ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ನಾಗರಿಕ ವಿಮಾನಯಾನ ಇಲಾಖೆ) ಅಗ್ನಿಶಾಮಕ ವಿಭಾಗದಲ್ಲಿ Junior Assistant (Fire Services) ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದೆ

0
988

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ನಾಗರಿಕ ವಿಮಾನಯಾನ ಇಲಾಖೆ) ಅಗ್ನಿಶಾಮಕ ವಿಭಾಗದಲ್ಲಿ Junior Assistant (Fire Services) ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದೆ. ಈ ಸಲ ಒಂದಷ್ಟು ಕನ್ನಡಿಗರಿಗೆ ಅವಕಾಶ ಸಿಗಲಿ ಎನ್ನುವುದು ನಮ್ಮ ಆಶಯ.
ಇದು ಯಾವುದೇ ದಿನ ಪತ್ರಿಕೆಯಲ್ಲಿ ಜಾಹೀರಾತಾಗಿ ಪ್ರಕಟವಾಗುವ ನಿರೀಕ್ಷೆಯಿಲ್ಲ. ಅದಕ್ಕಾಗಿ ಎಲ್ಲರಲ್ಲೂ ನಮ್ಮ ವಿನಂತಿಯೆಂದರೆ ಇದರ ಜೊತೆ ಲಗತ್ತಿಸಿರುವ ಜಾಹೀರಾತಿಗೆ ತಾವೆಲ್ಲರೂ ತಮ್ಮ ಬಳಗದಲ್ಲಿ ಒಂದಷ್ಟು ಪ್ರಚಾರ ನೀಡಿ ಹೆಚ್ಚಿನ ಅಭ್ಯರ್ಥಿಗಳನ್ನು ತಲುಪುವಂತೆ ಪ್ರಯತ್ನಿಸಬೇಕು.
ವಿದ್ಯಾರ್ಹತೆ:
1)ಪಿ. ಯು. ಸಿ. ಯಲ್ಲಿ ಕನಿಷ್ಟ 50% ಅಂಕಗಳೊಂದಿಗೆ ಉತ್ತೀರ್ಣ. ಅಥವಾ 10 ನೇ ತರಗತಿ + ಮೆಕ್ಯಾನಿಕಲ್ ಅಥವಾ ಅಟೋಮೊಬಾಯಿಲ್ ಅಥವಾ ಫ಼ೈರ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ
2)ಮೋಟಾರು ವಾಹನ (ಘನ ವಾಹನವಾದರೆ ಉತ್ತಮ) ಚಾಲನಾ ಲೈಸನ್ಸ್.(ಲಘುವಾಹನ ವಾದರೆ ಲೈಸನ್ಸ್ ಹೊಂದಿ ಎರಡು ವರ್ಷಗಳಾಗಿರಬೇಕು).
ದೈಹಿಕ ಕ್ಷಮತೆ: ಇದು ಅತಿ ಮುಖ್ಯ.
ಎತ್ತರ : ಕನಿಷ್ಟ 167ಸೆ. ಮೀ.,
ಎದೆಯ ಸುತ್ತಳತೆ: 81 ಸೆ. ಮೀ., ಸಾಮಾನ್ಯ, ವಿಸ್ತರಿಸಿದಾಗ 5 ಸೆ. ಮೀ. ಹೆಚ್ಚಬೇಕು.
ತೂಕ: 55 ಕೆ. ಜಿ. ಗಿಂತ ಕಡಿಮೆ ಇರಬಾರದು.
ವೇತನ: ಮೂಲ ವೇತನ (basic pay) ರೂ. 12,500/- ಒಟ್ಟು ವೇತನ ರೂ. 40000/- ಕ್ಕಿಂತಲೂ ಹೆಚಾಗುತ್ತದೆ. ಜೊತೆಗೆ ಇತರ ಸವಲತ್ತುಗಳೂ ಇವೆ.***
