ಕೇಂದ್ರ ಗುಪ್ತಚರ ಇಲಾಖೆಯಿಂದ ಮಾಹಿತಿ ರವಾನೆ; ಹೊಸವರ್ಷದಂದು ಬೆಂಗಳೂರಿನ ಮೇಲೆ ಉಗ್ರರ ಕಣ್ಣು, ರಾಜ್ಯದ ತುಂಬೆಲ್ಲ ಕಟ್ಟೆಚ್ಚರ ವಹಿಸಲು ಸೂಚನೆ..

0
306

ಹೊಸ ವರ್ಷಾಚರಣೆಗೆ ಉಗ್ರರ ಕಣ್ಣು ರಾಜ್ಯದ ಪ್ರಮುಖ್ಯ ನಗರಗಳ ಮೇಲೆ ಬಿದ್ದಿದು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಮಂಗಳೂರು ಸೇರಿ ಹಲವೆಡೆ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಸೂಚಿಸಿರುವ ಕೇಂದ್ರ ಗುಪ್ತಚರ ಇಲಾಖೆ, ಎಲ್ಲಾ ಪ್ರಮುಖ ನಗರಗಳು ಮತ್ತು ಪ್ರವಾಸಿ ಸ್ಥಳ ಸೇರಿದಂತೆ ಧಾರ್ಮಿಕ ಕ್ಷೆತ್ರಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮಾಹಿತಿ ರವಾನಿಸಿದೆ.

Also read: ಬಾಕ್ಸ್ ಆಫೀಸ್-ನಲ್ಲಿ ಶಾರುಖ್ ಖಾನ್-ರ Zero ಚಿತ್ರವನ್ನೂ ಹಿಂದಿಕ್ಕಿ ಮುನ್ನುಗ್ಗುತಿದೆ ಕೆ.ಜಿ.ಎಫ್. ಕನ್ನಡಿಗರ ಚಿತ್ರ ಯಾರಿಗಿಂತ ಕಮ್ಮಿಯಿಲ್ಲ ಅನ್ನೋದನ್ನು ಸಾಧಿಸಿಯೇ ಬಿಟ್ಟರು ಯಶ್!!

ಹೌದು ಬುಧವಾರ ದೆಹಲಿ ಮತ್ತು ಉತ್ತರಪ್ರದೇಶದ 17 ಕಡೆ ದಾಳಿ ನಡೆಸಿದ್ದ ಎನ್ಐಎ ತಂಡ ಹಲವರನ್ನು ಬಂಧಿಸಿತ್ತು. ಐಸಿಸ್ ಬೆಂಬಲಿತ ಸಂಘಟನೆಗೆ ಸೇರಿದವರು ಎನ್ನಲಾಗಿರುವ ಈ ಆರೋಪಿಗಳು ಹೊಸ ವರ್ಷಾಚರಣೆ ವೇಳೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಈಗಾಗಲೇ ಹೊಸ ವರ್ಷದ ಸಂಭ್ರಮದ ತಯಾರಿ ನಡೆದಿದ್ದು ಈ ವರ್ಷ ಹೊಸ ವರ್ಷಾಚರಣೆಗೆ ಲಕ್ಷಾಂತರ ಜನ ಸೇರು ಮುನ್ಸೂಚನೆಯಿದೆ. ಇದರ ಮೇಲೆ ಉಗ್ರರ ಕಣ್ಣು ಇದ್ದು ಪ್ರಮುಖ ಏರಿಯಾಗಳು, ಮಾಲ್​ಗಳು, ಜನನಿಬಿಡ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆ ತಾಕೀತು ಮಾಡಿದೆ.

2014 ರಂತೆ ಮತ್ತೆ ಉಗ್ರರ ಸಂಚು:

2014ರಲ್ಲಿ ಹೊಸ ವರ್ಷಾಚರಣೆ ಮುನ್ನ ಚರ್ಚ್ ಸ್ಟ್ರೀಟ್ ನಲ್ಲಿ‌ ಬಾಂಬ್ ಸ್ಫೋಟಗೊಂಡಿತ್ತು. ಹೊಸ ವರ್ಷಾಚರಣೆಗೂ ಎರಡು ದಿನ ಮುನ್ನವೆ ಡಿಸೆಂಬರ್ 28ರಂದು ಉಗ್ರರು ಬಾಂಬ್ ಸ್ಪೋಟಿಸಿದ್ದರು. ಅದೇ ರೀತಿಯಲ್ಲಿ ಈ ಮತ್ತೆ ಸಂಚು ನಡೆದಿದೆ ಇಂತಹ ಅಹಿತಕರ ಘಟನೆ ಮರುಕಳಿಸದಂತೆ ತೀವ್ರ ನಿಗಾ ವಹಿಸಲು ಸೂಚಿಸಲಾಗಿದೆ ಹಿನ್ನಲೆಯಲ್ಲಿ ಬೆಂಗಳೂರು ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಭದ್ರತೆಗೆ ತಯಾರಿ ನಡೆಸಿದ ಪೋಲಿಸ್ ಇಲಾಖೆ:

ಹೊಸ ವರ್ಷಾಚರಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಭದ್ರತಾ ಕಾರ್ಯಗಳಿಗಾಗಿ ಹಿರಿಯ ಆಧಿಕಾರಿಗಳೊಂದಿಗೆ ನಗರ ಪೊಲೀಸ್ ಆಯುಕ್ತರು ನಿರಂತರವಾಗಿ ಸಮಾಲೋಚನೆ ನಡೆಸುತ್ತಿದ್ದಾರೆ. ಈಗಾಗಲೇ ಡಿ.31ರಂದು ರಾತ್ರಿ ನಗರದ ಭದ್ರತೆ ಕುರಿತು ಈಗಾಗಲೇ ನೀಲ ನಕ್ಷೆ ಸಿದ್ಧಪಡಿಸಿದ್ದಾರೆ.

