ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲು ಬೇಕಾದ ಜಾಗ ದಿನ ವಾರಗಳ ಕಂಪ್ಲೀಟ್ ಮಾಹಿತಿ..

0
4804

ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಒಂದು ಮುಹೂರ್ತ ನೋಡಿ ಮಾಡುವುದರಿಂದ ಏನು ಪ್ರಯೋಜನ… ಏಕೆ ಹೀಗೆ ಮಾಡಬೇಕು.. ಯಾವಾಗ ಎಲ್ಲಿ ಅಕ್ಷರಭ್ಯಾಸ ಮಾಡಿಸಬೇಕು ಎಲ್ಲದರ ಮಾಹಿತಿ ಇಲ್ಲಿದೆ ನೋಡಿ.. ಸಾಮಾನ್ಯವಾಗಿ ಬಹುತೇಕರು ಯಾರೂ ಈ ಸಂಪ್ರದಾಯವನ್ನು ಪಾಲಿಸುವುದಿಲ್ಲ.. ಹಳ್ಳಿ ಜನರಿಗೆ ಇದರ ಅರಿವು ಕೂಡ ಇರುವುದಿಲ್ಲ..‌ ಮಾಮೂಲಿಯಾಗಿ ಶಾಲೆಗೆ ಕಳುಹಿಸುತ್ತಾರೆ.. ಇದು ತಪ್ಪು ಎಂದೇನಿಲ್ಲಾ.. ಆದರೆ ಮುಹೂರ್ತ ನೋಡಿ ಅಭ್ಯಾಸ ಮಾಡಿಸುವುದರಿಂದ ಲಾಭ ಹೆಚ್ಚು..

ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಸೇರಿದಂತೆ ಜನಸಾಮಾನ್ಯರೂ ಕೂಡ ಈ ಪದ್ಧತಿಯನ್ನು ಮಾಡುತ್ತಿದ್ದರು.. ಇನ್ನು ಇದಕ್ಕೆ ಕಾರಣ ಎನೆಂದರೆ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸುವ ಮುಹೂರ್ತದ ಫಲಗಳು ಸಿಗಲೆಂದು.. ದೇವರ ಸನ್ನಿಧಿಯಲ್ಲಿ ಮಾಡಿದಾಗ ದೇವರ ಆಶೀರ್ವಾದದಿಂದ ಮಕ್ಕಳು ವಿದ್ಯಾವಂತರಾಗುತ್ತಾರೆಂದು.. ಸಾಮಾನ್ಯವಾಗಿ ಮಕ್ಕಳಿಗೆ ವಿದ್ಯೆಗೆ ಸಂಭಂದಿಸಿದ ಹಾಗೆ ಯಾವುದೇ ದೋಷ ವಿದ್ದರೂ ಮುಹೂರ್ತದ ಶುಭಫಲಗಳಿದ ಅವೆಲ್ಲವೂ ಹೋಗಿಬಿಡುತ್ತವೆ.. ಹಾಗೆಯೆ ದೇವರ ಆಶೀರ್ವಾದವೂ ಸಿಗುತ್ತದೆ..

ಅಕ್ಷರ ಅಭ್ಯಾಸ ಮಾಡಿಸಲು ಒಳ್ಳೆಯ ಸಮಯ ಯಾವುವೆಂದರೆ ಮಕ್ಕಳಿಗೆ ಗುರುಬಲವಿದ್ದಾಗ ಹಾಗೂ ಉತ್ತರಾಯಣ ಶ್ರೇಷ್ಠ ಕಾಲದಲ್ಲಿ ಅಕ್ಷರಾಭ್ಯಾಸ ಮಾಡಿಸಿದರೇ ಬಹಳ ಒಳ್ಳೆಯದು… ಇನ್ನು ಸಾಮಾನ್ಯವಾಗಿ ಹೆಚ್ಚಾಗಿ ಗುರುವಾರಗಳಂದು ಅಕ್ಷರಾಭ್ಯಾಸವನ್ನು ಮಾಡಿಸುತ್ತಾರೆ.. ಗುರುವಿನ ಆಶೀರ್ವಾದ ಒಂದಿದ್ದರೆ ಪ್ರಪಂಚದಲ್ಲಿ ಏನು ಬೇಕಾದರೂ ಜಯಿಸಬಹುದು ಎನ್ನುವುದು ನಂಬಿಕೆ.. ಎಲ್ಲಿ ಈ ಅಭ್ಯಾಸವನ್ನು ಮಾಡಿಸಬೇಕೆಂದರೆ.. ತಪ್ಪದೇ ಇದನ್ನು ದೇವಸ್ಥಾನಗಳಲ್ಲಿ ಮಾಡಿ.. ಇದಕ್ಕೆ ಸಾವಿರಾರು ರೂಪಾಯಿಗಳು ಖರ್ಚಾಗುತ್ತದೆ ಎಂಬ ಚಿಂತೆ ಬಿಡಿ.. ನೀವೆ ಸಾಮಾನ್ಯವಾಗಿ ದೇವಸ್ಥಾನದಲ್ಲಿ ಪೂಜೆ ಮಾಡಿ.. ನಂತರ ದೇವಸ್ಥಾನದ ಅಂಗಳದಲ್ಲಿ ಕೂತು ಮಕ್ಕಳಿಗೆ ಅಕ್ಷರದ ಅಭ್ಯಾಸವನ್ನು ಶುರು ಮಾಡಿಸಿ..

ಅನುಕೂಲವಿದ್ದವರು ಪುರೋಹಿತರ ಮೂಲಕ ಮಾಡಿಸುತ್ತಾರೆ.. ಆದರೆ ಹೀಗೆ ಮಾಡಬೇಕೆಂದೇನಿಲ್ಲಾ.. ದೇವರ ಸಾನಿಧ್ಯದಲ್ಲಿದ್ದರೇ ಅಷ್ಟೇ ಸಾಕು.. ಇನ್ನು ನಿಮ್ಮ ನಿಮ್ಮ.. ಮನೆ ದೇವರುಗಳ ಗುಡಿ ಅಥವಾ.. ಗುರು ರಾಘವೇಂದ್ರ ಸ್ವಾಮಿ, ಸಾಯಿ ಬಾಬಾ ಅಥವಾ ಇನ್ಯಾವುದೇ ಗುರುವಿನ ದೇವಸ್ಥಾನ.. ಇನ್ನೂ ಹೇಳಬೇಕೆಂದರೆ ವಿದ್ಯೆಗೆ ಅಧಿಪತಿಗಳಾದ ಸರಸ್ವತಿ ಹಾಗೂ ಗಣೇಶನ ಗುಡಿಗಳಲ್ಲಿ ಇದನ್ನು ಮಾಡಿಸಬಹುದು..

ಶುಭವಾಗಲಿ.. ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ.. ಇತರರಿಗೂ ಉಪಯೋಗವಾಗಬಹುದು..