ನಿಮ್ಮ ಜೀವನವನ್ನ ಬದಲಿಸೋ ಈ ಗಿಡಗಳು

0
1236

ನಾವು ಜೀವಿಸಲು ಪ್ರಮುಖವಾಗಿ ಬೇಕಾಗಿರುವ ಅಂಶಗಳಲ್ಲಿ ಗಾಳಿಯೂ ಸಹ ಒಂದು. ಗಾಳಿಯಿಲ್ಲದಿದ್ದರೆ ಮನುಷ್ಯನೇ ಅಲ್ಲ ಸಕಲ ಜೀವರಾಶಿಗಳೂ ಬದುಕಿ ಉಳಿಯಲಾರವು. ಒಂದು ಕಾಲದಲ್ಲಿ ಎಲ್ಲಿ ನೋಡಿದರೂ ಮರ,ಗಿಡಗಳು ಕಾಣುತ್ತಿದ್ದವು. ಅಡವಿಗಳಿದ್ದವು.ಇದರಿಂದಾಗಿ ನಮಗೆ ಉಸಿರಾಡಲು ಸ್ವಚ್ಛವಾದ ಗಾಳಿ ದೊರೆಯುತ್ತಿತ್ತು. ಈಗ ಸ್ಥಿತಿ ಸಂಪೂರ್ಣ ಬದಲಾಗಿದೆ. ಮಾಲಿನ್ಯವೆಂಬ ರಾಕ್ಷಸ ಬಾಯ್ದೆರೆದು ಕುಳಿತಿದ್ದಾನೆ. ಇದರಿಂದಾಗಿ ನಮಗೆ ಶುದ್ಧವಾದ ಗಾಳಿ ದೊರೆಯತ್ತಲೇಯಿಲ್ಲ. ವಾಯು ಮಾಲಿನ್ಯದಿಂದಾಗಿ ನಾವು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಆದರೆ ಕೆಳಗೆ ತಿಳಿಸಲಾದ ಆರು ಗಿಡಗಳನ್ನು ನಮ್ಮ ಮನೆಗಳಲ್ಲಿ ಬೆಳೆಸಿದರೆ, ನಮಗೆ ಶುದ್ಧವಾದ ಗಾಳಿ ದೊರೆಯುವುದಲ್ಲದೆ, ಪರಿಸರದಲ್ಲಿರುವ ಧೂಳು,ಸೂಕ್ಷ್ಮ ಕಣಗಳು,ಫಿಲ್ಟರ್ ಆಗುತ್ತವೆ. ಇದರಿಂದಾಗಿ ಶುದ್ಧವಾದ ಆಕ್ಸಿಜನ್ ಲಭಿಸುತ್ತದೆ. ಈ ಗಿಡಗಳು ಚಿಕ್ಕದಾಗಿರುವುದರಿಂದ , ಕಡಿಮೆ ಪ್ರದೇಶದಲ್ಲಿ ಇವುಗಳನ್ನು ಬೆಳೆಸಬಹುದು. ಆ ಗಿಡಗಳು ಯಾವುವೆಂದು ತಿಳಿದುಕೊಳ್ಳೋಣ.

 

ಅಲೋವೇರ(Aloevera)
ವಾತಾವರಣದಲ್ಲಿರುವ ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೋನಾಕ್ಸೈಡ್, ಫಾರ್ಮಾಲ್ಡಿಹೈಡ್ ಮುಂತಾದ ವಿಪದಾರ್ಥಗಳನ್ನು ಅಲೋವೇರ ತೊಲಗಿಸಿ ಗಾಳಿಯನ್ನು ಶುದ್ಧೀಕರಿಸುತ್ತದೆ. ಇದರಿಂದಾಗಿ ನಮಗೆ ಶುದ್ಧವಾದ ಆಕ್ಸಿಜನ್ ದೊರೆಯುತ್ತದೆ.
ಫಿಕಸ್(Ficus)
ಫಿಕಸ್ ಎಲಸ್ಟಿಕಾ (Ficus Elastica) ಎಂದು ಕರೆಯಲ್ಪಡುವ ಈ ಗಿಡಕ್ಕೆ ಸೂರ್ಯ ರಶ್ಮಿಯ ಅಗತ್ಯವಿಲ್ಲ. ಕೇವಲ ಬೆಳಕಿನಿಂದಲೇ ಬೆಳೆಯುತ್ತದೆ. ವಾತಾವರಣದಲ್ಲಿರುವ ಫಾರ್ಮಾಲ್ ಡಿಹೈಡ್ ಅನ್ನುಈ ಗಿಡ ಹೀರಿಕೊಳ್ಳುತ್ತದೆ. ಈ ಗಿಡದಿಂದ ಮಕ್ಕಳು,ಸಾಕುಪ್ರಾಣಿಗಳು ದೂರವಿರುವುದು ಒಳ್ಳೆಯದು .ಇಲ್ಲವಾದಲ್ಲಿ ಅಲರ್ಜಿ ವುಂಟಾಗುತ್ತದೆ.
ಐವೀ(Ivy)
ಹೆಡೆರಾಹೀಲಿಕ್ಸ್(hedera Helix) ಎಂದು ಕರೆಯಲ್ಪಡುವ ಐವೀ ಗುಂಪಿಗೆ ಸೇರಿದ ಈ ಗಿಡಗಳು, ವಾತಾವರಣದಲ್ಲಿರುವ ವಿಷಾನಿಲಗಳನ್ನು ಶೇ 60 ವರೆಗೆ ಕಡಿಮೆಗೊಳಿಸುತ್ತವೆ. ಈ ಗಿಡವನ್ನು ಕೇವಲ 6 ಗಂಟೆಗಳ ಕಾಲ ಮನೆಯಲ್ಲಿರಿಸಿದರೆ, ಮನೆಯಲ್ಲಿರುವ ಗಾಳಿ ಶುದ್ಧವಾಗುತ್ತದೆ. ಮನೆಯಲ್ಲಿಯೇ ಬೆಳೆಸಿಟ್ಟುಕೊಂಡರೆ, ನಮ್ಮ ಪರಿಸರದಲ್ಲಿರುವ ಗಾಳಿ ಎಷ್ಟು ಶುದ್ಧವಾಗುತ್ತದೆಂದು ಇದರಿಂದ ತಿಳಿಯುತ್ತದೆ.

