ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಲೋಳೆಸರದ ಉಪಯುಕ್ತತೆಗಳು

1
3594

ಲೋಳೆಸರ (ಆಲೊವೆರಾ-Aloe Vera) ಒಂದು ರಸಭರಿತ ಜಾತಿಯ ಗಿಡ. ಇದರ ಹುಟ್ಟು ಆದದ್ದು ಉತ್ತರ ಆಫ್ರಿಕಾದಲ್ಲಿ. ಈ ಗಿಡವು ಕ್ರಿ.ಶ. ಒಂದನೆಯ ಶತಮಾನದಿಂದಲೂ ಒಂದು ಗಿಡಮೂಲಿಕೆಯ ಸಸ್ಯವೆಂದು ಕರೆಯಲ್ಪಟ್ಟಿದೆ. ಇದರ ರಸವನ್ನು ಊತ ಮತ್ತು ನೋವಿನ ಔಷಧವಾಗಿ ಬಳಸುವುದು ವಾಡಿಕೆಯಲ್ಲಿದೆ. ಈ ಸಸ್ಯವು ಸ್ವಾಭಾವಿಕವಾಗಿ ಹುಟ್ಟದೇ ಇದ್ದರೂ ಸಸ್ಯಗಳ ಗುಂಪಿನಲ್ಲಿ ಬೆಳೆದು ಬಂದಿದೆ ಎಂದು ಸಂಶೋಧನೆಗಳು ಹೇಳುತ್ತವೆ. ಕೆಲವು ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಇದರ ರಸವನ್ನು ಸೌಂದರ್ಯವರ್ಧಕ ಹಾಗೂ ಔಷಧಕ್ಕಾಗಿ ಬಳಸಬಹುದೆಂದು ಹೇಳಲಾಗಿದೆ

ಆಯುರ್ವೇದದಲ್ಲಿ ಬಹಳ ಬೇಡಿಕೆಯಿರುವ ಲೋಳೆಸರ ಗಿಡದಲ್ಲಿ ಅಮಿನೊ ಆಸಿಡ್ ಮತ್ತು ವಿಟಮಿನ್ ಗಳಾದ ಎ, ಎಫ್, ಸಿ ಮತ್ತು ಬಿಗಳಿರುತ್ತವೆ.

ಉಪಯುಕ್ತತೆ (ಬಳಕೆಗಳು)

1)ಇದನ್ನು ಸೌಂದರ್ಯವರ್ಧಕಗಳು ಮತ್ತು ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ಬಳಸುತ್ತಾರೆ.

2)ಜೀರ್ಣಕ್ರಿಯ ವೃದ್ಧಿ ಆಗುವದಕ್ಕು, ಎದೆ ಉರಿಯನ್ನು ಕಡೆಮೆಮಾಡುವುದರಲ್ಲಿ, ಮತ್ತು ಅಜೀರ್ಣ ಕಾರಣವಾಗಿ ಬರುವ ವ್ಯಾಧಿಗಳ ನಿವಾರಣೆಗೆ ಇದರ ರಸ ಚೆನ್ನಾಗಿ ಕೆಲಸಮಾಡುತ್ತದೆ.

3)ಇದರ ಸಾರ/ರಸವನ್ನು ಲೋಷನ್‌ಗಳು, ಕ್ರೀಂ‌ಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

4)ದಂತಕ್ಷಯ ನಿವಾರಣ ಮಾಡುತ್ತದೆ.

5)ಲೋಳೆಸರದ ರಸ/ಎಣ್ಣೆಯಂತಹ ಅಂಶವು ತಲೆಕೂದಲು ನೆರಯುವುದನ್ನು ಮತ್ತು ಬಿಳುಪಾಗುದನ್ನು ಕಡಿಮೆಮಾಡುತ್ತದೆ

6)ಆಯುರ್ವೇದದ ಪ್ರಕಾರ ಲೋಳೆಸರದ ಅಂಟು ರಸವನ್ನು ಜೇನಿನೊಂದಿಗೆ ಸತತವಾಗಿ ೩ತಿಂಗಳು ಸೇವಿಸುವುದರಿಂದ ಯಾವುದೇ ತರಹದ ಮುಟ್ಟಿನ ತೊಂದರೆಗಳು ಹಾಗು ಆ ಸಮಯದಲ್ಲಿ ಉಂಟಾಗುವ ಸೋಂಕುಗಳು ನಿವಾರಣೆ ಹೊಂದುತ್ತದೆ.

