ಫೇಸ್ಬುಕ್ ನಲ್ಲಿ ಅತಿ ಹೆಚ್ಚು ಟ್ರೊಲ್ ಹಾಗು ಮೆಮೆಗಳಿಗೆ ಒಳಗಾದ ಈ ನಟ ಯಾರು?

0
2109

ಫೇಸ್ಬುಕ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಟ್ರೊಲ್ ಹಾಗು ಮೆಮೆಗಳಿಗೆ ಒಳಗಾದ ಈ ಬಾಂಗ್ಲಾ ನಟನ ಬಗ್ಗೆ ನೀವು ತಿಳಿದು ