ಭಾರತದಲ್ಲಿ ಮನೆಯ ಹೊರಗಿನ ವಾಯು ಮಾಲಿನ್ಯಕ್ಕಿಂತ ಮನೆಯ ಒಳಗಿನ ವಾಯುಮಾಲಿನ್ಯವೇ ಹೆಚ್ಚು ಸಾವಿಗೆ ಕಾರಣವಾಗಿದೆಯಂತೆ!!

0
432

ಭಾರತದಲ್ಲಿ ವಾಯು ಮಾಲಿನ್ಯದಿಂದ ವುಂಟಾದ ಸಾವುಗಳಲ್ಲಿ ಹೆಚ್ಚು ಮೃತಪಟ್ಟವರು ಮಹಿಳೆಯರು; ಅದು ಹೇಗೆ ಅಂತ ಈ ಮಾಹಿತಿ ನೋಡಿ..

ದೇಶದಲ್ಲಿ ವಾಯುಮಾಲಿನ್ಯದಿಂದ ಹಲವಾರು ರೀತಿಯ ಖಾಯಿಲೆಗಳು ಹರಡುತಿವೆ. ಇದರಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದು ಬರಿ ವಾಹನಗಳಿಂದ ಮತ್ತು ಇಧನ ಸುಡುವಿಕೆಯಿಂದ ಇಂತಹ ಅಪಾಯಗಳು ಸಂಭವಿಸುತ್ತಿಲ್ಲ. ಮನೆಯಲ್ಲಿ ಅಡುಗೆ ಮಾಡಲು ಕಟ್ಟಿಗೆ ಮತ್ತು ಪ್ಲಾಸ್ಟಿಕ್ ಅಂತ ವಸ್ತುಗಳನ್ನು ಒಲೆಯಲ್ಲಿ ಸುಡುವುದರಿಂದ ಅತೀಯಾದ ಅಪಾಯಯುಕ್ತ ಹೊಗೆಯು ಸಾವನ್ನು ತರುತ್ತಿದೆ. ಇದರಿಂದ ಪಂಜಾಬ್. ಹರಿಯಾಣ ನೆರೆಹೊರೆಯ ರಾಜ್ಯಗಳಲ್ಲಿ ರೈತರು ತಮ್ಮ ಹೊಲದಲ್ಲಿ ಬೆಳೆಗಳಿಗೆ ಬೆಂಕಿ ಹಚ್ಚುವುದ್ದನ್ನು ನಿಷೇಧಿಸಲಾಗಿದೆ.

Also read: ಭಾರತದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ, ಅವನತಿಯೆಡೆಗೆ ಮನುಕುಲ!!!

The Lancent Planetary Health ಡಿಸೆಂಬರ್ 2018 ರಂದು ಪ್ರಕಟವಾದ ಒಂದು ಅಧ್ಯಯನದಲ್ಲಿ ತಿಳಿಸಿರುವ ಹಾಗೆ 2017 ರಲ್ಲಿ ಭಾರತದಲ್ಲಿ 9.92 ಮಿಲಿಯನ್ ಸಾವುಗಳಲ್ಲಿ, 1.24 ಮಿಲಿಯನ್ ಜನರು ವಾಯು ಮಾಲಿನ್ಯದಿಂದ ಅನೇಕ ಖಾಯಿಲೆಗಳಿಗೆ ತುತ್ತಾಗಿ ಮೃತಪಟ್ಟಿದ್ದಾರೆ. 0.67 ಮಿಲಿಯನ್ ಸುತ್ತುವರಿದ ಕಣಗಳ ಮಾಲಿನ್ಯದಲ್ಲಿ 0.48 ಮಿಲಿಯನ್ ಮನೆಯಿಂದ ಬಂದ ವಾಯು ಮಾಲಿನ್ಯವಾಗಿದ್ದು, ಇದರಲ್ಲಿ ಸತ್ತವರು 51.4% ಜನರಲ್ಲಿ 70 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಒಟ್ಟು ಜಾಗತಿಕ ಸಾವುಗಳ ಪೈಕಿ 26.2% ರಷ್ಟು ಭಾರತದಲ್ಲಿ ವಾಯು ಮಾಲಿನ್ಯದಿಂದ ಸಾಯಿತ್ತಿದ್ದಾರೆ. ಇದು ಒಟ್ಟು ಜನಸಂಖ್ಯೆಯ 18.1% ರಷ್ಟು ಭಾರತದ ವ್ಯತಿರಿಕ್ತವಾದ ಕೊಡುಗೆಯಾಗಿದೆ.

