ಅಕ್ಷಯ ತೃತೀಯ ಹಿನ್ನೆಲೆ

0
557

ಅಕ್ಷಯ ತೃತಿಯಾ ಮಹತ್ವ

ವೈಶಾಖ ಶುಕ್ಲ ತೃತಿಯಾ, ಕೃತಿಕಾ ನಕ್ಷತ್ರ, ಸೌಭಾಗ್ಯ ಯೋಗ ತೈತಿಲಕರಣ.

ಅಕ್ಷಯ ತೃತಿಯಾ ಇದು ಕೃತಯುಗದ ಮೊದಲನೆಯ ದಿನವೆಂದು ಪರಿಗಣಿಸಲಾಗುತ್ತದೆ. ಆ ದಿನದಲ್ಲಿ ಮಾಡಿದ ಎಲ್ಲ ಕರ್ಮಗಳು ಕೂಡ ಅಕ್ಷಯವಾಗುತ್ತದೆ ಎಂದು ಶಾಸ್ತ್ರ ಹೇಳಿದೆ. ಇದು ವರ್ಷಕ್ಕೆ ಒಂದು ಬಾರಿ ಬರುವ ದಿನ. ಇವತ್ತು ಅದಷ್ಟು ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಪ್ರಯತ್ನ ಮಾಡಬೇಕು. ಏಕೆಂದರೆ ಆ ದಿನ ಮಾಡಿದ ಕೆಟ್ಟ ಕೆಸಲಗಳು ಅವು ವರ್ಷ ಪೂರ್ತಿ ಮುಂದು ವರೆಯುತ್ತವೆ. ವಿಶೇಷವಾಗಿ ಇವತ್ತು ಗಂಗಾಸ್ನಾನ, ತೀರ್ಥದರ್ಶನ, ಹೋಮ-ಹವನಗಳನ್ನು ಮಾಡುವುದಿದೆ. ಅಕ್ಕಿಯ ದಾನ ಕೂಡ ಮಾಡಬೇಕು.

“ಯಃ ಪಶ್ಯತಿ ತೃತಿಯಾಯಾಂ ಕೃಷ್ಣಂ ಚಂದನ ಭೂಷಿತಮ

ವೈಶಾಖಸ್ಯ ನೀತೇ ಪಕ್ಷೇಸಯಾತ್ಯಂಚ್ಯಚ್ಯುತ ಮಂದಿರಂ”

ಅರ್ಥ – ಶ್ರೀ ಕೃಷ್ಣನನ್ನು ಗಂಧದಿದಂದ ಪೂರ್ತಿಯಾಗಿ ಅಲಂಕಾರ ಮಾಡಿ ಆರಾಧಿಸಿದರೆ ವೈಕುಂಠ ಲೋಕ ಪ್ರಾಪ್ತಿಯಾಗುಗವುದು.

ಅಕ್ಷಯ ತೃತಿಯಾ ದಿನ ಅಲ್ಪ ಜಪ, ದಾನ, ಅಧ್ಯಯನ ಅಕ್ಷಯವಾಗಿ ಪರಿಣಮಿಸುವುದು. ಈ ದಿನಕ್ಕೆ ರೋಹಿಣಿ ನಕ್ಷತ್ರವು ಹಾಗೂ ಬುಧವಾರ ಮಹಾಪುಣ್ಯಕರವು. ಈ ದಿನವು ಮಹಾ ಪುಣ್ಯ ಮುಹೂರ್ತದಲ್ಲಿ ಒಂದಾಗಿದೆ. ಅವತ್ತು ಎಲ್ಲ ವಿಧವಾದ ಕಾರ್ಯಗಳನ್ನು ಆರಂಭಿಸಬಹುದು. ವಿಶೇಷವಾಗಿ ಜಲಕುಂಭ ದಾನವನ್ನು ಮಾಡಬೇಕು.

ಇನ್ನು ಅಕ್ಷಯ ತೃತೀಯದಂದು ಚಿನ್ನ ಖರೀದಿಸಿ ಅದನ್ನು ಧರಿಸಿದ್ರೆ, ಅಕ್ಷಯವಾಗುತ್ತೆ ಎಂಬ ನಂಬಿಕೆಯಿದೆ. ಹೀಗಾಗಿ ಪ್ರತೀ ವರ್ಷದಂತೆ ಈ ವರ್ಷವೂ ಚಿನ್ನ ಖರೀದಿಗೆ ಜನರು ಮೂಗಿಬಿದ್ದಿದ್ದಾರೆ.

ಮತ್ತೊಂದು ವಿಚಾರ ಅಂದ್ರೆ, ಚಿನ್ನ ಖರೀದಿ ಭರಾಟೆ ಪ್ರತಿವರ್ಷ ಏರುತ್ತಲೇ ಇದೆ. ಕಳೆದ ವರ್ಷ ಈ ದಿನದಂದು ರಾಜ್ಯದಲ್ಲಿ 1,325 ಕೆ.ಜಿ. ಚಿನ್ನ – 260 ಕೆ.ಜಿ. ಬೆಳ್ಳಿ ಮಾರಾಟವಾಗಿ, 368 ಕೋಟಿಗೂ ಅಧಿಕ ವಹಿವಾಟು ಕೂಡ ನಡೆದಿತ್ತಂತೆ.

ಒಟ್ಟಾರೆ, ಅಕ್ಷಯ ತೃತೀಯದಂದು ಕೇವಲ ಚಿನ್ನ ಖರೀದಿಗಷ್ಟೇ ಅಲ್ಲದೇ ವ್ರತಗಳು, ಹೊಸ ಕೆಲಸಗಳನ್ನು ಆರಂಭಿಸಲು ಒಳ್ಳೆಯ ದಿನ. ಹಾಗಾದರೆ ಮತ್ತೇಕೆ ತಡ. ಚಿನ್ನ ಖರೀದಿಸಿ, ಶುಭ ಕಾರ್ಯಗಳನ್ನು ನೀವು ಕೈಗೊಳ್ಳಿ..

ಸರ್ವರಿಗೂ ಅಕ್ಷಯ ತೃತೀಯದ ಶುಭಾಶಯಗಳು