾಡಿ ಮುಗಿಸಿದ ನಂತರ ಇಲ್ವಲ ಹೊರಗಿನಿಂದ ವಾತಾಪಿಯನ್ನು ಕರೆಯುತ್ತಿದ್ದನು. ವಾತಾಪಿ ಅವರ ಹೊಟ್ಟೆಯನ್ನು ಸೀಳಿಕೊಂಡು ಹೊರಕ್ಕೆ ಬರುತ್ತಿದ್ದನು. ಇಬ್ಬರೂ ಈ ರೀತಿಯಾಗಿ ಅನೇಕ ಮಂದಿ ಬ್ರಾಹ್ಮಣ ಮಹಾತ್ಮರನ್ನು ಸಂಹರಿಸುತ್ತಿದ್ದರು. ಆದರೆ ಇದನ್ನು ಅಗಸ್ತ್ಯ ಋಷಿಗಳು ಹೇಗೆ ಸಹಿಸಿಕೊಳ್ಳುತ್ತಿದ್ದರು? ಹಾಗಾಗಿ ಒಂದು ದಿನ ಅವರೂ ಅಲ್ಲಿಗೆ ಅತಿಥಿ ರೂಪದಲ್ಲಿ ಬಂದು ಅರಗಿಸಿಕೊಳ್ಳಲ್ಪಟ್ಟರು.
ಭಗವಂತ ಶ್ರೀರಾಮ ವನದಲ್ಲಿ ಸುತ್ತುತ್ತಿದ್ದಾಗ ಒಂದು ದಿನ ಇವರ ಆಶ್ರಮಕ್ಕೆ ಬಂದರು. ಭಕ್ತೋತ್ತಮ ಸುತೀಕ್ಷ್ಣ ಅಪರ ಭಕ್ತನಾಗಿದ್ದನು. ಲಂಕೆಯನ್ನು ಗೆದ್ದು ಶ್ರೀರಾಮ ಅಯೋಧ್ಯೆಗೆ ಹಿಂದಿರುಗಿದರು ಮತ್ತು ಅವರಿಗೆ ರಾಜ್ಯಾಭಿಷೇಕ ನಡೆಯಿತು. ಮಹರ್ಷಿ ಅಗಸ್ತ್ಯರು ಅಲ್ಲಿಗೆ ಬಂದರು ಹಾಗೂ ಶ್ರೀರಾಮನಿಗೆ ಅನೇಕ ರೀತಿಯ ಕಥೆಗಳನ್ನು ಹೇಳಿದರು. ವಾಲ್ಮೀಕಿ ರಾಮಾಯಣದ ಉತ್ತರಕಾಂಡದ ಹೆಚ್ಚಿನ ಕಥೆಗಳು ಅವರೇ ಹೇಳಿದ್ದರು. ಅಗಸ್ತ್ಯರು ರಚಿಸಿದ ಅಗಸ್ತ್ಯ ಸಂಚಾ ಒಂದು ಸುಂದರ ಉಪಾಸನಾ ಸಂಬಂಧಿತ ಸುಂದರ ದೊಡ್ಡ ಗ್ರಂಥವಾಗಿದೆ.