ಮಕ್ಕಳಿಗೆ ಹುಟ್ಟುವಾಗಲೇ ಅಂಗವೈಕಲ್ಯ ಬರಲು ಮುಖ್ಯಕಾರಣ ದೇಶದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವಂತೆ..

0
329

ಜನಸಂಖ್ಯೆ ಬೆಳೆದಂತೆ ವಾಹನಗಳ ಸಂಖ್ಯೆಯಲ್ಲಿ ಅಧಿಕವಾಗಿ ಹೆಚ್ಚಳವಾಗುತ್ತಿದೆ. ಅದರಂತೆ ಹೆಚ್ಚು ಹೊಗೆಯನ್ನು ಉಗುಳುವ ಕಾರ್ಖಾನೆಗಳು ಹೆಚ್ಚುತ್ತಿದ್ದು ಇವೆಲ್ಲವೂ ದಿನದ 24 ಘಂಟೆಗಳು ಹೊಗೆಯನ್ನು ಬಿಡುಗಡೆ ಮಾಡುತ್ತಿವೆ, ಇದಲ್ಲದೆ ಜಲ ಮಾಲಿನ್ಯ, ವಾಯು ಮಾಲಿನ್ಯ ಕೂಡ ಹೆಚ್ಚಾಗುತ್ತಿದ್ದು ಜನರ ಆರೋಗ್ಯದ ಮೇಲೆ ವ್ಯಕ್ತಿರಿಕ್ತ ಪರಿಣಾಮ ಬೀರುತ್ತಿದೆ. ಈ ಮಾಲಿನ್ಯದಿಂದ ಪ್ರತಿವರ್ಷವೂ ಸಾಕಷ್ಟು ಪ್ರಮಾಣದಲ್ಲಿ ಜನರು ಹಲವು ಕಾಯಿಲೆಗಳಿಗೆ ತುತ್ತಾಗಿ ಮರಣ ಹೊಂದುತ್ತಿದ್ದಾರೆ. ಅಷ್ಟೇ ಅಲ್ಲದೆ ಹುಟ್ಟುವ ಮಕ್ಕಳು ಕೂಡ ಅಂಗವಿಕಲರಾಗಲು ಕಾರಣವಾಗಿದೆ ಎಂದು ಅಧ್ಯಯನ ಒಂದು ತಿಳಿಸಿದೆ.

Also read: ಭಾರತದಲ್ಲಿ ಸಿಗರೇಟ್ ಗೆ ಬಲಿಯಾದವರಿಗಿಂತ, ವಾಯುಮಾಲಿನ್ಯಕ್ಕೆ ಬಲಿಯಾದವರ ಸಂಖ್ಯೆಯೇ ಹೆಚ್ಚು!

ಹೌದು ಹೊಸ ಸಂಶೋಧನೆ ಹೇಳುವ ಪ್ರಕಾರ ಕೈಗಾರಿಕೆ ಇತ್ಯಾದಿಗಳಿಂದ ವಾಯು ಮಾಲಿನ್ಯವು ಅತಿಯಾಗುತ್ತಿದೆ. ಆದರೆ ವಾಯು ಮಾಲಿನ್ಯಕ್ಕೆ ಒಗ್ಗಿಕೊಂಡರೆ ಆಗ ಹುಟ್ಟುವ ಮಕ್ಕಳಲ್ಲಿ ಅಂಗ ವೈಕಲ್ಯವು ಕಾಣಿಸಿಕೊಳ್ಳುವುದು ಎಂದು ಹೊಸ ಅಧ್ಯಯನ ವರದಿಯೊಂದು ಹೊರಡಿಸಿದೆ. ಅದರಂತೆ ವಿಶ್ವ ಆರೋಗ್ಯ ಸಂಸ್ಥೆಯು ಹೇಳುವ ಪ್ರಕಾರ ವಿಶ್ವದಲ್ಲಿ ಪ್ರತೀ ಹತ್ತು ಮಂದಿಯಲ್ಲಿ 9 ಮಂದಿಯು ತುಂಬಾ ಕಲುಷಿತವಾದ ಗಾಳಿಯನ್ನು ಉಸಿರಾಡುವರು ಮತ್ತು ವಿಶ್ವದಲ್ಲಿ 9 ಸಾವು ಕಲುಷಿತ ಗಾಳಿಯಿಂದಾಗಿ ಆಗುತ್ತದೆ. ಇದರಿಂದಾಗಿ ಸುಮಾರು 7 ಮಿಲಿಯನ್ ಅಕಾಲಿಕ ಸಾವು ಸಂಭವಿಸುತ್ತದೆ.

