ಜಗತ್ತಿನ ಶೇ.90 ಮಂದಿ ಸೇವಿಸುತ್ತಿದ್ದಾರೆ ಕಲುಷಿತ ಗಾಳಿ

0
540

ವಿಶ್ವದ 10 ಜನರಲ್ಲಿ 9ಮಂದಿ ಕಲುಷಿತ ಗಾಳಿಯನ್ನು ಸೇವಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಘಟನೆ ತಿಳಿಸಿದೆ. ವಾಯು ಮಾಲಿನ್ಯವು ವರ್ಷಕ್ಕೆ 60 ಲಕ್ಷ ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದು ಇದರ ನಿಂತ್ರಣಕ್ಕೆ ಜರೂರತ್ತಾಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದೆ.

ವಾಯು ಮಾಲಿನ್ಯವು ನಗರಗಳಲ್ಲೇ ಹೆಚ್ಚಾಗಿದೆ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಮಾಲಿನ್ಯವು ತೀವ್ರತರನಾದ ಮಟ್ಟದಲ್ಲಿದೆ ಎಂದು ವಿಶ್ವ ಸಂಸ್ಥೆಯ ಜಾಗತಿಕ ಆರೋಗ್ಯ ಸಂಸ್ಥೆಯ ಮುಖ್ಯಸ್ಥೆ ಮರಿಯಾ ನೀರಾ ತಿಳಿಸಿದ್ದಾರೆ.

ಬಡ ರಾಷ್ಟ್ರಗಳಲ್ಲೇ ಹೆಚ್ಚುಕಲುಷಿತ ಗಾಳಿ: ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಬಡ ರಾಷ್ಟ್ರಗಳಲ್ಲೇ ಗಾಳಿ ಹೆಚ್ಚು ಕಲುಷಿತಗೊಂಡಿದೆ. ಆದರೆ ಈ ಕಲುಷಿತ ಗಾಳಿಯು ಜಗತ್ತಿನ ಎಲ್ಲ ದೇಶಗಳಿಗೆ ಹಾಗೂ ಸಮಾಜದ ಎಲ್ಲ ಭಾಗಗಳಿಗೆ ಹರಡುತ್ತಿದೆ. ವಾಯುಮಾಲಿನ್ಯ ನಿಯಂತ್ರಣಕ್ಕೆ ತುರ್ತು ಕ್ರಮಗಳು ಪರಿಣಾಮ ಕಾರಿಯಾಗಿ ಜಾರಿಗೆ ಬಂದಿಲ್ಲ. ಈ ನಿಟ್ಟಿನಲ್ಲಿ ಎಲ್ಲ ದೇಶಗಳು ರದ್ತೆಗಳಲ್ಲಿ ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಬೇಕು, ತ್ಯಾಜ್ಯ ನಿರ್ವಹಣೆಯನ್ನು ಉತ್ತಮಪಡಿಸಬೇಕು, ಶುದ್ಧ ಅಡುಗೆ ಅನಿಲಕ್ಕೆ ಉತ್ತೇಜನ ನೀಡಬೇಕು ಎಂದು ಮರಿಯಾ ಹೇಳಿದ್ದಾರೆ.

ಜಗತ್ತಿನ ವಿವಿಧ ಸ್ಥಳಗಳ 3 ಸಾವಿರಕ್ಕೂ ಹೆಚ್ಚು ಪ್ರದೇಶಗಳ ಸಮೀಕ್ಷೆ ನಡೆಸಿ ತಜ್ಞರ ಈ ಅಂಕಿ- ಅಂಶವನ್ನು ಸಿದ್ಧಪಡಿಸಿದ್ದಾರೆ. ಇದರ ಪ್ರಕಾರ ಜಗತ್ತಿನ ಜನರಲ್ಲಿ ಶೇ. 92% ಮಂದಿ. ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಮಟ್ಟಕಿಂತ ಹೆಚ್ಚು ಕಲುಷಿತ ಗೊಂಡಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ವಾಯುಮಾಲಿನ್ಯದಲ್ಲಿ ಹೊಮ್ಮುತ್ತಿರುವ ಅಪಾಯಕಾರಿ ಕಣಗಳ ವ್ಯಾಸ 2.5 ಮೈಕ್ರೋಮೀಟರ್ ಗಿಂತಲೂ ಕಡಿಮೆಯಿದೆ. ಈ ಅಪಾಯಕಾರಿ ಕಣಗಳು ಸಲ್ಫೇಟ್, ಬ್ಲಾಕ್ ಕಾರ್ಬನ್ ನಂತಹ ಟಾಕ್ಸಿನ್ ಗಳನ್ನು ಒಳಗೊಂಡಿದ್ದು, ಶ್ವಾಸಕೋಶ ಮತ್ತು ಹೃದಯ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಒಳಾಂಗಣ ಮತ್ತು ಹೊರಾಂಗಣ ವಾಯು ಮಾಲಿನ್ಯದಿಂದ ವರ್ಷಕ್ಕೆ 30 ಲಕ್ಷಕ್ಕೂ ಹೆಚ್ಚು ಸಾವು ಸಂಭವಿಸುತ್ತಿದೆ. ಆದರೆ ಒಳಾಂಗಣ ಮಾಲಿನ್ಯವು ಅಷ್ಟೇ ಅಪಾಯಕಾರಿಯಾಗಿದೆ. ಬಡ ರಾಷ್ಟ್ರಗಳಲ್ಲಿ ಅಡುಗೆಗೆ ಇದ್ದಿಲು, ಸೌದೆಯನ್ನು ಬಳಸುತ್ತಿರುವುದರಿಂದ ಒಳಾಂಗಣ ಮಾಲಿನ್ಯ ಪ್ರಮಾಣವು ಹೆಚ್ಚಿದೆ  ಎಂದು ವಿಶ್ವ ಆರೋಗ್ಯ ಸಂಘಟನೆ ಹೇಳಿದೆ.

*ಗಾಳಿಯಲ್ಲಿ ಡಬ್ಲ್ಯುಎಚ್ ಒ ನಿಗದಿಪಡಿಸಿರುವ ಮಟ್ಟಕಿಂತಲೂ ಅಪಾಯಕಾರಿ ಕಣಗಳು ಕೆಳ, ಮಧ್ಯಮ ಆದಾಯವಿರುವ ದೇಶಗಳಲ್ಲೇ ವಾಯು ಮಾಲಿನ್ಯ ಸಂಬಂಧಿತ ಸಾವುಗಳು ಹೆಚ್ಚು.

*ಚೀನಾ, ಮಲೇಷ್ಯಾ, ವಿಯೆಟ್ನಾಂ ಸೇರಿದಂತೆ ಆಗ್ನೇಯ, ಪಶ್ಚಿಮ ಪೆಸಿಫಿಕ್ ಪ್ರಾಂತ್ಯಗಳಲ್ಲಿ ವಾಯು ಮಾಲಿನ್ಯ ಹೆಚ್ಚು.