ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ

0
1936

ಗಗನದಲ್ಲಿ ಕನ್ನಡ ಹಬ್ಬದ ನಿಜವಾದ ಆಚರಣೆ

ಒಬ್ಬ ವ್ಯಕ್ತಿಯನ್ನು ಅವನಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಿಸಿದರೆ ವಿಷಯವು ಅವನ ತಲೆಗೆ ತಲುಪುತ್ತದೆ. ಅದೇ ಅವನ ಭಾಷೆಯಲ್ಲಿ ಸಂಭೋಧಿಸಿದರೆ, ನೀವು ಅವನ ಹೃದಯವನ್ನೇ ತಲುಪುತ್ತೀರಿ

– ನೆಲ್ಸನ್ ಮಂಡೇಲ.

ಕನ್ನಡಿಗರನ್ನು ಕನ್ನಡದಲ್ಲೇ ಸಂಭೋದಿಸುವುದು ನೈಜ ಹಾಗು ಸಾಮಾನ್ಯ ಜ್ಞಾನ. ವ್ಯವಹಾರ ನಡೆಸುವ ಎಲ್ಲಾ ಕಂಪನಿಗಳೂ ಇದನ್ನು ಅರಿಯುವುದು ಅವರ ವ್ಯವಹಾರಕ್ಕೇ ಉತ್ತಮ. ಬ್ರಿಟಿಷ್ ಏರ್ವೇಸ್ ನವರು ಕನ್ನಡದಲ್ಲಿ ವ್ಯವಹರಿಸುತ್ತಿರುವುದು ಒಳ್ಳೆಯ ಸಂಗತಿ. ಕೇವಲ ರಾಜ್ಯೋತ್ಸವದಂದು ಮಾತ್ರವಲ್ಲದೇ ಪ್ರತಿನಿತ್ಯವೂ ಕನ್ನಡವನ್ನು ಉಪಯೋಗಿಸುತ್ತಾರೆಂಬ ಭರವಸೆ ನಮ್ಮಲ್ಲಿದೆ.

ಈ ಒಂದು ಬದಲಾವಣೆಯ ಹಿಂದೆ ಶ್ರಮವಹಿಸಿದ ಎಲ್ಲರಿಗೂ ಹಾಗೂ ವಿಶೇಷವಾಗಿ ಸಾಮಾನ್ಯ ಕನ್ನಡಿಗರಾದ ದೀಪಕ್ ದೇವಯ್ಯನವರಿಗೂ ನಮ್ಮ ಅಭಿನಂದನೆಗಳು.

ನವಂಬರ್ ಒಂದರಂದು ರಾಜ್ಯೋತ್ಸವದ ದಿನ ಲಂಡನ್ ನಿಂದ ಬ್ರಿಟಿಷ್ ಏರ್ ವೇಸ್ ವಿಮಾನ ಹತ್ತುತ್ತಿದ್ದಂತೆ……”ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು, ಸ್ವಾಗತ- ಸುಸ್ವಾಗತ” ಎಂಬ ವಾಣಿ ಕೇಳಿ ನಿಜಕ್ಕೂ ಬೆಂಗಳೂರಿಗೆ ಹೊರಟಿದ್ದ ನನಗೆ ಆಗಲೇ ಬೆಂಗಳೂರಿನಲ್ಲೇ ಇದ್ದ ಖುಷಿ ಆಯಿತು. ನಂತರ ಹೊರಡುವ ಸಮಯದಲ್ಲಿ “ಎಲ್ಲರೂ ಬೆಲ್ಟ್ ಹಾಕಿಕೊಳ್ಳಿ, ಕೈಬ್ಯಾಗನ್ನು ನಿಮ್ಮ ಕಾಲ ಬಳಿ ಮುಂದಿನ ಕುರ್ಚಿಯ ಕೆಳಭಾಗದಲ್ಲಿಡಿ” ಎನ್ನುತ್ತಾ “ನಿಮಗೆ ಏನು ಕೊಡಲಿ, ವೆಜ್ ಬೇಕಾ ನಾನ್ ವೆಜಾ..? ಜ್ಯೂಸ್ ಬೇಕಾ ” ಅಂತೆಲ್ಲಾ ವಿಚಾರಿಸುತ್ತಾ,( “ಕನ್ನಡ ಜನರಾ ಔದಾರ್ಯದಂತೆ…” ಎನ್ನುವಂತೆ, ) ಪ್ರಯಾಣದ ಒಂಭತ್ತು ಗಂಟೆಗಳೂ ಅದೆಷ್ಟು ಲವಲವಿಕೆಯಿಂದ ಗ್ರಾಹಕರನ್ನು ಉಪಚರಿಸಿದರು ನಮ್ಮ ಅಚ್ಚಕನ್ನಡದ ಈ ಕೊಡಗಿನ ಕುವರ ದೀಪಕ್….ಕಳೆದ ಹತ್ತು ವರ್ಷಗಳಿಂದ ಬ್ರಿಟಿಷ್ ಏರ್ ವೇಸ್ ನಲ್ಲಿ ಸೇವೆ ಸಲ್ಲಿಸುತ್ತಾ, ಕನ್ನಡದ ಸೇವೆಯನ್ನೂ ಅಷ್ಟೇ ಮನದಾಳದಿಂದ ತನ್ನ ಪಾಡಿಗೆ ಸದ್ದಿಲ್ಲದೆ ಸಲ್ಲಿಸುತ್ತಿದ್ದಾರೆ. ಎಂದೂ ಕನ್ನಡ ಸಿನಿಮಾಗಳೇ ಸಿಗದಿದ್ದ ಅಲ್ಲಿ ನೋಡಲು ‘ಮೈತ್ರಿ’ ಸಿನಿಮಾ ಸಹ ಲಭ್ಯವಿತ್ತು…ಬಹುಶಃ ಅದೂ ಅವರದ್ದೇ ಮುತುವರ್ಜಿಯಿಂದ ಆಗಿದ್ದಿರಬಹುದು…. ದೀಪಕ್ ಅಂತಹವರ ಸಂಕುಲ ಹೆಚ್ಚಲಿ…… ಎಂದು ಬಿಡ ಬಿಡ ಮಾತಾಡಿದ ಹಿರಿಯ ಸಮಾಜಸೇವಕಿ ರೇಣುಕಾ ಮೇಡಂ

