ಹಿಂದೆ ಮುಂದೆ ನೋಡದೆ ಭಾರತೀಯ ಸೈನ್ಯ ಮತ್ತು ಭಾರತದ ಮೇಲೆ ನಿರಂತರ ದಾಳಿಗೆ ನಡೆಸಲು ಕರೆ ನೀಡಿದ ಉಗ್ರ ಅಲ್ ಕೈದಾ ಮುಖ್ಯಸ್ಥ ಜವಾಹರಿ..

0
126

ಮೊನ್ನೆಯಷ್ಟೇ ಗೃಹ ಸಚಿವಾಲಯವು ಕಾಶ್ಮೀರದಲ್ಲಿ ಗಡಿಯಾಚೆಗಿನ ಒಳನುಸುಳುವಿಕೆ ಶೇಕಡ 43ರಷ್ಟು ಕಡಿಮೆಯಾಗಿದೆ. ಭಯೋತ್ಪಾದಕ ಕೃತ್ಯಗಳು ಶೇಕಡ 28ರಷ್ಟು ಇಳಿಕೆಯಾಗಿವೆ, ಉಗ್ರ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳುವುದು ಶೇಕಡ 40ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿತ್ತು, ಇದರಿಂದ ಉಗ್ರರ ಅಟ್ಟಹಾಸ ಕಡಿಮೆಯಾಗಿದೆ ಎಂದು ತಿಳಿದ ದೇಶದ ಜನರಿಗೆ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಮುಖ್ಯಸ್ಥ ಐಮಾನ್ ಅಲ್ ಜವಾಹರಿ ಶಾಕ್ ನೀಡಿದ್ದು, ಕಾಶ್ಮೀರದಲ್ಲಿ ಹಿಂದೆಂದೂ ಕಾಣದಷ್ಟು ರಕ್ತಪಾತ ಆಗಲಿದೆ ಎಂದು ಹೇಳಿದ್ದಾನೆ.

ಹೌದು ಉಗ್ರರನ್ನು ಸುಟ್ಟುಹಾಕಿದ ನಂತರ ಮತ್ತೆ ಈ ಸಂಘಟನೆಗಳು ಬಾಂಗ್ಲಾದೇಶದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಹರಡಿತ್ತು, ಆದರೆ ಭಾರತದ ಮೇಲೆ ದಾಳಿ ಮಾಡಲು ಉಗ್ರ ಸಂಘಟನೆ ಅಲ್ ಕೈದಾ ಮುಖ್ಯಸ್ಥ ಕರೆ ನೀಡಿದ ವಿಡಿಯೋ ಬಿಡುಗಡೆ ಮಾಡಿದ್ದು. ಜತೆಗೆ ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಮುಕ್ತಗೊಳಿಸಲು ನಮ್ಮ ಸಂಘಟನೆ ಬದ್ಧವಾಗಿದೆ, ಈ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗಿದ್ದೇವೆ. ಮುಜಾಹಿದೀನ್‌ಗಳಿಗೆ ಅಲ್ ಕೈದಾ ಸೂಕ್ತ ತರಬೇತಿ ನೀಡುತ್ತಿದೆ ಎಂದಾತ ಹೇಳಿದ್ದಾನೆ.

ಭಾರತದ ಮೇಲೆ ದಾಳಿ ಮಾಡಲು ಅಲ್ ಕೈದಾ ಕರೆ?

ಹೌದು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಭಾರತೀಯ ಸೇನೆ ಮತ್ತು ಸರಕಾರದ ಮೇಲೆ ನಿರಂತರವಾಗಿ ಪ್ರಹಾರ ಮಾಡಿ ಎಂದು ಕಾಶ್ಮೀರದ ಮುಜಾಹಿದೀನ್​ಗಳಿಗೆ ಅಲ್-ಖೈದಾ ಮುಖ್ಯಸ್ಥರು ಕರೆ ನೀಡಿದ್ದಾರೆ. ಅಲ್-ಖೈದಾದ ಮಾಧ್ಯಮ ಘಟಕ ಬಿಡುಗಡೆ ಮಾಡಿರುವ 14 ನಿಮಿಷಗಳ ಭಾಷಣದ ವಿಡಿಯೊದಲ್ಲಿ ಆಯ್ಮಾನ್-ಅಲ್-ಜವಾಹಿರಿ ಅವರು ಭಾರತೀಯ ಆರ್ಥಿಕತೆಗೆ ಮಾರಕ ಪೆಟ್ಟು ಬೀಳುವಂತೆ ಮಾಡಿ ಎಂದು ಹೇಳಿದ್ದು, ಕಾಶ್ಮೀರದಲ್ಲಿ ನಡೆಯುತ್ತಿರುವುದು ಪ್ರತ್ಯೇಕ ಹೋರಾಟ ಮಾತ್ರವಲ್ಲ. ಅದು ವಿಶ್ವಾದ್ಯಂತ ವ್ಯಾಪಕ ಶಕ್ತಿಗಳ ವಿರುದ್ಧ ಮುಸ್ಲಿಮ್ ಸಮುದಾಯ ನಡೆಸುತ್ತಿರುವ ಜಿಹಾದ್(ಧರ್ಮ ಹೋರಾಟ)ನ ಒಂದು ಭಾಗವಾಗಿದೆ. ಈ ಸಂದೇಶವನ್ನು ಭಾರತದಲ್ಲಿರುವ ಮುಸ್ಲಿಮ್ ಸಮುದಾಯಗಳಿಗೆ ಪ್ರಸಾರ ಮಾಡಿ ಎಂದು ಅಲ್-ಖೈದಾ ಮುಖ್ಯಸ್ಥರು ಇಸ್ಲಾಮ್ ವಿದ್ವಾಂಸರುಗಳಿಗೆ ಕರೆ ನೀಡಿದ್ದಾರೆ.