7)ಲೋಳೆಸರ ಹಚ್ಚುವುದರಿಂದ ನೋವು ಮತ್ತು ಊತ ಕಡಿಮೆಯಾಗುತದೆ.

8)ಲೋಳೆಸರದ ರಸವನ್ನು ದಿನಕ್ಕೆ ಮೂರು ಬಾರಿಯಂತೆ ಸೇವಿಸಿ. ಜೇನು ಮತ್ತು ಅದರ ಅರ್ಧದಷ್ಟು ಹರಳೆಣ್ಣೆ ಸೇರಿಸಿ ಸೇವಿಸಿದರೆ ಮೂಲವ್ಯಾಧಿ ಉಪಶಮನವಾಗುವುದು.

9)ಲೋಳೆರಸದ ತಿರುಳನ್ನು ಒಂದು ಚಮಚದಷ್ಟು ದಿನಕ್ಕೆ ಮೂರು ಬಾರಿ ಸೇವಿಸಬೇಕು. ಜೇನು ಮತ್ತು ಅದರ ಅರ್ಧದಷ್ಟು ಹರಳೆಣ್ಣೆ ಸೇರಿಸಿ ಸೇವಿಸಿದರೆ ಮೂಲವ್ಯಾಧಿ ಉಪಶಮನವಾಗುವುದು. ನಂತರ ಮಲುಗುವ ಮುನ್ನ ಒಂದು ಚಮಚ ಏಲಕ್ಕಿ ಮತ್ತು ಬಾಳೆ ಹಣ್ಣು ತಿನ್ನಬೇಕು. ಲೋಳೆಸರದ ತಿರುಳಿಗೆ ಹರಳೆಣ್ಣೆ ಬೆರೆಸಿ ರಾತ್ರಿ ಹೊತ್ತು ಮತ್ತು ಬೆಳಿಗ್ಗೆ ಮಲವಿಸರ್ಜನೆಯ ಮುಂಚೆ ಮತ್ತು ನಂತರದ ಸಮಯದಲ್ಲಿ ಹಚ್ಚಿದರೆ ಮಲವಿಸರ್ಜನೆಗೆ ಕಷ್ಟವಾಗುವುದಿಲ್ಲ.

10)ಲೋಳೆಸರದ ಎಲೆಯಲ್ಲಿ ಸಿಗುವ ಅಂಟು ರೀತಿಯ ಹೇರಳವಾದ ದ್ರವವನ್ನು ದೇಹದ ಯಾವುದೇ ಭಾಗಗಳಿಗೆ ಸುಟ್ಟ ಗಾಯವಾದ ತಕ್ಷಣವೇ ಹಚ್ಚಿದಲ್ಲಿ ಗಾಯದ ನೋವು, ಉರಿ ಸ್ವಲ್ಪ ಹೊತ್ತಿನಲ್ಲಿಯೇ ಕಡಿಮೆಯಾಗುತ್ತದೆ.

11)ತ್ವಚೆಯ ರಕ್ಷಣೆಯಲ್ಲಿ ಲೋಳೆಸರ ಅತ್ಯಂತ ಉಪಕಾರಿ. ಮುಖದ ಮೇಲೆ ನೆರಿಗೆ, ಕಪ್ಪು ಕಲೆ, ಮೊಡವೆ ಕಾಣಿಸಿಕೊಂಡಲ್ಲಿ ಲೋಳೆಸರದ ಜೆಲ್‍ನ್ನು ಒಂದು ತಿಂಗಳವರೆಗೆ ಹಚ್ಚುತ್ತಾ ಬಂದರೆ ಕಲೆ, ಸುಕ್ಕುಗುಟ್ಟುವಿಕೆ ಮಾಯವಾಗಿ ಹೊಸ ಕಾಂತಿ ಬರುತ್ತದೆ.

