ಉಳಿದ ಅನ್ನದಿಂದ ಸ್ವಾದಿಷ್ಟ ಅಕ್ಕಿರೊಟ್ಟಿ ಮಾಡುವ ವಿಧಾನ

0
12560

ರಾತ್ರಿ ಊಟಕೆಂದು ಮಾಡಿದ ಅನ್ನ ಹೆಚ್ಚುಳಿಯುತ್ತದೆ. ಬೆಳೆಗ್ಗೆ ತಿಂಡಿಗೆ ಮತ್ತೆ ರೈಸ್ ಐಟಮ್ ತಿನ್ನಲು ಬೇಜಾರು. ಈ ಅನ್ನವನ್ನು ಹೇಗಪ್ಪ ಕಾಲಿಮಾಡೋದು ಅಂತ ಯೋಚಿಸುತ್ತಿದ್ದೀರಾ? ಉಳಿದ ಅನ್ನದಿಂದ ಸ್ವಾದಿಷ್ಟ ಅಕ್ಕಿರೊಟ್ಟಿ ಮಾಡಿ ಸವಿಯಬಹುದು.

ಬೇಕಾಗುವ ಸಾಮಗ್ರಿ:

ಮಿಕ್ಕಿದ ಅನ್ನ,

ಕೊತ್ತಂಬರಿ ಸೊಪ್ಪು,

ಹಸಿಮೆಣಸು-2,

ಶುಂಠಿ-ಒಂದು ಸಣ್ಣ ಚೂರು,

ಈರುಳ್ಳಿ-1,

ಉಪ್ಪು, ಸಕ್ಕರೆ-ರುಚಿಗೆ ತಕ್ಕಷ್ಟು,

ತುಪ್ಪ-4 ಚಮಚ

akkirotti

ಮಾಡುವ ವಿಧಾನ:

  • ಮೊದಲು ಮಿಕ್ಕಿದ ಅನ್ನಕ್ಕೆ ಸ್ವಲ್ಪ ಉಪ್ಪು, ಸಕ್ಕರೆ ಸೇರಿಸಿ ಮಿಶ್ರಣವನ್ನು ಹಿಚುಕಿಟ್ಟುಕೊಳ್ಳಿ. (ಮಿಶ್ರಣಕ್ಕೆ ಬೇಕಾದರೆ ಅಕ್ಕಿ ಹಿಟ್ಟನ್ನು ಹಾಕಿ ಬೇಯಿಸಿಕೂಡ ಮಾಡಬಹುದು).
  • ನಂತರ ಕೊತ್ತಂಬರಿ ಸೊಪ್ಪು, ಹಸಿಮೆಣಸು, ಶುಂಠಿ ಮತ್ತು ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಅನ್ನದ ಮಿಶ್ರಣಕ್ಕೆ ಸೇರಿಸಿ.
  • ಈ ಮಿಶ್ರಣವನ್ನು 15 ನಿಮಿಷ ನೆನೆಯಲು ಬಿಡಿ.
  • 15 ನಿಮಿಷದ ನಂತರ ಅನ್ನದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಚಪಾತಿಯಂತೆ ಲಟ್ಟಿಸಿ. ಅನಂತರ ಬೇಯಿಸಿ. ಸ್ವಲ್ಪ ಬೆಂದಮೇಲೆ 1ಚಮಚ ತುಪ್ಪ ಹಾಕಿ ಮೊಗುಚಿದರೆ ಸ್ವಾದಿಷ್ಟವಾದ ಅನ್ನದ ರೊಟ್ಟಿ ಸವಿಯಲು ಸಿದ್ಧ.

ಇದನ್ನು ಬಿಸಿಯಿರುವಾಗಲೇ ತೆಂಗಿನ ಕಾಯಿ ಚಟ್ನಿಯೊಂದಿಗೆ ತಿಂದರೆ ರುಚಿ ಹೆಚ್ಚು.

Also read: ಟೊಮೆಟೊ ರೈಸ್ ಬಾತ್ ಮಾಡುವ ವಿಧಾನ