ಮೊದಲ ಬಾರಿ ರಾಜಕೀಯ ಬಿಟ್ಟು ವಯಕ್ತಿಕ ಜೀವನದ ಬಗ್ಗೆ ನಟ ಅಕ್ಷಯ್ ಕುಮಾರ್ ಅವರ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ..

0
541

ಭಾರತದ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಬರದಿಂದ ಹೊರಬಂದು ತಮ್ಮ ವಯಕ್ತಿಕ ಜೀವನದ ಬಗ್ಗೆ ನಟ ಅಕ್ಷಯ್ ಕುಮಾರ್ ಅವರ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇದು ಮೋದಿಯವರ ಮೊದಲ ವಯಕ್ತಿಕ ಸಂದರ್ಶನವಾಗಿದೆ. ಈ ಸಂದರ್ಶನದಲ್ಲಿ ಮೋದಿ ಬಡತನದ ಬಗ್ಗೆ ಮಾತನಾಡಿದ್ದು ತಂದೆ ಚಾ ಮಾರುತ್ತಿದ್ದರು, ತಾಯಿ ಲಾಡು ಮಾಡಿ ಮನೆ ಮನೆಗೆ ಮಾರಿ ಜೀವನ ಸಾಗಿಸುತ್ತಿದ್ದರು. ಇಂತಹ ಕುಟುಂಬದಲ್ಲಿ ಹುಟ್ಟಿ ಪ್ರಧಾನಿಯಾಗುತ್ತೇನೆ ಎಂದು ಯಾವತ್ತು ಕನಸ್ಸು ಕಂಡಿರಲಿಲ್ಲ ಎಂದು ಹೇಳಿದ್ದಾರೆ.

ಹೌದು ಚುನಾವಣೆ ವಿಚಾರಗಳಿಗೆ ಸ್ವಲ್ಪ ವಿರಾಮ ಹೇಳಿದ ನರೇಂದ್ರ ಮೋದಿಯವರು ಬುಧವಾರ ಬೆಳ್ಳಂಬೆಳಗ್ಗೆ ಆರಾಮ ಮನಸ್ಥಿತಿಯಲ್ಲಿ ಸುಮಾರು 1 ಗಂಟೆ ಕಾಲ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ. ಈ ಮೂಲಕ ಮೋದಿಯವರ ಇನ್ನೊಂದು ಮುಖ ಭಾರತೀಯರಿಗೆ ಮತ್ತು ಜಗತ್ತಿಗೆ ಪರಿಚಯವಾಗಿದೆ. ದೆಹಲಿಯ ಪ್ರಧಾನಿ ನರೇಂದ್ರ ಮೋದಿ ನಿವಾಸ 7 ಲೋಕ ಕಲ್ಯಾಣ ಮಾರ್ಗದಲ್ಲಿ ಸುಂದರವಾದ ಪ್ರಕೃತಿ ನಡುವೆ ಚಿಲಿಪಿಲಿ ಕೂಗುವ ಹಕ್ಕಿಯ ಸ್ವರದ ಮಧ್ಯೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ವಿರಾಮವಾಗಿ ಕುಳಿತು ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. ಇದು ಸಂಪೂರ್ಣ ರಾಜಕಿಯೇತರ ಸಂದರ್ಶನವಾಗಿದೆ.

