ಅಕ್ಷಯ್ ನಂತರ ಸೈನಾ ಕೂಡಾ ಹುತಾತ್ಮ ಯೋಧರಿಗೆ 6 ಲಕ್ಷ ರೂ. ದೇಣಿಗೆ ನೀಡಿದ್ದಾರೆ

0
472

ನಿನ್ನೆಯಷ್ಟೇ ಅಕ್ಷಯ್ ಕುಮಾರ್ ಸುಕ್ಮಾ ಉಗ್ರರ ದಾಳಿಗೊಳಗಾದ ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 9 ಲಕ್ಷ ರೂ. ಧನ ಸಹಾಯ ಮಾಡಿದ್ದರು. ಇದೀಗ ಸೈನಾ ಕೂಡಾ ಹುತಾತ್ಮ ಯೋಧರಿಗೆ 6 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಮಾರ್ಚ್‌ 11ರಂದು ಛತ್ತಿಸಘಡ್‌ನ ಸುಕ್ಮಾ ಜಿಲ್ಲೆಯಲ್ಲಿ ನಡೆದ ನಕ್ಸಲ್‌ ದಾಳಿಯಲ್ಲಿ ಹುತಾತ್ಮರಾಗಿದ್ದ ಸಿಆರ್‌ಪಿಎಫ್‌ನ 12 ಯೋಧರು ಕುಟುಂಬಗಳಿಗೆ ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ತಲಾ 50 ಸಾವಿರ ರೂಪಾಯಿ ಸಹಾಯಧನ ನೀಡಿದ್ದಾರೆ.

ಇದರಿಂದ ಪ್ರತೀ ಹುತಾತ್ಮ ಯೋಧರ ಕುಟುಂಬಕ್ಕೆ 50 ಸಾವಿರ ರೂ. ನೆರವು ಸಿಗಲಿದೆ. ಮೃತ ಯೋಧರ ಜೀವವನ್ನು ಮರಳಿ ಪಡೆಯಲಾಗದು.  ಆದರೆ ನನಗೆ ಕೈಲಾದ ಮಟ್ಟಿಗೆ ಆ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದೇನೆ ಎಂದು ಸೈನಾ ಹೇಳಿಕೊಂಡಿದ್ದಾರೆ. ಯೋಧರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ತಮ್ಮ ಪ್ರಾಣ ದೇಶಕ್ಕಾಗಿ ಮುಡುಪಾಗಿಟ್ಟ ಯೋಧರನ್ನು ಮರಳಿ ಕರೆತರಲು ಸಾಧ್ಯವಿಲ್ಲ. ಆದರೆ ನನ್ನ ಕಡೆಯಿಂದ ಚಿಕ್ಕ ಸಹಾಯ ಮಾಡುತ್ತಿರುವುದಾಗಿ ಹೇಳಿದ್ದಾರೆ.