ಏರ್ ಷೋ: ವಾಹನ ಸಂಚಾರಕ್ಕೆ ನಿರ್ಬಂಧ

0
557

ದೇವನಹಳ್ಳಿ(ವಿಜಯಪುರ): ಬೆಂಗಳೂರು- ದೇವನಹಳ್ಳಿ ನಡುವಿನ ಎನ್.ಎಚ್-7 ಹೆದ್ದಾರಿಯಲ್ಲಿ ಫೆ. 14ರಿಂದ 18 ರವರೆಗೆ ಏರ್ ಶೋ ಪ್ರಯುಕ್ತ ರಸ್ತೆಯಲ್ಲಿ ಸರುಕು ಸಾಗಾಣಿಕ ವಾಹನಗಳು ಮತ್ತು ಖಾಸಗಿ ಬಸ್ಸುಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ದೇವನಹಳ್ಳಿ ಅಂತಾರಾಷ್ಟೀಯ ವಿಮಾನ ನಿಲ್ದಾಣ ಸಂಚಾರಿ ವಿಭಾಗದ ವೃತ್ತ ನೀರೀಕ್ಷಕರಾದ ಎಂ. ಮಹೇಶಕುಮಾರ್ ಹೇಳಿದ್ದಾರೆ. ದೇವನಹಳ್ಳಿ ಪಟ್ಟಣದ ಪ್ರಾವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎನ್.ಎಚ್-07 ಹೆದ್ದಾರಿಯಲ್ಲಿ ಏರ್ ಶೋ ನಡೆಯುವ ಕಾರಣ ವಾಹನ ದಟ್ಟಣೆ ಉಂಟಾಗುವ ಕಾರಣ ಸರುಕು ಸಾಗಣಿಕ ವಾಹನ ಮತ್ತು ಖಾಸಗಿ ಬಸ್ಸುಗಳ ಸಂಚಾರನ್ನು ಸ್ಥಗಿತಗೋಳಿಸಲಾಗಿದೆ ಎಂದು ಮನವಿ ಮಾಡಿದರು.

ಪರ್ಯಾಯ ರಸ್ತೆ ದಿನಾಂಕ 14-2-17ರಿಂದ 18-2-17 ರವರೆಗೆ ಬೆಳ್ಳಗೆ 6ರಿಂದ ರಾತ್ರಿ 9 ಗಂಟೆವರಿಗೂ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.

1) ಕೆ.ಆರ್.ಪುರ ಕಡೆಯಿಂದ ವಾಹನಗಳೂ ಹೆಣ್ಣೂರು ಕ್ರಾಸ್, ಕೊತ್ತನೂರು-ಬಾಗಲೂರು-ಬಂಡೆಕೊಡಿಗೇಹಳ್ಳಿ ಮೈಲನಹಳ್ಳಿ ಕ್ರಾಸ್- ಬೇಗೂರು ಮುಖಾಂತರ ವಿಮಾನ ನಿಲ್ದಾಣ ತಲುಪಲು ವ್ಯವಸ್ಥೆ ಮಾಡಲಾಗಿದೆ.

2) ಹೆಬ್ಬಾಳ ಕಡೆಯಿಂದ ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳು ಹೆಬ್ಬಾಳ ಮೇಲ್ಸೇತುವೆ-ನಾಗವಾರ ಕ್ರಾಸ್, ಥಣಿಸಂದ್ರ-ಬೆಳ್ಳಹಳ್ಳಿ ಕ್ರಾಸ್, ರೇವಾ ಜಂಕ್ಷನ್ ಸಾತನೂರು-ಬಾಗಲೂರು- ಬಂಡಿಕೊಡಿಗೆಹಳ್ಳಿ- ಮೈಲನಹಳ್ಳಿ. ಬೇಗೂರು ಮುಂಖಾತರ ವಿಮಾನ ನಿಲ್ದಾಣ ತಲುಪುವ ವ್ಯವಸ್ಥೆ ಮಾಡಲಾಗಿದೆ.

3) ವೈಟ್-ಫೀಲ್ಡ್, ಕಾಡುಕೊಡಿ ಕಡೆಯಿಂದ ಅಂತಾರಾಷ್ರ್ಠಿಯ ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳು ಕಾಟಂನಲ್ಲೂರು ಗೇಟ್, ಬೂದಿಗೆರೆ -ದೇವನಹಳ್ಳಿ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ತಲುಪಬಹುದು.

4) ಯಶವಂತಪುರ-ಪೀಣ್ಯ, ಕಡೆಯಿಂದ ವಿಮಾನ ನಿಲ್ದಾಣಕ್ಕೆ ಬಿಇಎಲ್ ವೃತ್ತ, ಗಂಘಮ್ಮನಗುಡಿ, ಎಂ.ಎಸ್.ಪಾಳ್ಯ -ಮದರ್ ಡೈರಿ, ಜಂಕ್ಷನ್ ಮೇಜರ್ ಉನ್ನಿಕೃಷ್ಣ ಜಂಕ್ಷನ್, -ದೊಡ್ಡಬಳ್ಳಾಪುರ ರಸ್ತೆ ನಾಗೇನಹಳ್ಳಿ, ಕ್ರಾಸ್, ಗಂಟಗಾನಹಳ್ಳಿ, ಸ್ಟೋನ್ ಹಿಲ್, ಸ್ಕೂಲ್, ಕ್ರಾಸ್ -ಎಂವಿಐಟಿ ಜಂಕ್ಷನ್, ಮುಖಾಂತರ ವಿಮಾನ ನಿಲ್ದಾಣ ತಲುಪಬಹುದು ಎಂದು ಮಹೇಶಕುಮಾರ್ ಹೇಳಿದ್ದಾರೆ.