12208645_1633202696934552_4622182441965627044_n

ಕನ್ನಡಾಭಿಮಾನವನ್ನು ಬ್ರಿಟಿಷ್ ಏರ್ ವೇಸಲ್ಲೂ ಮೆರೆದಿದ್ದಾರೆ ನಮ್ಮ ಕನ್ನಡದ ಹೆಮ್ಮೆಯ ಕೊಡಗಿನ ಹುಡುಗ ದೀಪಕ್ ದೇವಯ್ಯಾ.. ಅಂತಹ ಸಂಸ್ಥೆಯಲ್ಲಿ ಕೆಲಸ ಸಿಕ್ಕಿದ ಕೂಡ್ಲೆ ಬ್ರಿಟೀಷ್ ರಾಣಿಯ ವಂಶಸ್ಥರೇನೋ ಅನ್ನೊ ಹಾಗೆ ಆಡೋರ ನಡುವೆ ದಿಪಕ್ ನಿಜಕ್ಕೂ ಗ್ರೇಟ್ ಅನ್ನಿಸ್ತಾರೆ.. ಕನ್ನಡದ ಹಬ್ಬವನ್ನು ಅದೆಷ್ಟೋ ಸಾವಿರ ಕಿಲೋಮೀಟರ್ ದೂರದಾಚೆಯಲ್ಲಿ ಅದೂ ಕನ್ನಡಿಗರ ಜೊತೆಯಲ್ಲಿ, ಆಗಸದುದ್ದಕ್ಕೂ ಕನ್ನಡ ಮಾತಾಡಿಸಿ ಆಚರಿಸಿದ ದೀಪಕ್ ಗೆ ಕನ್ನಡಿಗರ ನಮನ .. ಈ ಅದ್ಭುತ ಅನುಭವದ ಜೊತೆಗೆ ಅವರ ಫೋಟೋ ಸಹ ಕನ್ನಡಿಗರಿಗೆ ತೋರಿಸಿದ ರೇಣುಕಾ ಮೇಡಂ, ನಿಮಗೂ ಧನ್ಯವಾದ..! ಕನ್ನಡ ಹಬ್ಬದ ನಿಜವಾದ ಆಚರಣೆಗೆ ಇದೇ ಅಲ್ಲವೇ..!

ಈ ಸುದ್ಧಿ ತಿಳಿದು ಕಿರಿಕ್ ಕೀರ್ತಿ ನಮ್ಮ ಸಾಮಾನ್ಯ ಕನ್ನಡಿಗ ದೀಪಕ್ ದೇವಯ್ಯ ಅವರಿಗೆ ಸನ್ಮಾನ ಮಾಡಿದರು.

14610746_10154214852248025_1355711201_n

“ನೋಡಿ, ಕೆಲವರು ಯೆಸ್-ನೊ…ಬಿಟ್ಟು ಸ್ವಲ್ಪವೂ ಇಂಗ್ಲೀಷ್ ಗೊತ್ತಿರದ ಗ್ರಾಹಕರಿರುತ್ತಾರೆ, ಅಂತಹವರಿಗೆ ಏನನ್ನಾದರೂ ಹೇಳಲು ಕೇಳಲು ಸಂಕೋಚವಾಗುತ್ತದೆ. ನಮ್ಮಂತೆ ಕನ್ನಡದಲ್ಲಿ ಮಾತನಾಡಿಸಿದರೆ ಅವರದ್ದು ಸುಖಕರ ಪ್ರಯಾಣವಾಗುತ್ತದೆ” ಎನ್ನುತ್ತಾರೆ ದೀಪಕ್