ಸ್ಮಾರ್ಟ್‌ಫೋನ್‌ ಬಳಕೆದಾರರೇ ಎಚ್ಚರ; ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ವೈರಸ್ ದಾಳಿ, ನಿಮ್ಮ ಮೊಬೈಲ್ -ನಲ್ಲಿ ಈ ವೈರಸ್ ಇದಿಯಾ ಚೆಕ್ ಮಾಡಿ..

0
290

ಭಾರತದಲ್ಲಿ ಹಲವು ರೀತಿಯ ವ್ಯವಹಾರಗಳು ಮೊಬೈಲ್ ಮೂಲಕವೇ ನಡೆಯುತ್ತಿದ್ದು, ಬ್ಯಾಂಕಿಗ್- ನಿಂದ ಹಿಡಿದು ಫುಡ್ ಆರ್ಡರ್ ಮಾಡುವವರೆಗೆ ಬಂದು ತಲುಪಿದೆ. ಇದನ್ನು ಗುರಿಯಾಗಿಟ್ಟುಕೊಂಡು ಮೊಬೈಲ್ ಹ್ಯಾಕರ್ಸ್-ಗಳು ಮೊಬೈಲ್ಸ್ ಗೆ ವೈರಸ್ ದಾಳಿ ಮಾಡುತ್ತಿದ್ದಾರೆ, ಇದರಿಂದ ಪ್ರತಿಯೊಂದು ಖಾಸಗಿ ವಿಚಾರವನ್ನು ಕಲೆ ಹಾಕುತ್ತಿದ್ದಾರೆ. ಈ ದಾಳಿವು ಸುಮಾರು ಜಗತ್ತಿನಾದ್ಯಂತ 25 ಮಿಲಿಯನ್ ಮೊಬೈಲ್‌ಗಳನ್ನು ಸೇರಿದೆ ಎಂದು ತಿಳಿದಿದೆ. ಅದಕ್ಕಾಗಿ ಪ್ಲೇ ಸ್ಟೋರ್-ನಲ್ಲಿ ಬರುವ ಇತರೆ ಯಾವುದೇ app ಗಳನ್ನು ಡೌನ್ಲೋಡ್ ಮಾಡುವ ಮುನ್ನ ಎಚ್ಚರವಾಗಿರಬೇಕು. ಎಂದು ಚೆಕ್ ಪಾಯಿಂಟ್ ಎಂಬ ಸೈಬರ್ ಸೆಕ್ಯೂರಿಟಿ ಕಂಪನಿ ತಿಳಿಸಿದೆ.

ಹೌದು ಈಗಾಗಲೇ ಹ್ಯಾಕ್ ಮಾಡಿ ಹಲವರ ಬ್ಯಾಂಕ್ ಖಾತೆಗೆ ಕನ್ನಹಾಕುವ ಮತ್ತು ಮಾಹಿತಿಯನ್ನು ಕದ್ದಾಲಿಸುವ ಕೆಲಸ ನಡೆಯುತ್ತಿದೆ. ಇದ್ದು ಸದ್ದಿಲ್ಲದೇ ನಡೆಯುತ್ತಿದೆ ಎನ್ನುವ ಮಾಹಿತಿ ಭಾರತದ ದೇಶಾದ್ಯಂತ ಮೊಬೈಲ್ ಬಳಕೆದಾರರನ್ನು ಬೆಚ್ಚಿಬಿಳಿಸಿದೆ.

ಏನಿದು ವೈರಸ್ ದಾಳಿ?