12)ಒಣ ಚರ್ಮದವರಿಗೆ ಲೋಳೆಸರದ ಜೆಲ್ ಉತ್ತಮ. ಮುಖಕ್ಕೆ ಮೇಕಪ್ ಮಾಡಿಕೊಳ್ಳುವ ಮೊದಲು ಇದನ್ನು ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟ ನಂತರ ಮುಖ ತೊಳೆದುಕೊಂಡು ಆಮೇಲೆ ಮೇಕಪ್ ಮಾಡಿಕೊಳ್ಳಬೇಕು.

13)ಪುರುಷರು ಶೇವ್ ಮಾಡಿಕೊಳ್ಳುವ ಸಂದರ್ಭದಲ್ಲಿ ಗಾಯಗಳಾದರೆ ಲೋಳೆಸರವನ್ನು ಹಚ್ಚಿಕೊಂಡರೆ ನೋವು, ಗಾಯ, ರಕ್ತ ಬರುವುದು ನಿಲ್ಲುತ್ತದೆ.

14)ಚಳಿಗಾಲದಲ್ಲಿ ಚರ್ಮ, ಒಡೆಯುವುದು ಅಥವಾ ಒಣಗುವುದು ಸಾಮಾನ್ಯ. ಆಗ ಲೋಳೆಸರದ ದ್ರವವನ್ನು ಜೇನಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ತೊಳೆದರೆ ಮುಖ ಕಾಂತಿಯುಕ್ತವಾಗುತ್ತದೆ.

15)ದೇಹದಲ್ಲಿ ಕೊಬ್ಬು ಸಂಗ್ರಹವಾದಾಗ ಇಲ್ಲವೇ ಗರ್ಭಿಣಿ ಮಹಿಳೆಯರಿಗೆ ಹೊಟ್ಟೆಯ ಭಾಗದಲ್ಲಿ ಗೆರೆಗಳು ಉಂಟಾದರೆ ಆ ಭಾಗದಲ್ಲಿ ನಿತ್ಯವೂ ಲೋಳೆಸರವನ್ನು ಹಚ್ಚುತ್ತಾ ಬಂದರೆ ಕೆಲ ದಿನಗಳಲ್ಲಿ ಗೆರೆಗಳು ಮಾಯವಾಗುತ್ತದೆ.

16)ಆಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಲೋಳೆಸರದ ದ್ರವವನ್ನು ಬೆಳಿಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಾ ಬಂದರೆ ಸಮಸ್ಯೆ ನಿವಾರಣೆಯಾಗುತ್ತದೆ.

17)ಲಿಲ್ಲಿಯೇಸಿಯಾ ಎಂಬ ಕುಟುಂಬಕ್ಕೆ ಸೇರಿದ ಲೋಳೆಸರವನ್ನು ಆಂಗ್ಲ ಭಾಷೆಯಲ್ಲಿ ಅಲೋಯಿ  ಅಥವಾ ಅಲೊವೆರಾ ಎಂದು ಕರೆಯುತ್ತಾರೆ.

18)ಬಕ್ಕತಲೆ ಉಂಟಾಗುವುದನ್ನು ತಡೆಯುತ್ತದೆ ಬಕ್ಕ ತಲೆ ಹೆಚ್ಚಿನ ಪುರುಷರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಬಕ್ಕೆ ತಲೆ ಉಂಟಾಗುತ್ತಿದ್ದರೆ  ಪ್ರತಿದಿನಾ ಲೋಳೆಸರ ಹಚ್ಚಿ. ಈ ರೀತಿ2-3 ಕಾಲದವರೆಗೆ ಹಚ್ಚಿದರೆ ಹೊಸ ಕೂದಲು ಹುಟ್ಟುತ್ತದೆ.