AirTel ಕಂಪನಿ ಹಗಲು ದರೋಡೆ ಮಾಡುತ್ತೆ ಹುಷಾರ್…

2
13939

ಜಿಯೋಗೆ ಸ್ಪರ್ಧೆಯೊಡ್ಡಲು ಏರ್‍ಟೆಲ್‍ ತನ್ನ ಡಾಟಾ ಪ್ಲಾನ್’ಗಳ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡಿದ್ದು, 1GB 3G/4G ಡಾಟಾ ವನ್ನು ಕೇವಲ 53 ರೂಪಾಯಿಗೆ ನೀಡುತ್ತಿದೆ ಎಂದು ಕಳೆದ ಎರಡು ಮೂರು ದಿನಗಳಿಂದ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದರ ಹಿಂದೆ ಇದೆ ಏರ್ ಟೆಲ್’ನ ನಿಜವಾದ ವ್ಯಾಪಾರ ಬುದ್ಧಿ. ಅದು ಹೇಗೆ ಎಂಬುದು ಇಲ್ಲಿದೆ ನೋಡಿ…
ನೀವು 53 ರೂಪಾಯಿಗೆ ಒಂದು ಜಿಬಿ 3G/4G ಡಾಟಾ ಪ್ಲಾನ್ ಪಡೆಯಬೇಕಾದರೆ ಅದಕ್ಕೂ ಮೊದಲು 1499 ರೂಪಾಯಿ ರಿಚಾರ್ಜ್ ಮಾಡಿಸಿಕೊಳ್ಳಬೇಕು. ಆಗ ನಿಮಗೆ ಒಂದು ಜಿಬಿಯ ಡಾಟಾ 3G/4G ಡಾಟಾ ಮತ್ತು ಒಂದು ವರ್ಷದ ವ್ಯಾಲಿಡಿಟಿ ದೊರೆಯುತ್ತದೆ. ಆ ನಂತರವಷ್ಟೇ ನೀವು 53 ರೂಪಾಯಿಯ ಡಾಟಾ ಪ್ಲಾನ್ ಪಡೆಯಬಹುದು.

1499÷12(ತಿಂಗಳು)=124. ಹಾಗೂ ನೀವು ಪ್ರತಿ ತಿಂಗಳು ರಿಚಾರ್ಜ್ ಮಾಡಿಸುವ 53 ರೂಪಾಯಿ ಎರಡನ್ನು ಕೂಡಿದರೆ 124+53= 177 ರೂಪಾಯಿ ಅಂದರೆ ಪ್ರತಿ ಒಂದು ಜಿಬಿಗೆ ನೀವು ಕೋಡುವ ಮೊತ್ತ ರೂಪಾಯಿ177. ನೀವು ಕೇಳಬಹುದು 1499 ರಿಚಾರ್ಜ್ ಮಾಡಿಸಿದರೆ ಒಂದು ಜಿಬಿ ಕೊಡುತ್ತಾರೆ, ಹಾಗಾದರೆ ಪ್ರತಿ ಒಂದು ಜಿಬಿಗೆ ರೂಪಾಯಿ177 ಗಿಂತ ಕಡಿಮೆಯಾಗುತ್ತೆ ಅಲ್ವಾ ಅಂತ. ಆದನ್ನು ಏರ್ ಟೆಲ್ ಕಂಪನಿ ಮತ್ತೊಂದು ಮಾರ್ಗದಿಂದ ಪಡೆದುಕೊಳ್ಳುತ್ತೆ ಹೇಗೆ ಅಂತಿರಾ ಇಲ್ಲಿದೆ ನೋಡಿ.

53 ರೂಪಾಯಿ ಡಾಟಾ ಪ್ಲಾನ್’ನ ವ್ಯಾಲಿಡಿಟಿ ನೀವು ಭಾವಿಸಿದ ಹಾಗೆ 30 ದಿನ ಅಲ್ಲ. 28 ದಿನಗಳು ಮಾತ್ರ ಅಂದರೆ ನೀವು ಪ್ರತಿ ತಿಂಗಳು ಎರಡು ದಿನ ಮುಂಚೆ ರಿಚಾರ್ಜ್ ಮಾಡಿಸಬೇಕು‌. ಆಗ ನೀವು ಒಂದು ತಿಂಗಳು ಹೆಚ್ಚುವರಿ ಪಡೆಯುವಿರಿ ಅಲ್ಲಿಗೆ ಅವರು ಕೊಡುವ ಡಾಟಾ ಅಲ್ಲಿಗೆ ಸರಿಹೋಯಿತು. ಹಾಗಾಗಿ ಯೋಚಿಸಿ, ಹಿಂಬಂದಿ ಮಾರ್ಗದಿಂದ ಹಣ ದೊಚುವ ಕೊಡುಗೆಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ…

source : Watsapp