ಭಾರತದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ, ಅವನತಿಯೆಡೆಗೆ ಮನುಕುಲ!!!

0
1725

” ಒಂದು ವೇಳೆ ಭೂಮಿಯ ಮೇಲೆ ಎಲ್ಲ ಕೀಟಗಳು ಕಾಣೆಯಾದರೆ, ಕೇವಲ ೫೦ ವರ್ಷಗಳಲ್ಲಿ ಭೂಮಿಯ ಎಲ್ಲ ಜೀವಿಗಳು ನಾಶ ಹೊಂದುತ್ತವೆ. ಒಂದು ವೇಳೆ ಭೂಮಿಯ ಮೇಲೆ ಮನುಕುಲ ಕಾಣೆಯಾದರೆ, ಕೇವಲ ೫೦ ವರ್ಷಗಳಲ್ಲಿ ಭೂಮಿಯ ಉಳಿದೆಲ್ಲ ಜೀವಿಗಳು ಸಮೃದ್ಧವಾಗಿ ಬೆಳೆಯುತ್ತವೆ ” – ಜೊನಾಸ್ ಸಾಲ್ಕ್ ( ಪೋಲಿಯೊ  ಲಸಿಕೆ  ಕಂಡು ಹಿಡಿದ ನೊಬೆಲ್ ಪುರಸ್ಕೃತ ವಿಜ್ಞಾನಿ )

ನಮ್ಮ ದೇಶದ ವಾಯು ಮಾಲಿನ್ಯ ಪ್ರಪಂಚದಲ್ಲೆ ಗರಿಷ್ಠ,ನಾವು ಉಸಿರಾಡುತ್ತಿರುವ ಗಾಳಿ ಅತ್ಯಂತ ಕಳಪೆ ಮಟ್ಟದ್ದು.ಇಂದು ೧೦ ರಲ್ಲಿ ೯ ಮಂದಿ ಅಪಾಯಕಾರಿ ಕಲುಷಿತ ವಾತಾವರಣದಲ್ಲಿ ಬದುಕುತ್ತಿದ್ದಾರೆ.

Image result for air pollution india

ವಾಯು ಮಾಲಿನ್ಯದ ಪರಿಣಾಮ ಶ್ವಾಶಕೋಶ ಹಾಗೂ ಹೃದಯ ಸಂಬಂಧಿ ಖಾಯಿಲೆ ಗಳು,ಅಲರ್ಜಿ,ಆಸ್ತಮಾ ಮತ್ತು ಕ್ಯಾನ್ಸರ್ ನಿಂದ ಪ್ರತಿನಿತ್ಯ ಸಾಯುತ್ತಿರುವವರ ಸಂಖ್ಯೆ ಅಪಘಾತಗಳಲ್ಲಿ ಸಾಯುತ್ತಿರುವವರಿಗೆ  ಸಮ.ಆಘಾತಕಾರಿ ವಿಷಯವೆಂದರೆ ನಮ್ಮ ಮುಂದಿನ ಪೀಳಿಗೆಯ ಮಕ್ಕಳು,ಮೂಖ ಪ್ರಾಣಿ ಪಕ್ಷಿಗಳು ವಾಯುಮಾಲಿನ್ಯಕ್ಕೆ ಹೆಚ್ಚು ಬಲಿಪಶುಗಳಾಗುತ್ತಿರುವುದು.

Image result for air pollution india

ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣಗಳು :

 • ವಾಹನಗಳ ಹಾಗು ಕಾರ್ಖಾನೆಗಳ ಹೊಗೆ,ಕಲ್ಲಿದ್ದಲು ಹಾಗು ಇತರೆ ಪಳೆಯುಳಿಕೆ ಇಂಧನಗಳು.
 • ಕಟ್ಟಡ ನಿರ್ಮಾಣ,ವ್ಯವಸಾಯೋತ್ಪನ್ನಗಳ ಶುದ್ದೀಕರಣದ ವೇಳೆ ಉತ್ಪತ್ತಿಯಾಗುವ ಧೂಳು.
 • ಕ್ರಿಮಿಕೀಟ ನಾಶಕಗಳು ಮತ್ತು ಇತರೆ ರಾಸಾಯನಿಕ ವಿಷಾನಿಲಗಳು.
 • ಕಾಡಿನ ಬೆಂಕಿ ಮತ್ತು ಜ್ವಾಲಾಮುಖಿಯಿಂದ ಉತ್ಪತ್ತಿಯಾಗುವ ವಿಷಾನಿಲ.
 • ಏರ್ ಕಂಡೀಷನರ್,ರೆಫ್ರಿಜಿರೇಟರ್ ನಿಂದ ಬಿಡುಗಡೆಗೊಳ್ಳುವ CFC
 • ಕಳಪೆ ಮಟ್ಟದ ಗುಂಡಿ ಬಿದ್ದ ರಸ್ತೆಗಳಿಂದ ಬರುವ ಧೂಳು.
 • ಪ್ಲಾಸ್ಟಿಕ್ ಇತ್ಯಾದಿ ಅಪಾಯಕಾರಿ ತ್ಯಾಜ್ಯ ವಸ್ತುಗಳನ್ನು ಸುಡುವುದರಿಂದ,ದೂಮಪಾನ ಮತ್ತು ಪಟಾಕಿ ಸಿಡಿ ಮದ್ದುಗಳನ್ನು ಸುಡುವುದರಿಂದ ಉತ್ಪನ್ನವಾಗುವ ವಿಷಾನಿಲ.