ಇಂದು ಭಾರತದಲ್ಲಿ ಒಟ್ಟಾರೆ ರೋಗದ ಹೊರೆ, ರಾಜ್ಯಗಳ ಸಾವಿನ ಸಂಖ್ಯೆ ಮತ್ತು ಜೀವಿತಾವಧಿಯ ವಾಯುಮಾಲಿನ್ಯದ ಪ್ರಭಾವದ ಪ್ರಕಾರ. ಗ್ಲೋಬಲ್ ಬರ್ಡನ್ ಅಧ್ಯಯನ 2017 ರಲ್ಲಿ ರಾಜ್ಯ ಮಟ್ಟದ ರೋಗ ಬರ್ಡನ್ ಇನಿಶಿಯೇಟಿವ್ ಪ್ರಕಟಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದೊಂದಿಗೆ ಭಾರತೀಯ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ (PHM) ಮತ್ತು ಆರೋಗ್ಯ ಮೆಟ್ರಿಕ್ಸ್ ಮತ್ತು ಇವಾಲ್ಯೂಷನ್ ಇನ್ಸ್ಟಿಟ್ಯೂಟ್ (IHME) ನ ಭಾರತೀಯ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮತ್ತು 100 ಕ್ಕಿಂತಲೂ ಹೆಚ್ಚು ಸಂಬಂಧಪಟ್ಟ ತಜ್ಞರ ತಂಡಗಳು ಪ್ರಕಟಣೆ ಮಾಡಿವೆ.

Also read: ಅಮೇಜಾನ್‌-ನಲ್ಲಿ ಮಾರಾಟವಾಗುತ್ತಿದೆ ಶುದ್ಧ ಗಾಳಿ; ಇದು ಮಾನವ ಕುಲಕ್ಕೆ ಅವಮಾನದ ಸಂಗತಿ…

ಮನೆಯಲ್ಲಿಯೇ ಹೆಚ್ಚು ವಾಯು ಮಾಲಿನ್ಯ?

ಈ ಪ್ರಕಟಣೆ ಪ್ರಕಾರ ಮನೆಯಲ್ಲಿ ಒಲೆಗೆ ಉಪಯೋಗಿಸುವ ವಸ್ತುಗಳಿಂದ ಹೆಚ್ಚು ವಾಯು ಮಾಲಿನ್ಯವಾಗಿ ಇದು ಸಾವುಗಳಿಗೆ ಕಾರಣವಾಗುತ್ತಿದೆ. ಎಂದು ಅಧ್ಯಯನ ತಿಳಿಸಿದೆ. ಅದರಲ್ಲಿ ಪ್ರಮುಖವಾದವುಗಳೆಂದರೆ ಮರದ ಕಟ್ಟಿಗೆ, ಸಗಣಿ, ಕೃಷಿ ಅವಶೇಷಗಳು, ಕಲ್ಲಿದ್ದಲು ಮತ್ತು ಇದ್ದಿಲು. ಬಳಕೆ ವಾಯು ಮಾಲಿನ್ಯ ವುಂಟು ಮಾಡಿ ಹೆಚ್ಚು ಸಾಯು ತರುತ್ತಿದೆ. ಇವುಗಳು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿಲ್ಲದ ರಾಜ್ಯಗಳಲ್ಲಿ ಅತಿ ಹೆಚ್ಚು ಸಾವುಗಳನ್ನು ನೋಡಬಹುದಾಗಿದೆ. ಭಾರತದ ರಾಷ್ಟ್ರೀಯ ಆಂಬಿಯೆಂಟ್ ಏರ್ ಕ್ವಾಲಿಟಿ ಸ್ಟ್ಯಾಂಡರ್ಡ್ ಶಿಫಾರಸ್ತಿನ ಪ್ರಕಾರ 76.8% ಜನಸಂಖ್ಯೆಯ ವಾರ್ಷಿಕ ತೂಕದ ಸರಾಸರಿ 89 · 9 μg / m³) PM2 · 5 μg / m³ ಗಿಂತ 5 ರಷ್ಟು ಹೆಚ್ಚು ಕಂಡು ಬರುತ್ತಿದೆ.