ಭಾರತೀಯ ಆರ್ಥಿಕತೆಗೆ ಧಕ್ಕೆಗೆ ಪ್ಲಾನ್?

ಭಾರತೀಯ ಸೈನ್ಯ ಮತ್ತು ಭಾರತದ ಮೇಲೆ ನಿರಂತರ ದಾಳಿಗೆ ಕರೆ ನೀಡಿರುವ ಅಲ್ ಕೈದಾ ಮುಖ್ಯಸ್ಥ ಐಮಾನ್ ಇಲ್ ಜವಾಹರಿ ಕಾಶ್ಮೀರವನ್ನು ಸ್ವತಂತ್ರಗೊಳಿಸಲು ಬದ್ಧ, ಬೇಕಾದಷ್ಟು ಜನ ಬನ್ನಿ, ನಮ್ಮ ಸೈನಿಕರು ಕೂಡ ಕೊಲ್ಲಲ್ಲಿಕ್ಕೆ ತಯಾರಾಗಿದ್ದಾರೆ. ನಿಮ್ಮ ರಕ್ತ ಹರಿಸೋ ಆಸೆ ಇದ್ದರೆ ಹರಿಯಿಸಿ. ಅಷ್ಟೇ ಅಲ್ಲ ಗಡಿಯಲ್ಲಿ ಉಗ್ರವಾದದ ಬೆಂಕಿಗೆ ತುಪ್ಪ ಸುರಿಯುತ್ತಿರುವುದು ಪಾಕಿಸ್ತಾನ ಎಂಬ ಸತ್ಯಕ್ಕೆ ಮತ್ತಷ್ಟು ಪುಷ್ಟಿ ನೀಡುವ ಮಾತುಗಳನ್ನಾಡಿದ್ದು. ಏಕತ್ರ ಮನಸ್ಸಿನಿಂದ ಭಾರತೀಯ ಸೇನೆ ಮತ್ತು ಸರಕಾರದ ಮೇಲೆ ನಿರಂತರ ದಾಳಿ ನಡೆಸಿ, ಭಾರತದ ಆರ್ಥಿಕತೆಗೆ ಹೊಡೆತ ನೀಡಬೇಕು ಮತ್ತು ಭಾರತದ ಜಂಘಾಬಲವನ್ನು ಉಡುಗಿಸಬೇಕು ಎಂದಾತ ಕರೆ ಕೊಟ್ಟಿದ್ದಾನೆ. ಆದರೆ ಕಾಶ್ಮೀರದ ಮಸೀದಿಗಳು, ಮಾರುಕಟ್ಟೆಗಳು ಮತ್ತು ಮುಸ್ಲಿಮರ ಒಟ್ಟುಗೂಡಿಸುವ ಸ್ಥಳಗಳನ್ನು ಗುರಿಯಾಗಿಸಬೇಡಿ ಎಂದು ಜವಾಹರಿ ಉಗ್ರರಿಗೆ ಸಂದೇಶ ನೀಡಿದ್ದಾನೆ.

ಅಷ್ಟೇ ಅಲ್ಲದೆ ಕಾಶ್ಮೀರ, ಪಿಲಿಪ್ಪೈನ್ಸ್, ಚೆಚನ್ಯಾ, ಮಧ್ಯ ಏಷ್ಯಾ, ಇರಾಕ್, ಸಿರಿಯಾ, ಅರೇಬಿಯಾ, ಸೊಮಾಲಿಯಾ, ತುರ್ಕಿಸ್ತಾನ್ ಭಾಗಗಳಲ್ಲಿ ಜಿಹಾದ್​ಗೆ ಬೆಂಬಲ ನೀಡುವುದು ಎಲ್ಲಾ ಮುಸ್ಲಿಮರ ವೈಯಕ್ತಿಕ ಕರ್ತವ್ಯವಾಗಿದೆ. ಮುಸ್ಲಿಮರ ನಾಡುಗಳಿಂದ ಇಸ್ಲಾಮೇತರ ಆಡಳಿತ ತೊಲಗಿಸುವಷ್ಟು ಶಕ್ತಿ ಸಿಗುವವರೆಗೂ ಮುಸ್ಲಿಮರು ಮುಜಾಹಿದೀನ್​ಗಳ ಹೋರಾಟಕ್ಕೆ ಬೆಂಬಲ ನೀಡಬೇಕು ಎಂಬ ಸಂದೇಶವನ್ನು ನೀವೆಲ್ಲಾ ರವಾನಿಸಬೇಕು ಎಂದು ಜವಾಹಿರಿ ಆದೇಶಿಸಿದ್ದಾನೆ.