ಚಳಿ ಚಳಿಯಲ್ಲಿ ಬಿಸಿ ಬಿಸಿಯಾಗಿ ತಿನ್ನಿ ಆಲೂ ಬೋಂಡಾ..!!

0
956

ಬೇಕಾಗುವ ಸಾಮಾಗ್ರಿಗಳು

 • ಬೇಯಿಸಿದ ಆಲೂಗಡ್ಡೆ 3-4
 • ಹಸಿ ಮೆಣಸಿನ ಕಾಯಿ 2
 • 3/4 ಕಪ್ ಕಡಲೆ ಹಿಟ್ಟು ಮತ್ತು 1/4 ಕಪ್ ಸ್ವಲ್ಪ ಮೈದಾ
 • ಗರಂ ಮಸಾಲ 1 ಚಮಚ
 • ಸ್ವಲ್ಪ ಕೊತ್ತಂಬರಿ ಸೊಪ್ಪು
 • ರುಚಿಗೆ ತಕ್ಕ ಉಪ್ಪು
 • ಎಣ್ಣೆ

ಮಾಡುವ ವಿಧಾನ

 • ಆಲೂಗಡ್ಡೆಯನ್ನು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ ಸ್ಮಾಶ ಮಾಡಿ ಇಟ್ಟುಕೊಂಡಿರಿ.
 • ಬೇಯಿಸಿದ ಆಲೂಗೆಡ್ಡೆಗೆ ರುಚಿಗೆ ತಕ್ಕ ಉಪ್ಪು, ಗರಂ ಮಸಾಲ, ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಆಲೂ ಮಿಶ್ರಣದಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ಕಟ್ಟಿ.
 • ಈಗ ಮತ್ತೊಂದು ಪಾತ್ರೆಯಲ್ಲಿ ಮೈದಾ ಮತ್ತು ಕಡಲೆಹಿಟ್ಟು ಹಾಕಿ ಅದಕ್ಕೆ ರುಚಿಗೆ ತಕ್ಕ ಉಪ್ಪು ಹಾಕಿ ಮತ್ತು ನೀರು ಹಾಕಿ ಕಲೆಸಬೇಕು. ಮಿಶ್ರಣ ತುಂಬಾ ಗಟ್ಟಿಯಾಗಿರಬಾರದು, ನೀರು ನೀರಾಗಿಯೂ ಕೂಡ ಇರಬಾರದು.
 • ಈಗ ಕಾಯಿದ ಎಣ್ಣೆಗೆ ಆಲೂಗೆಡ್ಡೆ ಮಿಶ್ರಣದಿಂದ ಕಟ್ಟಿದ ಉಂಡೆಗಳನ್ನು ಮೈದಾದಲ್ಲಿ ಅದ್ದಿ ಕುದಿಯುತ್ತಿರುವ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವಾಗ ಕರಿಯಿರಿ.
 • ಈಗ ಬಿಸಿ ಬಿಸಿ ಆಲೂಬೋಂಡಾ ರೆಡಿ.