ಏನಿದು ಅಧ್ಯಯನ?

Also read: ಭಾರತದಲ್ಲಿ ಮನೆಯ ಹೊರಗಿನ ವಾಯು ಮಾಲಿನ್ಯಕ್ಕಿಂತ ಮನೆಯ ಒಳಗಿನ ವಾಯುಮಾಲಿನ್ಯವೇ ಹೆಚ್ಚು ಸಾವಿಗೆ ಕಾರಣವಾಗಿದೆಯಂತೆ!!

ನ್ಯಾಷನಲ್ ಅಕಾಡಮಿ ಆಫ್ ಸೈನ್ಸ್ ನಲ್ಲಿ ಪ್ರಕಟಗೊಂಡಿರುವಂತಹ ಅಧ್ಯಯನ ವರದಿಯ ಪ್ರಕಾರ, ಭ್ರೂಣ ಬದುಕುಳಿಯುವ ಸಾಧ್ಯತೆಗಳು ತುಂಬಾ ಕಡಿಮೆ ಆಗಿದೆ ಮತ್ತು ಗರ್ಭಾವಸ್ಥೆಯ ದರಗಳನ್ನು ಕಡಿಮೆ ಮಾಡಿದೆ. ಇದರಿಂದಾಗಿ ತುಂಬಾ ಸಣ್ಣ ದೇಹದ ತೂಕ, ಮೆದುಳಿಗೆ ಹಾನಿ, ಹೃದಯ ಮತ್ತು ಇತರ ಕೆಲವೊಂದು ಅಂಗಾಂಗಗಳಿಗೆ ಕೂಡ ಹಾನಿಯಾಗಿರುವುದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಕೆಲವೊಂದು ಹೆಣ್ಣು ಇಲಿಗಳ ಮೇಲೆ ನಡೆಸಿರುವಂತಹ ಸಂಶೋಧನೆ ಮತ್ತು ಪರೀಕ್ಷೆಯಿಂದಾಗಿ ವಿಶ್ವದಲ್ಲಿ ಹೆಚ್ಚಾಗಿ ವಾಯುಮಾಲಿನ್ಯದ ವೇಳೆ ಕಂಡುಬರುವಂತಹ ಅಮೋನಿಯಂ ಸಲ್ಫೇಟ್ ನ್ನು ಇಲಿಗಳ ಮೇಲೆ ಪ್ರಯೋಗ ಮಾಡಿದ ವೇಳೆ ಅದರಿಂದ ತುಂಬಾ ವ್ಯತಿರಿಕ್ತ ಆರೋಗ್ಯ ಪರಿಣಾಮಗಳು ಕಂಡುಬಂದಿದೆ.

Also read: ಮಳೆಗಾಲ ಚಳಿಗಾಲ ಬಂದ್ರೆ ಸಾಕು ಅಸ್ತಮಾ ರೋಗಿಗಳಿಗೆ ಉಬ್ಬಸದಿಂದ ಹೇಗಪ್ಪಾ ಪಾರಾಗೋದು ಅನ್ನೋದೇ ದೊಡ್ಡ ಸಮಸ್ಯೆ.. ಯೋಚ್ನೆ ಮಾಡ್ಬೇಡಿ ಅದಕ್ಕಿಲ್ಲಿದೆ ಮನೆಮದ್ದು..

ಕಲ್ಲಿದ್ದಲನ್ನು ಉರಿಸಿದ ವೇಳೆ ಸಲ್ಫೇಟ್ ಉತ್ಪತ್ತಿ ಆಗುವುದು. ಕಲ್ಲಿದ್ದಲು ಇಂದಿಗೂ ಹೆಚ್ಚಿನ ದೇಶಗಳಲ್ಲಿ ಇಂಧನದ ಮೂಲವಾಗಿದೆ. ಇದು ಅಭಿವೃದ್ಧಿ ಶೀಲ ಮತ್ತು ಅಭಿವೃದ್ಧಿ ಹೊಂದಿದ ಹೀಗೆ ಎರಡೂ ದೇಶಗಳಲ್ಲೂ ಬಳಕೆ ಮಾಡಲಾಗುತ್ತದೆ. ಅಮೋನಿಯಂನ್ನು ಅಮೋನಿಯಾ ದಿಂದ ಪಡೆಯಲಾಗುತ್ತದೆ. ಇದನ್ನು ಹೆಚ್ಚಾಗಿ ಕೃಷಿ, ಅಟೋಮೊಬೈಲ್ ಗಳಲ್ಲಿ ಬಳಕೆ ಮಾಡಲಾಗುತ್ತದೆ. ಇದರಿಂದಾಗಿ ಇದು ಇಂದಿನ ದಿನಗಳಲ್ಲಿ ವಿಶ್ವದೆಲ್ಲೆಡೆಯಲ್ಲೂ ಕಂಡು ಬರುತ್ತಿದೆ.

ಚಳಿಗಾಲದಲ್ಲಿ ಹೆಚ್ಚು ಮಾಲಿನ್ಯ?

ಭಾರತ ಮತ್ತು ಚೀನಾದಲ್ಲಿ ಚಳಿಗಾಲದಲ್ಲಿ ವಾಯುಮಾಲಿನ್ಯವು ಹೆಚ್ಚಾಗುವುದು. ಇಲ್ಲಿ ಒಂದು ಕ್ಯೂಬಿಕ್ ಮೀಟರ್ ಗೆ ಸುಮಾರು ಮೈಕ್ರೋಗ್ರಾಂನಷ್ಟು ಪ್ರಮಾಣವು ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಅಮೋನಿಯಂ ಸಲ್ಫೇಟ್ ತುಂಬಾ ಹಾನಿಕಾರವಲ್ಲ ಎಂದು ಜನರು ತಿಳಿದಿದ್ದಾರೆ. ಸಂಶೋಧನೆಗಳು ಹೇಳುವ ಪ್ರಕಾರ ಇದನ್ನು ಗರ್ಭಿಣಿ ಇಲಿಗಳ ಮೇಲೆ ಪ್ರಯೋಗ ಮಾಡಿದ ವೇಳೆ ಅದು ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ ಎಂದು ಅಮೆರಿಕಾದ ಟೆಕ್ಸಾಸ್ ನ ಎ ಆಂಡ್ ಎಂ ಯೂನಿವರ್ಸಿಟಿಯ ಪ್ರಾಧ್ಯಾಪಕ ರೆನಯಿ ಝಂಗ್ ಹೇಳಿದ್ದಾರೆ. ಈ ಪರಿಣಾಮಗಳಿಗೆ ಏನು ಕಾರಣ ಎಂದು ಇದುವರೆಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ನ್ಯಾನೋ ವಸ್ತುಗಳು ಅಥವಾ ಆಮ್ಲೀಯತೆಯು ಇದಕ್ಕೆ ಕಾರಣವಾಗಿರಬಹುದು ಎಂದು ಝಂಗ್ ಸ್ಪಷ್ಟಪಡಿಸಿದ್ದಾರೆ.