ಬಾಲ್ಯದ ಜೀವನದ ಬಗ್ಗೆ ಮೋದಿ ಮಾತು

ವಯಕ್ತಿಕ ಸಂದರ್ಶನದಲ್ಲಿ ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿಯವರು ಬಾಲ್ಯದಲ್ಲಿ ಬಹಳಷ್ಟು ಕಷ್ಟದ ಜೀವನ ಕಳೆದಿದ್ದೇನೆ, ನಾನು ಚಿಕ್ಕವನಿದ್ದಾಗ ಸೈನಿಕರ ದೇಶಸೇವೆ, ಅವರ ದೇಶಭಕ್ತಿ ನನಗೆ ಸ್ಪೂರ್ತಿ ನೀಡುತ್ತಿತ್ತು. ಇಂತಹ ಮನಸ್ಥಿತಿಯಲ್ಲಿ ನಾನು ರಾಮ ಕೃಷ್ಣ ಮಿಷನ್ ಸೇರಿದೆ. ಅದು ನನ್ನಲ್ಲಿ ದೇಶಸೇವೆ ಮಾಡುವ ಹುಚ್ಚನ್ನು ಹೆಚ್ಚಿಸಿತು ಏಕೆಂದರೆ ನಾನು ಚಿಕ್ಕವನಿದ್ದಾಗ ರೈಲುಗಳಲ್ಲಿ ಸೈನಿಕರಿಗೆ ಟೀ ಮಾರುತ್ತಿದ್ದೆ. ಇಂತಹ ಪರಿಸ್ಥಿತಿಯಲ್ಲಿ ಎಂದು ಪ್ರಧಾನಿ ಆಗುತ್ತೇನೆಂದು ಎಂದೂ ಯೋಚಿಸಿಲ್ಲ ಮನೆಯವರೂ ನೌಕರಿ ಮಾಡಲೆಂದು ಯೋಚಿಸಿದ್ರು, ನನಗೆ ಬಾಲ್ಯದಲ್ಲೇ ಸಾಧಕರ ಬಗ್ಗೆ ತಿಳಿಯುವ ಆಸಕ್ತಿ ತುಂಬಾನೇ ಇತ್ತು ಎಂದು ಹೇಳಿದ ಪ್ರಧಾನಿಯವರು.

ತಾಯಿ ಈಗಲೂ ನನಗೆ ಹಣ ನೀಡುತ್ತಾರೆ:

ಹೌದು ನನಗೆ ನನ್ನ ತಾಯಿ ಇನ್ನು ಹಣವನ್ನು ನೀಡುತ್ತಾರೆ. ನನ್ನ ಕುಟುಂಬ ಸರ್ಕಾರದಿಂದ ನೆರವು ಪಡೆಯಲ್ಲ ಅಷ್ಟೇ ಯಾಕೆ ಸರ್ಕಾರಿ ವೈದ್ಯಕೀಯ ನೆರವನ್ನೂ ಕೂಡ ಪಡೆಯುವುದಿಲ್ಲ, ತಾಯಿ ಒಪ್ಪಿಗೆಯಂತೆ ನಾನು ಚಿಕ್ಕಂದಿನಲ್ಲೇ ಸಂಘಕ್ಕೆ ಹೋಗುತ್ತಿದ್ದೆ, ಸಂಘದ ಶಾಖೆಯಲ್ಲಿ ವೈಜ್ಞಾನಿಕ ಆಟ ಆಡಿಸ್ತಾರೆ ಗುಂಪಿನಲ್ಲಿ ಆಡುವುದು ನನಗೆ ತುಂಬಾ ಇಷ್ಟ ನನಗೆ ದೇಶವೇ ಕುಟುಂಬ ಅದನ್ನು ಬಿಟ್ಟು ಯಾವುದೇ ವಯಕ್ತಿಕ ಕುಟುಂಬದ ಆಸೆ ಇಲ್ಲ, ಸಿಎಂ ಆಗಿದ್ದಾಗಲೂ ನನ್ನ ಬಟ್ಟೆಯನ್ನು ನಾನೇ ತೊಳೆಯುತ್ತಿದ್ದೆ, ಶಿಸ್ತಾಗಿ ಇರುವುದು ನನ್ನ ಪ್ರವೃತ್ತಿ, ದೇವೇಗೌಡ ಸಹ ಸಿಎಂ, ಪ್ರಧಾನಿ ಆಗಿದ್ರು ಆದ್ರೆ ಅವರು ಕಡಿಮೆ ಅವಧಿಗೆ ಪಿಎಂ ಆಗಿದ್ರು ಆದರೆ ನಾನು ಹಲವು ವರ್ಷ ಸಿಎಂ ಆಗಿದ್ರಿಂದ ಶಕ್ತಿ ಹೆಚ್ಚು, ನನಗೆ ದೇಶ ಸೇವೆ ಮಾಡುವ ಶಕ್ತಿ ಹೆಚ್ಚಾಗಿದೆ ಎಂದು ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ನಾನು ಕುಳಿತಲ್ಲಿ ಕೂರುತ್ತಿರಲಿಲ್ಲ. ದೇಶ, ವಿದೇಶ ಸುತ್ತುತ್ತಿದ್ದೆ. ನನ್ನ ಅನೇಕ ಪ್ರಶ್ನೆಗಳು ಮತ್ತು ಸಂದೇಹಗಳಿಗೆ ನನ್ನ ತಿರುಗಾಟದಲ್ಲಿ ಉತ್ತರ ಸಿಗುತ್ತಿತ್ತು. ಸಿಟ್ಟು ಮನುಷ್ಯನ ಸ್ವಭಾವಗಳಲ್ಲಿ ಒಂದು, ಆದರೆ ನನಗೆ ಯಾವತ್ತೂ ಸಿಟ್ಟು ಬರುವುದಿಲ್ಲ, ಸಿಟ್ಟು ಮನುಷ್ಯನಲ್ಲಿ ಋಣಾತ್ಮಕ ಅಂಶವನ್ನು ಹರಡುತ್ತದೆ. ಗುಮಾಸ್ತನಿಂದ ದೇಶದ ಪ್ರಧಾನಿಯವರೆಗೆ ನನ್ನ ಜೀವನದಲ್ಲಿ ಎಂದಿಗೂ ಸಿಟ್ಟು ತೋರಿಸಿಕೊಂಡಿರಲಿಲ್ಲ. ನನಗೆ ಸಿಟ್ಟು ಮಾಡಿಕೊಳ್ಳುವ ಸಂದರ್ಭ ಬಂದಿಲ್ಲದಿರಬಹುದು. ಸಭೆಯಲ್ಲಿ ಸಿಟ್ಟು ಬಂದರೆ ಅದು ಎಲ್ಲರನ್ನೂ ವಿಕೇಂದ್ರಿಕರಿಸುತ್ತದೆ. ಮೊದಲೆಲ್ಲಾ ಭಾವನೆಗಳು ಬಂದರೆ ಹಾಳೆಯಲ್ಲಿ ಬರೆಯುತ್ತಿದ್ದೆ. ನಂತರ ಆ ಬಗ್ಗೆ ವಿಮರ್ಶೆ ಮಾಡಿಕೊಳ್ಳುತ್ತಿದ್ದೆ. ಅದರಿಂದ ನನ್ನ ತಪ್ಪುಗಳು ನನಗೆ ನಂತರ ಅರ್ಥವಾಗುತ್ತಿದ್ದವು. ಇದು ಕಾಲಕ್ರಮೇಣ ಪರಿಸ್ಥಿತಿಗೆ ಹೊಂದಿಕೊಳ್ಳಲು ನನಗೆ ಸಹಾಯವಾಯಿತು.

