ಕೃಷಿ ವಿಮಾ ಸಂಸ್ಥೆಯಲ್ಲಿ ಉದ್ಯೋಗ ಅವಕಾಶ… ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಬಹುದು..!!

0
629

ದೇಶದ ಪ್ರಮುಖ ಕೃಷಿ ವಿಮಾ ಸಂಸ್ಥೆಯಾಗಿರುವ ‘ಅಗ್ರಿಕಲ್ಚರ್‌ ಇನ್ಷೂರೆನ್ಸ್‌ ಕಂಪನಿ ಆಫ್‌ ಇಂಡಿಯಾ ಲಿಮಿಟೆಡ್‌’ ಅಡ್ಮಿನಿಸ್ಪ್ರೇಟಿವ್‌ ಆಫೀಸರ್‌ (ಸ್ಕೇಲ್‌-1)ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಅಗ್ರಿಕಲ್ಚರ್‌ ಸೈನ್ಸ್‌, ಇನ್‌ಫಾರ್ಮೇಶನ್‌ ಟೆಕ್ನಾಲಜಿ, ಫೈನಾನ್ಸ್‌, ಲೀಗಲ್‌, ಸ್ಟ್ಯಟಿಸ್ಟಿಕ್ಸ್‌, ಮಾರ್ಕೆಟಿಂಗ್‌ ಮತ್ತು ಜನರಲ್‌ ವಿಭಾಗದಲ್ಲಿ ಈ ನೇಮಕಾತಿ ನಡೆಯಲಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್‌ 10 ಕೊನೆಯ ದಿನವಾಗಿದೆ.

ಅರ್ಜಿ ಸಲ್ಲಿಸಲು ಕೊನೆ ದಿನ: ಅಕ್ಟೋಬರ್‌ 10, 2017

ಹೆಚ್ಚಿನ ಮಾಹಿತಿಗಾಗಿ: www.aicofindia.com

ಹುದ್ದೆಗಳ ವಿವರ:

ಖಾಲಿ ಹುದ್ದೆಗಳ ಸಂಖ್ಯೆ: 50
ಇವುಗಳಲ್ಲಿ ಎಸ್‌ಸಿ ಅಭ್ಯರ್ಥಿಗಳಿಗೆ ಎಂಟು, ಎಸ್‌ಟಿ ಅಭ್ಯರ್ಥಿಗಳಿಗೆ ನಾಲ್ಕು ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 13 ಹುದ್ದೆಗಳನ್ನು ಮೀಸಲಿಡಲಾಗಿದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕ ನಡೆಯಲಿದ್ದು, ಲಿಖಿತ ಪರೀಕ್ಷೆಗೆ ರಾಜ್ಯದ ಆರು ಕಡೆ ಪರೀಕ್ಷಾ ಕೇಂದ್ರಗಳು ಇರಲಿವೆ. ರಾಜ್ಯದಲ್ಲಿ ನ ಪರೀಕ್ಷಾ ಕೇಂದ್ರ: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಕಲಬುರಗಿ ಮತ್ತು ಮೈಸೂರುನಲ್ಲಿ ದಿನಾಂಕ ನವೆಂಬರ್‌ 18 ಮತ್ತು 19ರಲ್ಲಿ ನೆಡೆಯಲಿವೆ. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:3 ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?

ಬಿಎಸ್ಸಿ (ಅಗ್ರಿಕಲ್ಚರ್‌) , ಬಿಇ/ಬಿಟೆಕ್‌ (ಅಗ್ರಿಕಲ್ಚರ್‌ ಎಂಜಿನಿಯರಿಂಗ್‌), ಎಂಎಸ್ಸಿ (ಅಗ್ರಿಕಲ್ಚರ್‌), ಬಿಕಾಂ, ಎಲ್‌ಎಲ್‌ಬಿ, ಎಂಬಿಎ (ಫೈನಾನ್ಸ್‌), ಬಿಇ/ಬಿಟೆಕ್‌ (ಕಂಪ್ಯೂಟರ್‌/ಐಟಿ), ಬಿಎಸ್ಸಿ (ಸ್ಟ್ಯಟಿಸ್ಟಿಕ್ಸ್‌) ಮತ್ತು ಪದವಿ (ಮಾರ್ಕೆಟಿಂಗ್‌) ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಆಯಾ ವಿಭಾಗಗಳಲ್ಲಿನ ಅಡ್ಮಿನಿಸ್ಪ್ರೇಟಿವ್‌ ಆಫೀಸರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇಕಡಾ 60 (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶೇ. 55) ಅಂಕಗಳನ್ನು ಪಡೆದು ತೇರ್ಗಡೆಯಾಗಬೇಕಾಗಿರುವುದು ಕಡ್ಡಾಯ.

ವಯೋಮಿತಿ:
ಅರ್ಜಿ ಸಲ್ಲಿಸುವವರ ಕನಿಷ್ಠ ವಯೋಮಿತಿ 21 ವರ್ಷ ಹಾಗೂ ಗರಿಷ್ಠ 30 ವರ್ಷ. ಮೀಸಲಾತಿ ನಿಯಮಾನುಸಾರ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ:
ಎಸ್‌ಸಿ/ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳು 100 ರೂ. ಮತ್ತು ಉಳಿದೆಲ್ಲಾ ಅಭ್ಯರ್ಥಿಗಳು 650 ಶುಲ್ಕ ಪಾವತಿಸಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

ಸೂಚನೆ:
ನೇಮಕಾತಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಸಂಸ್ಥೆಯ ವೆಬ್‌ನಲ್ಲಿ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಓದಿಕೊಳ್ಳುವಂತೆ ಸೂಚಿಸಲಾಗಿದೆ.