ಏಜೆಂಟ್ ಸ್ಮಿತ್ ಎಂಬ ಮಾಲ್‌ವೇರ್ ಸ್ಮಾರ್ಟ್‌ಪೋನ್‌ಗಳಿಗೆ ದಾಳಿ ಮಾಡಿದೆ. ಭಾರತದ ಸುಮಾರು 15 ಮಿಲಿಯನ್ ಸ್ಮಾರ್ಟ್‌ಫೋನ್ ಸೇರಿದಂತೆ ಜಗತ್ತಿನಾದ್ಯಂತ 25 ಮಿಲಿಯನ್ ಮೊಬೈಲ್‌ಗಳು ಏಜೆಂಟ್ ಸ್ಮಿತ್ ದಾಳಿಗೆ ಒಳಗಾಗಿದ್ದು, ಗೂಗಲ್‌ಗೆ ಸಂಬಂಧಿಸಿದ ಅಪ್ಲಿಕೇಶನ್‌ನ ಸೋಗಿನಲ್ಲಿ ಸ್ಮಾರ್ಟ್‌ಫೋನೊಳಗಡೆ ನುಸುಳುವ ಈ ಏಜೆಂಟ್ ಸ್ಮಿತ್, ಇತರೆಲ್ಲಾ ಅಪ್ಲಿಕೇಶನ್‌ಗಳನ್ನು ಹಾಳು ಮಾಡುತ್ತಿದೆ. ಹಾಗೂ ಬಳಕೆದಾರರ ಅರಿವಿಗೆ ಬಾರದಂತೆ ಇತರ ಅಪಾಯಕಾರಿ ಅಪ್ಲಿಕೇಶನ್‌ಗಳಿಂದ ಬದಲಾಯಿಸುತ್ತದೆ ಎಂದು ಚೆಕ್ ಪಾಯಿಂಟ್ ಹೇಳಿದೆ.

ಯಾವ ರೀತಿಯಲ್ಲಿ ಸೇರುತ್ತೆ ವೈರಸ್?

ಹಣಕಾಸು- ಲಾಭಗಳಿಸುವ ವ್ಯವಹಾರದ ಜಾಹೀರಾತುಗಳನ್ನು ತೋರಿಸುವ ಈ ಮಾಲ್‌ವೇರ್ ಎಂಟ್ರಿ ಬಳಕೆದಾರರ ಗೌಪ್ಯ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವ ಸಾಧ್ಯತೆಯೂ ಇದೆ ಎಂದು ಸಂಸ್ಥೆಯು ಎಚ್ಚರಿಸಿದೆ. ಈ ಹಿಂದೆ Gooligan, Hummingbad, ಮತ್ತು CopyCat ಎಂಬ ಮಾಲ್‌ವೇರ್‌ಗಳು ಇದೇ ರೀತಿ ಮೊಬೈಲ್ ಬಳಕೆದಾರರನ್ನು ಬೆಚ್ಚಿ ಬೀಳಿಸಿದ್ದುವು. ಆ್ಯಂಡ್ರಾಯಿಡ್ ಫೋನ್‌ಗಳು ಈ ಮಾಲ್‌ವೇರ್‌ನ ಸುಲಭವಾದ ಟಾರ್ಗೆಟ್. ಹಿಂದಿ, ಅರೇಬಿಕ್ ಮತ್ತು ಇಂಡೋನೇಶ್ಯನ್ ಭಾಷಿಕರನ್ನು ಪ್ರಮುಖವಾಗಿ ಏಜೆಂಟ್ ಸ್ಮಿತ್ ಗುರಿಯಾಗಿಸಿದೆ.

ಎಚ್ಚರ ವಹಿಸುವುದು ಹೇಗೆ?

ಏಷ್ಯಾಖಂಡದ ಇತರ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶದ ಮೊಬೈಲ್ ಬಳಕೆದಾರರು ಇದರಿಂದ ತೊಂದರೆಗೊಳಗಾಗಿದ್ದಾರೆ. ಇಂತಹ ದಾಳಿಯಿಂದ ಬಚಾವಾಗಬೇಕಾದರೆ, ಬಳಕೆದಾರರರು ಮೊಬೈಲ್ ‘ಸುರಕ್ಷತೆ’ಗೆ ಹೆಚ್ಚು ಒತ್ತು ಕೊಡಬೇಕು, ವಿಶ್ವಾಸಾರ್ಹ ಪ್ಲೇ ಸ್ಟೋರ್‌ನಿಂದ ಮಾತ್ರ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬೇಕು ಎಂದು ಸಂಸ್ಥೆಯು ಹೇಳಿದೆ.