Also read: ವಾಯು ಮಾಲೀನ್ಯದಿಂದ ಮನಕುಲ ನಾಶ..!

ದೆಹಲಿಯಲ್ಲಿ 2017 ಅತ್ಯಧಿಕ ವಾರ್ಷಿಕ ಜನಸಂಖ್ಯೆಯನ್ನು ಹೊಂದಿರುವ PM2 5 ರಷ್ಟಿತ್ತು, ಉತ್ತರ ಪ್ರದೇಶ, ಬಿಹಾರ್ ಮತ್ತು ಹರಿಯಾಣಗಳ, ಸರಾಸರಿ ಮೌಲ್ಯಗಳು 125 μg / m³ ಗಳಿಗಿಂತ ಹೆಚ್ಚು. 2017 ರಲ್ಲಿ ಇಡಿ ಭಾರತದಲ್ಲಿ ಘನ ಇಂಧನವನ್ನು ಬಳಸುತ್ತಿರುವ ಜನಸಂಖ್ಯೆ ಅನುಪಾತವು 55.5% (54.8-56. 2), ಇದ್ದರೆ ಕಡಿಮೆ ಸಾಮಾಜಿಕ ಅಭಿವೃದ್ಧಿ ಸೂಚ್ಯಂಕದ ರಾಜ್ಯಗಳಲ್ಲಿ ಬಿಹಾರ, ಜಾರ್ಖಂಡ್ ಮತ್ತು ಒಡಿಶಾದ 75% ರಷ್ಟು ಮಿತಿ ಮೀರಿವೆ.

ಭಾರತದ ರಾಜ್ಯಗಳಾದ್ಯಂತ, 2017 ರಲ್ಲಿ ಘನ ಇಂಧನಗಳನ್ನು ಬಳಸುವ ಜನಸಂಖ್ಯೆಯ ಅನುಪಾತವು ರಾಜ್ಯದಲ್ಲಿ 42.9 ಪಟ್ಟು ಅಧಿಕವಾಗಿತ್ತು, 2017 ರಲ್ಲಿ ಭಾರತದ ವಾಯು ಮಾಲಿನ್ಯದಿಂದ ಸಾವುಗಳ ಸಂಖ್ಯೆ ಪುರುಷರಿಗಿಂತ ಮಹಿಳೆಯರಲ್ಲಿ 17·6% ಹೆಚ್ಚಾಗಿದೆ. ತಂಬಾಕು ಬಳಕೆಗೆಯಿಂದ ಬರುವ ಅಂಗವೈಕಲ್ಯಕ್ಕಿಂತ ವಾಯುಮಾಲಿನ್ಯದ ಸೋಂಕು ಹೆಚ್ಚಾಗಿದೆ. ಹಾಗೆಯೇ ಮನೆಯಲ್ಲಿ ಆಗುವ ಮಾಲಿನ್ಯ 482,000 ಸಾವು ಮತ್ತು 21.3 ದಶಲಕ್ಷ ಅಂಗವೈಕಲ್ಯ ಅನಾರೋಗ್ಯಕ್ಕೆ ಕಾರಣವಾಗಿದೆ.