ಮೇಲಿನ ಕ್ರಿಯೆಗಳಿಂದ ಉತ್ಪತ್ತಿಯಾಗುವ ವಿಷಾನಿಲಗಳಾದ ಕಾರ್ಬನ್ ಮಾನಾಕ್ಸೈಡ್ ,ಸಲ್ಫರ್ ಡೈಆಕ್ಸೈಡ್,ನೈಟ್ರೋಜನ್ ಆಕ್ಸೈಡ್ ಮತ್ತು ಕಾರ್ಬನ್ ಡೈಆಕ್ಸೈಡ್ ಇತರೆ ರಾಸಾಯನಿಕಗಳೊಂದಿಗೆ ಬೆರೆತು ಆಸಿಡ್ ಮಳೆಯಾಗುವುದು ಮತ್ತು ಓಜೋನ್ ಪದರದ ಮೇಲೆ ದುಷ್ಪರಿಣಾಮವಾಗುವುದು.

Image result for air pollution india

ವಾಯು ಮಾಲಿನ್ಯವನ್ನು ಕಡಿತ ಗೊಳಿಸುವುದು ಎಲ್ಲರ ಕರ್ತವ್ಯ ಮತ್ತು ಜವಾಬ್ದಾರಿ.

ವಾಯು ಮಾಲಿನ್ಯ ಕಡಿಮೆ ಮಾಡುವ ವಿಧಾನಗಳು :

 • ದ್ವಿಚಕ್ರ ಮೋಟಾರ್ ವಾಹನಗಳ ಬಳಕೆ ಹಾಗು ಅನಗತ್ಯವಾಗಿ ವಾಹನಗಳಲ್ಲಿ ಸುತ್ತಾಡುವುದನ್ನು ಕಡಿಮೆ ಮಾಡಿ,ಜಾಸ್ತಿ ನಡೆಯಿರಿ,ಸೈಕಲ್ ಬಳಸಿ ಮತ್ತು ಬ್ಯಾಟರಿ ಚಾಲಿತ ವಾಹನಗಳನ್ನು ಬಳಸಿ.
 • ವಾಹನಗಳನ್ನು ಸುಸ್ಥಿತಿಯಲ್ಲಿಡಿ.ಕಡಿಮೆ ಇಂಧನ ಬಳಸುವ ವಾಹನಗಳನ್ನು ಬಳಸಿ.ವಾಹನಗಳ ಹೊಗೆ ಉಗುಳುವ ಪ್ರಮಾಣವನ್ನು ನಿಯಮಿತವಾಗಿ ತಪಾಸಣೆಗೊಳಪಡಿಸಿ.
 • ಸಾರ್ವಜನಿಕ ಸಾರಿಗೆ,ಮೆಟ್ರೋ ರೈಲ್ ಇರುವ ಕಡೆ ಮೆಟ್ರೋ ರೈಲ್ ನಲ್ಲಿ ಪ್ರಯಾಣಿಸಿ.
 • ಪ್ಲಾಸ್ಟಿಕ್ ,ಅಪಾಯಕಾರಿ ತ್ಯಾಜ್ಯ ವಸ್ತುಗಳು ಮತ್ತು ಪಟಾಕಿ ತಯಾರಿಸುವುದನ್ನು ಹಾಗೂ ಸುಡುವುದು ನಿಷೇದಿಸಿ.
 • ಹೆಚ್ಚು ಗಿಡ ಮರಗಳನ್ನು ಬೆಳೆಸಿ.ಒಂದು ದಿವಸಕ್ಕೆ ಒಂದು ದೊಡ್ಡ ಮರ ೪ ಮನುಷ್ಯರಿಗೆ ಬೇಕಾಗುವಷ್ಟು ಆಕ್ಸಿಜನ್ ಒದಗಿಸುತ್ತೆ
 • ಗ್ಯಾಸ್,ಸೀಮೆ ಎಣ್ಣೆ, ಸೌದೆ ಇತ್ಯಾದಿ ಇಂಧನಗಳ ಬದಲು ಸೌರ ಶಕ್ತಿ ಬಳಸಿ.
 • ಸ್ಥಳೀಯ ಪದಾರ್ಥ ಮತ್ತು ಉತ್ಪನ್ನಗಳನ್ನು ಬಳಸುವುದರಿಂದ ಅನಗತ್ಯ ಸಾರಿಗೆ ಸಾಗಾಟ ತಪ್ಪಿಸಬಹುದು
 • ಬೃಹತ್ ನಗರ ಗಳ ವಿಸ್ತರಣೆ ಯಿಂದ ವಾಹನ ದಟ್ಟಣೆ,ವಾಯು ಮತ್ತು ಪರಿಸರ ಮಾಲಿನ್ಯ ಹೆಚ್ಚುವುದರ ಪರಿಣಾಮ ಇಂದು ನಮ್ಮ ಬೃಹತ್ ನಗರಗಳು ಉಸಿರುಗಟ್ಟುವ ವಾತಾವರಣ ಶೃಷ್ಟಿಸಿ ಕಸದ ತೊಟ್ಟಿಗಳಾಗುತ್ತಿವೆ

ವಾಯು ಮಾಲಿನ್ಯ,ಪರಿಸರ ಮಾಲಿನ್ಯ ತಡೆಗಟ್ಟುವುದು ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಗುಣಮಟ್ಟದ ವಾತಾವರಣ ಶೃಸ್ಟಿಸುವುದು ಜವಾಬ್ದಾರಿಯುತ ನಾಗರೀಕರ  ಮತ್ತು ಸರ್ಕಾರಗಳ ಕರ್ತವ್ಯ.

DrMohan

 

 

 

 

 

 

Dr. Mohan G M

MD, DCH, MRCPI (Ireland)