ಅಗ್ಗದ ದರದಲ್ಲಿ ವಿಮಾನ ಪ್ರಯಾಣ?ಕೇವಲ 99 ರೂ. ಗೆ ಏರ್ ಏಷ್ಯಾ ವಿಮಾನದಲ್ಲಿ ದೇಶದ 7 ಪ್ರಮುಖ ನಗರಗಳಿಗೆ ಹೋಗಬಹುದ??

1
1766

ಭಾರತದಲ್ಲಿ ವಿಮಾನ ಪ್ರಯಾಣವೆಂದರೆ ಸಾಕಷ್ಟು ಜನರಿಗೆ ಇನ್ನು ಆಕಾಶಫಲವಾಗಿದೆ. ವಿಮಾನಯಾನದ ದರ ಕೇಳಿದರೆ ಕೆಲವರು ಅಚ್ಚರಿ ಪಡುತ್ತಾರೆ. ಆದರೆ, ಖಾಸಗಿ ವಿಮಾನಯಾನ ಸಂಸ್ಥೆಯೊಂದು ಹಬ್ಬ ಹಾಗು ರಜಾದಿನಗಳ ಕಾರಣ ಒಂದು ಹೊಸ ಕೊಡುಗೆಯನ್ನು ನೀಡಿದೆ. ಇದನ್ನು ಬಳಸಿ ನೀವು ಕೇವಲ 99 ರೂಪಾಯಿಯಲ್ಲಿ ವಿಮಾನಯಾನ ಕೈಗೊಳ್ಳಬಹುದು.

ಹೌದು, ಯಾವಾಗಲೂ ತನ್ನ ಗ್ರಾಹಕರಿಗೆ ಅಗ್ಗದ ದರದಲ್ಲಿ ವಿಮಾನ ಸೇವೆ ಒದಗಿಸುತ್ತಿದ್ದ, ಏರ್ ಏಷ್ಯಾ ವಿಮಾನ ಸಂಸ್ಥೆ ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಹಬ್ಬ ಹಾಗು ಸಾರ್ವಜನಿಕ ರಜಾ ದಿನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ದೇಶದ ಪ್ರಮುಖ ಏಳು ನಗರಗಳಾದ ಬೆಂಗಳೂರು, ಹೈದರಾಬಾದ್‌, ಕೊಚ್ಚಿ, ಕೊಲ್ಕತ್ತಾ, ನವದೆಹಲಿ, ಪುಣೆ ಮತ್ತು ರಾಂಚಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಕೇವಲ 99 ರೂ. ಗೆ ಏರ್ ಟಿಕೆಟ್ ನೀಡುತ್ತಿದೆ.

ಏರ್ ಏಷ್ಯಾ ಈ ದರವನ್ನು ಜನವರಿ 15 ರಿಂದ ಜನವರಿ 21 ರ ತನಕ ಈ ಕೊಡುಗೆಯ ಮೂಲಕ ಫ್ಲೈಟ್ ಬುಕ್ ಮಾಡುವ ಸೌಲಭ್ಯ ನೀಡಿದೆ. ಈ ಕೊಡುಗೆಯನ್ನು ಬಳಸಿಕೊಂಡು ಜನವರಿ 15 ರಿಂದ ಜುಲೈ 31 ರೊಳಗೆ ಬೆಂಗಳೂರು, ಹೈದರಾಬಾದ್‌, ಕೊಚ್ಚಿ, ಕೊಲ್ಕತ್ತಾ, ನವದೆಹಲಿ, ಪುಣೆ ಮತ್ತು ರಾಂಚಿಗೆ ಕೇವಲ 99 ರು. ಗೆ ಪ್ರಯಾಣ ಮಾಡಬಹುದಾಗಿದೆ.

ಇನ್ನು ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಮಾಡುವ ಪ್ರಯಾಣಿಕರನ್ನು ತನ್ನತ್ತ ಸೆಳೆಯಲು, ಪ್ರಮುಖ 10 ಟೂರಿಸ್ಟ್ ದೇಶಗಳಾದ ಆಕ್ಲೆಂಡ್‌‌, ಬಾಲಿ, ಬ್ಯಾಂಕಾಕ್‌‌, ಕೌಲಾಲಂಪುರ್‌‌, ಮೆಲ್ಬೋರ್ನ್, ಸಿಂಗಾಪುರ ಮತ್ತು ಸಿಡ್ನಿ ಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಕೇವಲ 1499 ರೂ. ಗೆ ಏರ್ ಟಿಕೆಟ್ ನೀಡುತ್ತಿದೆ.