ಭಾರತದಲ್ಲಿ ಸಿಗರೇಟ್ ಗೆ ಬಲಿಯಾದವರಿಗಿಂತ, ವಾಯುಮಾಲಿನ್ಯಕ್ಕೆ ಬಲಿಯಾದವರ ಸಂಖ್ಯೆಯೇ ಹೆಚ್ಚು!

0
131

ಜನಸಂಖ್ಯೆ ಹೆಚ್ಚಾದಂತೆ ಮಾಲಿನ್ಯ ಹೆಚ್ಚುತ್ತಿದೆ. ವಾಯು ಮಾಲಿನ್ಯ ಭಾರತದಲ್ಲಿ ಹೆಚ್ಚುತ್ತಿದೆ. ಇದರ ಬಗ್ಗೆ ವರದಿಯೊಂದು ಹೊರಬಂದಿದ್ದು ಭಾರತದಲ್ಲಿ ಸಿಗರೇಟ್ ಗೆ ಬಲಿಯಾದವರಿಗಿಂತ, ವಾಯು ಮಾಲಿನ್ಯಕ್ಕೆ ಬಲಿಯಾದವರ ಸಂಖ್ಯೆಯೇ ಹೆಚ್ಚು ಎಂದು ವರದಿ ತಿಳಿಸಿದ್ದು ಆತಂಕ ಸೃಷ್ಟಿಯಾಗಿದೆ. ಅಷ್ಟೇ ಅಲ್ಲದೆ ಹಲವು ರೋಗಗಳು ಕಂಡು ಬರುತ್ತಿವೆ. 2017ರಲ್ಲಿ ದೇಶದಲ್ಲಿ 12 ಲಕ್ಷ ಮಂದಿ ವಾಯು ಮಾಲಿನ್ಯದಿಂದಲೇ ಮೃತಪಟ್ಟಿದ್ದಾರೆ.

Also read: ನರೇಂದ್ರ ಮೋದಿ ಸರ್ಕಾರದಿಂದ ಕೇಂದ್ರ ನೌಕರರಿಗೆ ಗುಡ್ ನ್ಯೂಸ್: ಶೇ. 3ರಷ್ಟು ತುಟ್ಟಿ ಭತ್ಯೆ ಹೆಚ್ಚಳ..

ಹೌದು ಅಮೆರಿಕ ಮೂಲದ ಹೆಲ್ತ್ ಎಫೆಕ್ಟ್ ಇನ್ ಸ್ಟಿಟೂಟ್ ಸಂಸ್ಥೆಯ ದಿ ಸ್ಟೇಟ್ ಆಫ್ ಗ್ಲೋಬಲ್ ಏರ್ 2019 ವರದಿಯಲ್ಲಿ ಈ ಕುರಿತು ಹೇಳಲಾಗಿದ್ದು, 2017ರಲ್ಲಿ ಭಾರತದಲ್ಲಿ ಸಿಗರೇಟ್ ಸೇದಿ ಬಲಿಯಾದವರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜನರು ವಾಯುಮಾಲೀನ್ಯಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. 2017ರಲ್ಲಿ ವಾಯುಮಾಲೀನ್ಯದಿಂದಾಗಿ 1.2 ಮಂದಿ ತಮ್ಮ ಜೀವಿತಾವಧಿಗಿಂತಲೂ ಮುಂಚಿತವಾಗಿಯೇ ಮೃತಪಟ್ಟಿದ್ದು ಅಂತೆಯೇ ವಾಯುಮಾಲೀನ್ಯದಿಂದಾಗಿ ಭಾರತದಲ್ಲಿ ಮನುಷ್ಯರ ಜೀವಿತಾವಧಿಯಲ್ಲಿ ಬರೊಬ್ಬರಿ 20 ತಿಂಗಳ ಕಡಿತವಾಗಿದೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ವಾಯು ಮಾಲಿನ್ಯದಿಂದ 2017ರಲ್ಲಿ ವಾಯು ಮಾಲಿನ್ಯದ ಪರಿಣಾಮ ಪಾರ್ಶ್ವವಾಯು, ಡಯಾಬಿಟಿಸ್, ಹೃದಯಾಘಾತ, ಶ್ವಾಸಕೋಶ ಕ್ಯಾನ್ಸರ್ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ವಿಶ್ವಾದ್ಯಂತ 50 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ. ಸುಮಾರು 5 ಮಿಲಿಯನ್ ಮಂದಿ ಸ್ಟ್ಕೋರ್ಕ್ಸ್ (ಲಕ್ವಾ) ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಸಮಸ್ಯೆಗಳು, ಶ್ವಾಸಕೋಶದ ಕ್ಯಾನ್ಸರ್ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದಾರೆ. ಅಂತೆಯೇ 3 ಮಿಲಿಯನ್ ಮಂದಿ ನೇರವಾಗಿ ವಾತವಾರಣದ ಗಾಳಿಯಲ್ಲಿನ ವಿಷಕಾರಕ ಪದಾರ್ಥ ಪಿಎಂ 2.5 ನಿಂದ ಸಾವನ್ನಪ್ಪಿದ್ದಾರೆ.

source: b-townyouth.co.uk

Also read: ನರೇಂದ್ರ ಮೋದಿ ಸರ್ಕಾರದಿಂದ ಕೇಂದ್ರ ನೌಕರರಿಗೆ ಗುಡ್ ನ್ಯೂಸ್: ಶೇ. 3ರಷ್ಟು ತುಟ್ಟಿ ಭತ್ಯೆ ಹೆಚ್ಚಳ..

