ಜಿಯೋ ಉಚಿತ ಫೋನ್ ಗೆ ಸೆಡ್ಡು ಹೊಡೆದ ಏರ್ಟೆಲ್ ” ಉಚಿತ ಫೋನ್ ನೀಡಲು ಮುಂದಾಗಿದೆ”..!

0
2117

ಹೌದು ಇತ್ತೀಚೆಗಷ್ಟೇ ಜಿಯೋ ಫೋನ್ ಯಾರು ಊಹಿಸದಂತೆ ಒಂದು ಆಫರ್ ನೀಡಿತ್ತು ಅದೇ ಉಚಿತ ಫೋನ್ ನೀಡುವುದಾಗಿ ಜಿಯೋ ಸಂಸ್ಥೆ ಹೇಳಿತ್ತು. ಆದರೆ ಇದೆ ಜಿಯೋ ಆಫರ್ ಗೆ ಸೆಡ್ಡು ಹೊಡೆದಿರುವ ಏರ್ಟೆಲ್ ಇದರ ವಿರುದ್ಧ ತನ್ನ ಒಂದು ಆಫರ್ ನೀಡಿದೆ. ಅಂದ್ರೆ ಏರ್ಟೆಲ್ ಸಹ ಉಚಿತ 4G ಫೋನ್ ಬಿಡುಗಡೆ ಮಾಡಲು ಸಿದ್ಧವಾಗಿದೆ.

airtel new mobile-2
source:BGR India

2018 ರ ಹಣಕಾಸು ವರ್ಷಕ್ಕೆ ತನ್ನ Q1 ಫಲಿತಾಂಶಗಳನ್ನು ಘೋಷಿಸಿದ ನಂತರ ಹೂಡಿಕೆದಾರರ ಸಮಾವೇಶದಲ್ಲಿ ಏರ್ಟೆಲ್ ಎಂ.ಡಿ. ಮತ್ತು ಸಿಇಒ ಗೋಪಾಲ್ ವಿಟ್ಟಾಲ್ ಮಾತನಾಡುತ್ತಾ, ದೇಶದ ಅತಿದೊಡ್ಡ ಆಪರೇಟರ್ ಫೋನ್ಗಳನ್ನು ತಯಾರಿಸಲು ಆಸಕ್ತಿ ಹೊಂದಿರುವುದಾಗಿ ಹೇಳಿದ್ದಾರೆ.

airtel new mobile-1
source:livemint.com

ಏರ್ಟೆಲ್ ಸಹ 4G ಫೀಚರ್ ಫೋನ್ ತಯಾರಕರೊಂದಿಗೆ ಸಿದ್ಧವಾಗಿದೆ ಮತ್ತು ಹೊಸ ಆಫರ್ ನೀಡಲು ಮುಂದಾಗಿದೆ ಅಂತ ಹೇಳಿದೆ. ಮಾರ್ಚ್ 2018 ರೊಳಗೆ 4 ಜಿ VoLTE ಸೇವೆಗಳನ್ನು ಪ್ರಾರಂಭಿಸುವ ಯೋಜನೆಯನ್ನು ಏರ್ಟೆಲ್ ಘೋಷಿಸಿದೆ.

ಹೆಚ್ಚಿನ ವೇಗದ 3 ಜಿ ಮತ್ತು 4 ಜಿ ಪ್ರವೇಶದ ಹೊರತಾಗಿಯೂ, 300 ದಶಲಕ್ಷ ಭಾರತೀಯ ಗ್ರಾಹಕರು ಈಗಲೂ 2 ಜಿ ನೆಟ್ವರ್ಕ್ಗಳನ್ನು ಬಳಸುತ್ತಾರೆ, ಮುಖ್ಯವಾಗಿ ಧ್ವನಿ ಕರೆಗಳನ್ನು ಮಾಡುತ್ತಾರೆ. ಅನಾಮಧೇಯತೆಯ ಸ್ಥಿತಿಯ ಕುರಿತು ಮಾತನಾಡಿದ ಪ್ರತಿಸ್ಪರ್ಧಿ ಸಂಸ್ಥೆಯಿಂದ ಉದ್ದಿಮೆಯ ಉನ್ನತ ಕಾರ್ಯನಿರ್ವಾಹಕ ಅಧಿಕಾರಿ 3G ಗಿಂತ 4G ವೇಗವು ಹೆಚ್ಚಾಗುವುದರಿಂದ 3G “ಕ್ರಾಪ್ಪರ್ ಬರಲಿದೆ” ಎಂದು ಹೇಳಿದ್ದಾರೆ.

airtel new mobile-2
source:BGR India

ಜಿಯೋ ಫೋನ್ ಗಿಂತ ಏರ್ಟೆಲ್ ಫೋನ್ ಉತ್ತಮವಾಗಿರಲಿದೆ:
ಹೌದು ಮೊನ್ನೆ ಜಿಯೋ ನೀಡಿರುವ ಫೋನ್ ಒಂದು ಮಟ್ಟಿಗೆ ಉತ್ತಮವಾಗಿದೆ ಆದ್ರೆ ಇದಕ್ಕಿಂತ ಉತ್ತಮವಾಗಿ ಏರ್ಟೆಲ್ ತನ್ನ ಫೋನ್ ಬಿಡಲು ಸಿದ್ಧತೆ ನೆಡೆಸಿದೆ. ಜಿಯೋ ಸಿಮ್ ಇತ್ತಿಚೇಗೆ ಮಾರುಕಟ್ಟೆಗೆ ಬಂದಿರುವ ಸಿಮ್ ಆಗಿದೆ. ಆದ್ರೆ ಏರ್ಟೆಲ್ ತುಂಬ ವರ್ಷಗಳ ಕಾಲ ಇರುವಂತ ಒಂದು ನೆಟ್ ವರ್ಕ್ ಆಗಿದೆ ಅದರಿಂದ ತನ್ನ ಗ್ರಾಹಕರನ್ನು ಸೆಳೆಯಲು ಮತ್ತು ತನ್ನ ಗ್ರಾಹಕರ ಹಿತದೃಷ್ಟಿಯಿಂದ ಏರ್ಟೆಲ್ ಉತ್ತಮ ರೀತಿಯ ಫೋನ್ ಬಿಡುಗಡೆ ಮಾಡಲು ಸಿದ್ಧವಾಗಿದೆ.

jio mobile-3
source:thequint.com

ಜಿಯೋ ನೆಟ್ ವರ್ಕ್ ಕೆಲವುಕಡೆ ಸಿಗುವುದಿಲ್ಲ ಅಂತಹ ಕಡೆ ಜಿಯೋ ನೀಡಲಿರುವ ಫೋನ್ ಹೇಗೆ ಬಳಸುವುದು ಅನ್ನೋದು ಹಲವು ಜನರ ಪ್ರಶ್ನೆ ಯಾಗಿದೆ. ಆದ್ರೆ ಏರ್ಟೆಲ್ ನೀಡಲಿರುವ ಫೋನ್ ನೀವು ಯಾವ ಜಾಗದಲ್ಲಿಯಾದರು ಉಪಯೋಗಿಸಬಹುದು. ಯಾಕೆ ಅಂದ್ರೆ ಏರ್ಟೆಲ್ ಎಲ್ಲಾ ಕಡೆ ತನ್ನ ನೆಟ್ ವರ್ಕ್ ಉತ್ತಮಗೊಳಿಸಿದೆ.