ಈ ಹುದ್ದೆ ಯಲ್ಲಿರುವ ಕನ್ನಡಿಗರ ಸಂಖ್ಯೆ ಈಗ ತೀರಾ ಕಡಿಮೆ. ಕನ್ನಡಿಗರಿಂದ ಅರ್ಜಿಗಳು ಬರುವುದು ತೀರಾ ಕಡಿಮೆ ಎನ್ನುವ ಅಪಾದನೆ ಇದೆ. ಹೆಚ್ಚಿನ ವಿದ್ಯಾರ್ಹತೆ ಇರುವವರೂ ಅರ್ಜಿ ಸಲ್ಲಿಸಬಹುದು (ಹೊರರಾಜ್ಯಗಳಿಂದ ಬಂದವರಲ್ಲಿ ಸ್ನಾತಕೋತ್ತರ ತಾಂತ್ರಿಕ ಪದವೀಧರರೂ ಇದ್ದಾರೆ ಎನ್ನುವುದು ನೆನಪಿರಲಿ). ಆ ನಂತರ ಉನ್ನತ ಸ್ಥಾನಗಳಿಗೆ ಪ್ರಯತ್ನಿಸಬಹುದು.
ಈ ಸಲದ ಪರೀಕ್ಷಾ ಕೇಂದ್ರ ಮಂಗಳೂರಿನಲ್ಲಿಯೇ ಇದೆ.
ಹೆಚ್ಚಿನ ವಿವರಗಳಿಗೆ ಅಟ್ಯಾಚ್ಮೆಂಟನ್ನು ತೆರೆದು ಗಮನವಿಟ್ಟು ಓದಿರಿ.
*(On appointment, besides the basic pay of Rs. 12,500/- they are eligible for VDA,HRA,perquisites under cafeteria approach @ 46% and benefits such as CPF, Gratuity, medical facilities,Leave enmeshment etc.)
ವಿ. ಸೂ.: ಇದೇ ಜನವರಿ ತಿಂಗಳಿನಿಂದ ವೇತನ ಪರಿಷ್ಕರಣೆಯಾಗುತ್ತಿದ್ದು ಅದೀಗ ಪ್ರಗತಿಯಲ್ಲಿದೆ. ಪರಿಷ್ಕೃತ ವೇತನ ಶ್ರೇಣಿಯಲ್ಲಿ ಈ ಹುದ್ದೆಗೆ ಒಟ್ಟು ವೇತನ ರೂ.55000/- ಕ್ಕಿಂತಲೂ ಹೆಚ್ಚು ನಿಗದಿಯಾಗುವ ನಿರೀಕ್ಷೆಯಿದೆ.
ಪೂರ್ಣ ವಿವರಗಳು ಇಲ್ಲೂ ಲಭ್ಯ: http://www.aai.aero/employment_news/ADVERTISMENTs2017_em.pdf
ಅರ್ಜಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ, ಪ್ರಿಂಟ್ ತೆಗೆದು ಭರ್ತಿ ಮಾಡಿ. ಸರಳವಾಗಿದೆ.
ನಿಮ್ಮ ಸರ್ಟಿಫಿಕೇಟುಗಳ ಹಾಗೂ ಲೈಸನ್ಸ್ನ ಪ್ರತಿಗಳನ್ನು ಲಗತ್ತಿಸಿ (ನಿಮ್ಮ ದೃಡೀಕೃತ ಸಹಿ ( self attested) ಯೊಂದಿಗೆ) ರೂ. 100/- ರ ಡಿ. ಡಿ. ಯ ಜತೆಗೆ ನೇರವಾಗಿ ಈ ವಿಳಾಸಕ್ಕೆ ಕಳುಹಿಸಿ.

THE REGIONAL EXECUTIVE DIRECTOR, Airports Authority of India, Southern Region, Chennai – 600 027

ಲಕೋಟೆ (Envelop)ಯ ಮೇಲೆ “Application for the post of Junior Assistant (Fire Service)”ಎಂದು ಬರೆಯಿರಿ.
ನಿಮ್ಮ ಅರ್ಜಿ ತಲುಪಲು ಕೊನೆಯ ದಿನಾಂಕ: 31 ಮಾರ್ಚ್ 2017
ಹಾಗೂ ಏನಾದರೂ ಸಂದೇಹಗಳಿದ್ದಲ್ಲಿ girishairport@gmail.com ಗೆ ಈ ಮೇಲ್ ಕಳುಹಿಸಿ ಅಥವಾ 9483915030 ಈ ಸಂಖ್ಯೆಗೆ ವಾಟ್ಸ್ಆಪ್ ಮಾಡಿ.