ಸ್ಪೈಡರ್ ಪ್ಲಾಂಟ್ (Spider Plant)
ಈ ಗಿಡವನ್ನು ಕ್ಲೋರೋಪೈಟಮ್ಕೋಮೋಸಮ್(Chlorophytum Comosum) ಎಂದೂ ಸಹ ಕರೆಯುತ್ತಾರೆ. ಕತ್ತಲೆಯಲ್ಲೂ ಸಹ ಈ ಗಿಡ ಬೆಳೆಯತ್ತದೆ. ಗಾಳಿಯಲ್ಲಿರುವ ಕಾರ್ಬನ್ ಮೋನಾಕ್ಷೈಡ್, ಫಾರ್ಮಾಲ್ ಡಿ ಹೈಡ್,ಗ್ಯಾಸೋಲಿನ್ ಮೊದಲಾದವುಗಳನ್ನು ಈ ಗಿಡ ಫಿಲ್ಟರ್ ಮಾಡುತ್ತದೆ. ಈ ಗಿಡದ ಸುತ್ತಲೂ ಸುಮಾರು 200 ಚದರಡಿಗಳ ವಿಸ್ತೀರ್ಣದಲ್ಲಿರುವ ಗಾಳಿಯನ್ನು ಶುದ್ಧವಾಗಿಸುತ್ತದೆ.

ಸ್ನೇಕ್ ಪ್ಲಾಂಟ್(Snake Plant)
Sansevieria Trifaciata Laurentil ಎಂದೂ ಸಹ ಈ ಗಿಡವನ್ನು ಕರೆಯುತ್ತಾರೆ. ಈ ಗಿಡವೂ ಸಹ ಕತ್ತಲೆಯಲ್ಲೂ ಬೆಳೆಯುತ್ತದೆ. ವಾತಾವರಣದಲ್ಲಿರುವ ವಿಷಗಾಳಿಯನ್ನು ನಿರ್ಮೂಲನ ಮಾಡುತ್ತದೆ. ಮಲಗುವ ಕೋಣೆಯಲ್ಲಿ ಈ ಗಿಡವನ್ನು ಇರಿಸಿಕೊಂಡಲ್ಲಿ, ಶುದ್ಧವಾದ ಗಾಳಿಯನ್ನು ರಾತ್ರಿಯೆಲ್ಲಾ ಸೇವಿಸಬಹುದು.
ಪೀಸ್ ಲಿಲ್ಲೀಸ್(Peace Lillies)
ಈ ಗಿಡವನ್ನು Mauna Loa Spathiphillum ಎಂಬ ಹೆಸರಿನಿಂದಲೂ ಕರೆಯುತ್ತಾರೆ. ವಾತಾವರಣದಲ್ಲಿರುವ ರಾಸಾಯನಿಕ ಪದಾರ್ಥಗಳನ್ನು ತೊಲಗಿಸುತ್ತದೆ. ಗಾಳಿಯನ್ನು ಶುದ್ಧಿಮಾಡುತ್ತದೆ.
ಮೇಲೆ ತಿಳಿಸಲಾದ ಗಿಡಗಳನ್ನು ಪ್ರಮುಖ ಅಂತರಿಕ್ಷ ಸಂಶೋದನಾ ಸಂಸ್ಥೆಯಾದ ನಾಸಾ ಸೂಚಿಸಿದೆ. ಇವುಗಳಲ್ಲಿ ಯಾವ ಗಿಡವನ್ನು ಬೆಳೆಸಿದರೂ ವಾತಾವರಣದಲ್ಲಿರುವ ಗಾಳಿ ಶುದ್ಧವಾಗುತ್ತದೆ. ಶುದ್ಧವಾದ ಆಕ್ಸಿಜನ್ ಲಭಿಸುತ್ತದೆ. ಆದರೆ,ಒಂದಕ್ಕಿಂತಲೂ ಹೆಚ್ಚಿಗೆ ಗಿಡಗಳನ್ನು ಬೆಳೆಸುವವರು ಗಿಡಗಳ ನಡುವೆ 40 ಅಡಿಗಳ ಅಂತರವಿರಿಸಬೇಕು. ಇದರಿಂದ ಗಾಳಿ ಹೆಚ್ಚಿಗೆ ಫಿಲ್ಟರಾಗುತ್ತದೆ.