ಇದು ಬರಿ ಭಾರತದಲ್ಲಿ ಮಾತ್ರವಲ್ಲದೆ. ಚೀನಾದಲ್ಲಿ ಇದರ ಪರಿಣಾಮ ಹೆಚ್ಚುತ್ತಿದೆ. ಆದಕಾರಣಕ್ಕೆ ಪಿಎಂ 2.5 ನಿಂದಾಗಿ ಚೀನಾದಲ್ಲೂ 3 ಮಿಲಿಯನ್ ಮಂದಿ ಸಾವಪ್ಪನ್ನಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತ ಮತ್ತು ಚೀನಾ ದೇಶಗಳಲ್ಲಿ ಜನಿಸುತ್ತಿರುವ ಮಕ್ಕಳ ಜೀವಿತಾವಧಿಯಲ್ಲಿ ಕನಿಷ್ಠ 20 ತಿಂಗಳು ಕಡಿತವಾಗುತ್ತಿದೆ. ಇದರ ಕಾರಣದಿಂದ ವರದಿಯಲ್ಲಿ ಸಲ್ಲಿಸಿರುವ ದೇಶದಲ್ಲಿ ಕೂಡ ಆಗುವ ವಾಯುಮಾಲೀನ್ಯಕ್ಕೆ ಭಾರತ ಮತ್ತು ಚೀನಾ ದೇಶಗಳೇ ಕಾರಣ ಎಂದು ಟೀಕಿಸಿವೆ. ಅಷ್ಟೇಅಲ್ಲದೆ ವಾಯುಮಾಲೀನ್ಯ ನಿಯಂತ್ರಣಕ್ಕೆ ಈ ದೇಶಗಳು ಹಲವು ಕ್ರಮಗಳನ್ನು ಕೈಗೊಂಡಿವೆ.

ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಸಾವು:

Also read: ನರೇಂದ್ರ ಮೋದಿ ಸರ್ಕಾರದಿಂದ ಕೇಂದ್ರ ನೌಕರರಿಗೆ ಗುಡ್ ನ್ಯೂಸ್: ಶೇ. 3ರಷ್ಟು ತುಟ್ಟಿ ಭತ್ಯೆ ಹೆಚ್ಚಳ..

ಮನೆಯೊಳಗಿನ ವಾಯು ಮಾಲಿನ್ಯ(ಇನ್‍ಡೋರ್ ಪಲ್ಯೂಷನ್)ದಿಂದಾಗಿ ಭಾರತದಲ್ಲಿ 2015ರ ಅವಧಿಯಲ್ಲಿ ಸುಮಾರು 1.24 ಲಕ್ಷ ಜನ ಸಾವನ್ನಪ್ಪಿದ್ದು, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿಯೇ ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸಿವೆ ಎಂಬ ಕಳವಳಕಾರೀ ವಿಷಯವನ್ನು ಹೆಸರಾಂತ ಮೆಡಿಕಲ್ ಜರ್ನಲ್(ವೈದ್ಯಕೀಯ ನಿಯತಕಾಲಿಕೆ) ಲ್ಯಾನ್ಸೆಟ್ ಬಯಲು ಮಾಡಿದೆ. ವಾಯು ಮಾಲಿನ್ಯದ ಕುರಿತಂತೆ ಸರ್ಕಾರಗಳು ಬೊಬ್ಬೆ ಹೊಡೆಯುತ್ತಿರುವುದರ ನಡುವೆಯೇ ಮೆಡಿಕಲ್ ಜರ್ನಲ್‍ನ ಈ ವರದಿ ಜನರನ್ನು ದಿಗಿಲುಗೊಳ್ಳುವಂತೆ ಮಾಡಿದೆ. ವಿಶೇಷವೆಂದರೆ, ಕಲ್ಲಿದ್ದಲು ಬಳಕೆಯ ಕಾರ್ಖಾನೆಗಳು ಹಾಗೂ ಇತರೆ ಕೈಗಾರಿಕೆಗಳಿಂದುಂಟಾಗುವ ವಾಯು ಮಾಲಿನ್ಯಕ್ಕಿಂತಲೂ ಗ್ರಾಮೀಣ ಪ್ರದೇಶಗಳಲ್ಲಿ ಅಡಿಗೆ ಮಾಡಲು ಒಲೆಗಳಿಗೆ ಉರುವಲಾಗಿ ಬಳಸುವ ಸೌದೆ, ಬೆರಣಿ (ಸೆಗಣಿ ಕುರುಳು)ಗಳಿಂದ ಮನೆಗಳಲ್ಲಿ ಉಂಟಾಗುವ ಹೊಗೆ, ಮಾಲಿನ್ಯದಿಂದಲೇ ಹೆಚ್ಚು ಸಾವುಗಳು ಸಂಭವಿಸಿರುವುದು ಆತಂಕಕ್ಕೀಡು ಮಾಡಿದೆ.