ಹಿರಿಯ ನಾಗರಿಕರೇ ವಿಮಾನ ಪ್ರಯಾಣ ದುಬಾರಿ ಅಂತ ಹೋಗದಿರಬೇಡಿ, ನಿಮಗೆ ಈ ಏರ್ಲೈನ್-ನಲ್ಲಿ ಶೇಕಡಾ 50% ರೀಯಾಯತಿ ಇದೆ!!

0
529

ನಮ್ಮ ಭಾರತ ಹಿಂದೂ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಇದೇ ಕಾರಣಕ್ಕಾಗಿಯೇ ನಮ್ಮಲ್ಲಿ ಹಿರಿಯ ನಾಗರಿಕರಿಗೆ ಹಲವು ಸೌಲಭ್ಯಗಳನ್ನು ಕೊಡಲಾಗಿದೆ. ಭಾರತದಲ್ಲಿ ನಿವೃತ್ತರಿಗೆ ಉತ್ತೇಜನ ನೀಡುವಂತೆ ಏನೆಲ್ಲಾ ಬರುತ್ತಿದೆ. ಅದರಲ್ಲಿ ಬಹುಪಾಲು ಬ್ಯಾಂಕ್‌ಗಳಲ್ಲಿ, ಬಸ್‌, ರೈಲ್ವೆ ಟಿಕೆಟ್‌ ದರದಲ್ಲಿ ರಿಯಾಯಿತಿ ಮೊದಲಾದ ಅನುಕೂಲಗಳನ್ನು ನಾವು ಕಾಣಬಹುದು. ಇದೇ ಕಾರಣಕ್ಕೆ ಏರ್ ಇಂಡಿಯಾ ಭಾರತದಲ್ಲಿನ ಹಿರಿಯ ನಾಗರಿಕರಿಗೆ ವಿಮಾನ ಪ್ರಯಾಣದಲ್ಲಿ ರಿಯಾಯಿತಿ ನೀಡುವ ಭರ್ಜರಿ ಕೊಡುಗೆಯನ್ನು ಪ್ರಕಟಿಸಿದೆ.

Also read: ಕೆ.ಎಸ್.ಆರ್.ಟಿ.ಸಿ. ಬಸ್-ಗಳಲ್ಲಿ ಶೇಕಡಾ 25% ರಿಯಾಯಿತಿ ಪಡೆಯುವುದು ಹೇಗೆ??

ಹಿರಿಯ ನಾಗರಿಕರ ಸಮಸ್ಯೆಯನ್ನು ಮನಗಂಡ ಏರ್ ಇಂಡಿಯಾ ಕಂಪನಿ ಈ ರಿಯಾಯಿತಿಯನ್ನು ನೀಡಿ ಹಿರಿಯರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇನ್ನು ಮುಂದೆ ಎಕಾನಮಿ ದರ್ಜೆಯಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರು ಇನ್ನು ಮುಂದೆ ಏರ್ ಇಂಡಿಯಾದಲ್ಲಿ ಮೂಲ ಟಿಕೆಟ್ ದರದಲ್ಲಿ ಅರ್ಧದಷ್ಟು ಪಾವತಿಸಿದರೆ ಸಾಕು.

ರಿಯಾಯಿತಿಯ ಲಾಭ ಪಡೆಯುವುದು ಹೇಗೆ?

ಈ ರಿಯಾಯಿತಿಯನ್ನು ಬಯಸುತ್ತಿರುವ ವ್ಯಕ್ತಿಯು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು, ಮತ್ತು ಅದನ್ನು ಪರಿಶೀಲಿಸಲು ಮಾನ್ಯವಾದ ಸರ್ಕಾರಿ ಗುರುತಿಸುವಿಕೆ ಚೀಟಿಯನ್ನು ಹೊಂದಿರಬೇಕು. ಭಾರತದ ಒಳಭಾಗದಲ್ಲಿ ಎಲ್ಲಿ ಬೇಕಾದರೂ ಹಿರಿಯ ನಾಗರಿಕರು ಅರ್ಧ ಟಿಕೆಟ್ ಬೆಲೆ ಪಾವತಿಸಿ ಪ್ರಯಾಣಿಸಬಹುದು. ಪ್ರಯಾಣದ ಏಳು ದಿನಗಳ ಮುಂಚೆ ಟಿಕೆಟ್ ಖರೀದಿಸಬೇಕು.

ಯಾವ ಯಾವ ಚೀಟಿಗಳನ್ನು ತೋರಿಸಬಹುದು?

ಓಟರ್ ಐಡಿ, ಪಾಸ್‌ಪೋರ್ಟ್, ಡಿಎಲ್, ಏರ್ ಇಂಡಿಯಾ ನೀಡಿದ ಹಿರಿಯ ನಾಗರಿಕರ ಗುರುತಿನ ಚೀಟಿ ಮುಂತಾದ ವಯಸ್ಸಿನ ದಾಖಲೆಯನ್ನು ಖಚಿತಪಡಿಸುವ ಅಧಿಕೃತ ಗುರುತಿನ ಚೀಟಿ ಮುಂತಾದ ಚೀಟಿಗಳನ್ನು ತೋರಿಸಿದಲ್ಲಿ ರಿಯಾಯಿತಿ ಲಭಿಸುತ್ತದೆ.

ಇದರ ಜೊತೆಗೆ ಚೆಕ್ ಇನ್ ಮತ್ತು ಬೋರ್ಡಿಂಗ್ ಗೇಟ್‌ಬಳಿ ಗುರುತಿನ ದಾಖಲೆ ನೀಡದೆ ಇದ್ದಲ್ಲಿ ವಿಮಾನ ಏರುವುದಕ್ಕೆ ಅವಕಾಶ ನೀಡಲಾಗುವುದಿಲ್ಲ. ಏರ್ ಇಂಡಿಯಾದ ಹಿರಿಯ ನಾಗರಿಕರಿಗೆ ಈ ವಿಶೇಷ ರಿಯಾಯಿತಿ ವಯಸ್ಸಾದ ಜನರ ಜೀವನ ದೇಶದಲ್ಲಿ ಸುಲಭವಾಗಿಸಾಲು ನೀಡಲಾಗುತ್ತಿದೆ.