ಡಿ.31ರ ರಾತ್ರಿ ಪೇದೆಗಳೂ ಸೇರಿದಂತೆ ನಾಲ್ವರು ಹೆಚ್ಚುವರಿ ಆಯುಕ್ತರು, 19 ಡಿಸಿಪಿಗಳು ಸೇರಿದಂತೆ ಸುಮಾರು 15 ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತೆಯಲ್ಲಿ ನಿರತರಾಗಲಿದ್ದಾರೆ. ಹಾಗೆಯೇ ನಗರ ಮತ್ತು ರಾಜ್ಯ ಸಶಸ್ತ್ರ ಮೀಸಲು ಪಡೆಗಳು ಕೂಡ ಭದ್ರತೆಯನ್ನು ನೀಡಲಿವೆ.

ಸಂಭ್ರಮಾಚರಣೆಗೆ ಕೇಂದ್ರ ಬಿಂದುವಾಗಿರುವ ಎಂ.ಜಿ.ರಸ್ತೆ, ಬ್ರಿಗೇಡ್ ಹಾಗೂ ಚರ್ಚ್ ಸ್ಟ್ರೀಟ್ ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟು, ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಬಿ.ಕೆ.ಸಿಂಗ್ ನೇತೃತ್ವದಲ್ಲಿ 500 ಮಹಿಳಾ ಸಿಬ್ಬಂದಿ ಸೇರಿ 2 ಸಾವಿರ ಪೊಲೀಸರನ್ನಿ ನಿಯೋಜನೆಗೊಳ್ಳಲಿದ್ದಾರೆ. ಹಾಗೆಯೇ 300ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ವಾಚ್ ಟವರ್ ಗಳನ್ನು ನಿರ್ಮಿಸಿ ಪ್ರತಿಯೊಬ್ಬರ ಚಲನವಲನಗಳ ಮೇಲೆ ನಿಗಾವಹಿಸಲಾಗಿದೆ. ನಗರದ ಎಲ್ಲಾ ಮೇಲ್ಸೇತುವೆಗಳು ಹಾಗೂ ಎಂ.ಜಿ.ರಸ್ತೆ ವ್ಯಾಪ್ತಿ ಡಿಸೆಂಬರ್ 31ರ ಮಧ್ಯಾಹ್ನ ರಿಂದ ಜನವರಿ 1ರ ಬೆಳಿಗ್ಗೆ 6ರವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ.

ಹೊಸವರ್ಷಾಚರಣೆಗೆ ಮೇಲ್ಸೇತುವೆಗಳು ಬಂದ್?

ಸಂಭ್ರಮಾಚರಣೆ ಮತ್ತಿನಲ್ಲಿ ಕೆಲವರು ಮದ್ಯ ಸೇವಿಸಿ ವಾಹನ ಚಲಾಯಿಸಬಹುದು. ಇದರಿಂದ ಮೇಲ್ಸೇತುವೆಗಳಲ್ಲಿ ಅಪಘಾತಕ್ಕೂ ಕಾರಣವಾಗಲಿದೆ. ಇನ್ನು ಕೆಲ ಕಿಡಿಗೇಡಿಗಳು ಆಚರಣೆ ನೆಪದಲ್ಲಿ ಪಾನಮತ್ತರಾಗಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ನಾಗರಿಕರಿಗೆ ತೊಂದರೆಯುಂಟು ಮಾಡುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ ಮೈಸೂರು ರಸ್ತೆ, ಹೊಸೂರು, ಯಶವಂತಪುರ, ರಿಚ್ಮಂಡ್ ಸರ್ಕರ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಪ್ರಮುಖ ಮೇಲ್ಸೇತುವೆಗಳ ಮೇಲೆ ವಾಹನಗಳ ಸಂಚಾರ ಬಂದ್ ಆಗಲಿದೆ. ಆದರೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಅಡಚಣೆಯಾಗದಂತೆ ಪೊಲೀಸರು ವ್ಯವಸ್ಥೆಗಳನ್ನು ಕಲ್ಪಿಸಲಿದ್ದಾರೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also read: ಟೋಲ್‌ ಗೇಟ್‌ಗಳಲ್ಲಿ ಒಮ್ಮೆ ಶುಲ್ಕ ಪಾವತಿ ಮಾಡಿ 12 ತಾಸಿನೊಳಗೆ ರಿಟರ್ನ್ ಬಂದರೆ ಮತ್ತೆ ಪಾವತಿ ಪಡೆಯುವ ಅವ್ಯಶಕತೆ ಇಲ್ಲವೇ?