ವಿರೋಧ ಪಕ್ಷಗಳಲ್ಲಿ ಉತ್ತಮ ಸ್ನೇಹಿತರಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನನಗೆ ವೈಯಕ್ತಿಕವಾಗಿ ಕುರ್ತಾ ಮತ್ತು ಸಿಹಿತಿಂಡಿಗಳನ್ನು ಕಳುಹಿಸುತ್ತಾರೆ. ನಾವೆಲ್ಲ ಸ್ನೇಹಿತರು ಸೇರಿ ವರ್ಷದಲ್ಲಿ ಒಂದೊ, ಎರಡೊ ಸಲ ಒಟ್ಟಿಗೆ ಕುಳಿತು ಊಟ ಮಾಡುತ್ತೇವೆ. ಹಲವು ವರ್ಷಗಳ ಹಿಂದೆ ನಾನಿನ್ನೂ ಗುಜರಾತ್ ಮುಖ್ಯಮಂತ್ರಿ ಕೂಡ ಆಗಿರಲಿಲ್ಲ. ಆಗ ಸಂಸತ್ತಿಗೆ ಯಾವುದೋ ಕೆಲಸದ ಮೇಲೆ ಹೋಗಿದ್ದೆ, ಅಲ್ಲಿ ಗುಲಾಂ ನಬಿ ಆಜಾದ್ ಮತ್ತು ನಾನು ಸ್ನೇಹಿತರಂತೆ ಕುಳಿತು ಮಾತನಾಡಿದೆವು. ಇಂದಿಗೂ ಸಹ ಮಮತಾ ದೀದಿಯವರು ವರ್ಷಕ್ಕೆ ಒಂದೊ-ಎರಡೊ ಅವರೇ ಆರಿಸಿದ ಕುರ್ತಾಗಳನ್ನು ನನಗೆ ಕಳುಹಿಸುತ್ತಾರೆ. ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ವರ್ಷದಲ್ಲಿ ಮೂರ್ನಾಲ್ಕು ಸಲ ಸಿಹಿತಿಂಡಿ ಕಳುಹಿಸುತ್ತಾರೆ. ಎಂದು ಹಲವು ವಿಚಾರಗಳನ್ನು ಕುರಿತು ಪ್ರಧಾನಿ ಮೋದಿಯವರು ಮಾತನಾಡಿದರು.