ಕ್ಯಾನ್ಸರ್- ನಿಂದ ಬಳಲುತ್ತಿರುವವರಿಗೆ ಸಿಹಿ ಸುದ್ದಿ; ಕಿಮೋಥೆರಪಿ ಸೇರಿ 9 ಔಷಧಿಗಳ ದರದಲ್ಲಿ 90 ರಷ್ಟು ಇಳಿಕೆ ಮಾಡಿದ ಎನ್​ಪಿಪಿಎ..

0
440

ವಿಷಪೂರಿತ ಆಹಾರ ಸೇವನೆ, ವಾತವರಣದಲ್ಲಿ ಆಗುತ್ತಿರುವ ಹೆಚ್ಚು ಮಾಲಿನ್ಯ, ಮತ್ತು ಮದ್ಯಪಾನ, ಧೂಮಪಾನಗಳ ಹವ್ಯಾಸದಿಂದ ಇಂದು ಕ್ಯಾನ್ಸರ್ ಅಂತ ಕಾಯಿಲೆಗಳು ಬರುತ್ತಿವೆ. ಈ ಭಯಾನಕ ಒಂದು ಸಾರಿ ಬಂದರೆ ಸಾಕು ವ್ಯಕ್ತಿಯು ಬದುಕುಳಿಯುವುದು ಅನುಮಾನವೆ ಇನ್ನೂ ಇದಕ್ಕೆ ಚಿಕಿತ್ಸೆ ಕೊಡಿಸಲು ಲಕ್ಷಾಂತರ ಹಣ ಬೇಕಾಗುತ್ತೆ. ಇಷ್ಟೊಂದು ದುಬಾರಿ ಬೆಲೆಯ ಔಷಧಿಗಳನ್ನು ಕೊಳ್ಳಲು ಬಡವರಿಗೆ ಯಾಕೆ ಹಣವಿದ್ದವರಿಗೆ ಕೆಲವು ಬಾರಿ ಕಷ್ಟವೆನಿಸುತ್ತೆ. ಇದೆಲ್ಲವನ್ನು ಅರಿತ ಕೇಂದ್ರ ಸರ್ಕಾರ ಕ್ಯಾನ್ಸರ್-ಗೆ ಸಂಬಧಿಸಿದ ಔಷಧಿಗಳ ದರ ಇಳಿಕೆ ಮಾಡಿದ್ದು ಕ್ಯಾನ್ಸರ್ ಪೀಡಿತರಿಗೆ ಭರವಸೆ ಮೂಡಿದೆ.

Also read: ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧ ದೊರೆಯಬೇಕು ಈ ಮೂಲಕ ಅವರ ಮೇಲಿನ ಆರ್ಥಿಕ ಹೊರೆ ತಗ್ಗಿಸಬೇಕು ಎಂಬ ಆಶಯದಿಂದ ರಾಷ್ಟ್ರೀಯ ಔಷಧ ದರ ಪ್ರಾಧಿಕಾರ (ಎನ್​ಪಿಪಿಎ) ಕ್ಯಾನ್ಸರ್ ನಿರೋಧಕ ಒಂಬತ್ತು ಔಷಧಗಳ ದರವನ್ನು ಶೇ. 90ರವರೆಗೂ ಇಳಿಸಿದೆ. ಔಷಧ ತಯಾರಕರು ಸಲ್ಲಿಸಿದ್ದ ವಿವರವನ್ನು ಪರಿಶೀಲಿಸಿದ ಎನ್​ಪಿಪಿಎ, ಕ್ಯಾನ್ಸರ್ ತಡೆಯುವ ಒಂಬತ್ತು ಔಷಧಗಳ ಚಿಲ್ಲರೆ ಮಾರಾಟ ದರವನ್ನು ನಿಯಂತ್ರಣಕ್ಕೆ ಒಳಪಡಿಸುವ ನಿರ್ಧಾರ ಕೈಗೊಂಡಿದೆ. ದರ ಇಳಿಕೆ ಮಾಡಲು ಸೂಚನೆ ನೀಡಿದ ಮಾತ್ರಕ್ಕೆ ಔಷಧದ ಉತ್ಪಾದನೆಯನ್ನು ಕಡಿಮೆ ಮಾಡುವಂತಿಲ್ಲ ಎಂದೂ ಎನ್​ಪಿಪಿಎ ಹೇಳಿದೆ.

ಕಿಮೋಥೆರಪಿಯ ದರ ಇಳಿಕೆ?

ಹೌದು NPPA ಕ್ಯಾನ್ಸರ್ ಚಿಕಿತ್ಸೆಗೆ ನೀಡಲಾಗುವ 9 ಔಷಧಿಗಳ ದರವನ್ನು ಸೇ. 87ರಷ್ಟು ಇಳಿಕೆ ಮಾಡಿದೆ ಇದಕ್ಕೆ ಕಾರಣ. ಈ ಒಂಭತ್ತು ಔಷಧಿಗಳಲ್ಲಿ ಶ್ವಾಸಕೋಶ ಕ್ಯಾನ್ಸರ್ ಚಿಕಿತ್ಸೆಯಲ್ಲಿ ನೀಡಲಾಗುವ ಕಿಮೋಥೆರಪಿ ಕೂಡಾ ಇದೆ ಎನ್ನಲಾಗಿದೆ. ಸಂಶೋಧನಾ ಆದೇಶದನ್ವಯ ಪೆಮೆಕ್ಸೆಲ್ (Pemxcel) ಬ್ರಾಂಡ್ ನಡಿಯಲ್ಲಿ ತಯಾರಾಗುವ 500 ಮಿಲಿ ಗ್ರಾಂ ಪೆಮೆಟ್ರೆಕ್ಸೆಡ್ (pemetrexed) ಇಂಜೆಕ್ಷನ್ ದರ 22 ಸಾವಿರ ರೂಪಾಯಿಂದ 2800 ರೂಪಾಯಿ ನಿಗದಿಪಡಿಸಲಾಗಿದೆ. ಇದರೊಂದಿಗೆ 100 ಮಿಲಿ ಗ್ರಾಂ ಡೋಸೇಜ್ ಇಂಜೆಕ್ಷನ್ ದರ 7700 ರೂಪಾಯಿಂದ ಇಳಿಸಿ, 800 ರೂಪಾಯಿ ನಿಗದಿಪಡಿಸಲಾಗಿದೆ.

Also read: ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಎಪಿಕ್ಲೋರ್(Epichlor) ಬ್ರಾಂಡ್ ನಡಿಯಲ್ಲಿ ಮಾರಾಟ ಮಾಡಲಾಗುತ್ತಿದ್ದ 10 ಮಿಲಿ ಗ್ರಾಂ ಎಪಿರೂಬಿಸಿನ್(epirubicin) ದರ 561 ರೂಪಾಯಿಂದ ಇಳಿಸಿ 276.8 ರೂಪಾಯಿ ನಿಗದಿಪಡಿಸಲಾಗಿದೆ. ಇದೇ ಇಂಜೆಕ್ಷನ್ ನ 50 ಮಿಲಿ ಗ್ರಾಂ ಡೋಸೇಜ್ ದರವನ್ನು 2,662 ರೂಪಾಯಿಂದ ಇಳಿಸಿ 960 ರೂಪಾಯಿ ನಿಗದಿಗೊಳಿಸಲಾಗಿದೆ. ಅದರಂತೆ ಎರ್ಲೊಟಾಜ್(Erlotaz) ಬ್ರಾಂಡ್ ನಡಿಯಲ್ಲಿ ತಯಾರಾಗುವ ಮಾತ್ರೆಗಳುಳ್ಳ, 100 ಮಿಲಿ ಗ್ರಾಂ ಎರ್ಲೋಟಿಬಿನ್(erlotinib) ಬೆಲೆಯನ್ನು 6600 ರೂಪಾಯಿಂದ ಇಳಿಸಿ, 1840 ರೂಪಾಯಿ ನಿಗದಿಗೊಳಿಸಲಾಗಿದೆ. ಇತ್ತ 150ಮಿಲಿ ಗ್ರಾಂನ 10 ಮಾತ್ರೆಗಳ ಪ್ಯಾಕ್ ಮೌಲ್ಯವನ್ನು 8800 ರೂಪಾಯಿಂದ 2400 ರೂಪಾಯಿ ಮಾಡಲಾಗಿದೆ.

Also read: ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಮಾರ್ಚ್ ಬಳಿಕ ಸತತ ಎರಡನೇ ಬಾರಿ NPPA ಕ್ಯಾನ್ಸರ್ ನಿವಾರಕ ಔಷಧಿಗಳ ಬೆಲೆಯನ್ನು ಇಳಿಕೆ ಮಾಡಿದ್ದು. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ NPPA, ಔಷಧ ದರದ ಮೇಲೆ ನಿಗಾ ಇರಿಸಿ ನಿಯಂತ್ರಿಸುತ್ತದೆ. ಈ ವರ್ಷ ಎರಡನೇ ಸಲ ಕ್ಯಾನ್ಸರ್ ನಿರೋಧಕ ಔಷಧಗಳ ಬೆಲೆ ತಗ್ಗಿಸಿದೆ. ಕಳೆದ ಮಾರ್ಚ್​ನಲ್ಲೂ ಕೆಲವು ಔಷಧಗಳ ದರ ಇಳಿಸಿತ್ತು. ಅನುಸೂಚಿತ ಪಟ್ಟಿಯಲ್ಲಿ ಗುರುತಿಸಲಾದ ಕ್ಯಾನ್ಸರ್ ತಡೆಯ 42 ಔಷಧಗಳನ್ನು 2013ರಲ್ಲಿ ದರ ನಿಯಂತ್ರಣಕ್ಕೆ ಒಳಪಡಿಸಲಾಯಿತು. ಇದರಿಂದ 390ಕ್ಕೂ ಹೆಚ್ಚು ಬ್ರಾಂಡ್-ಗಳ ದರ ತಗ್ಗಿಸಿದೆ.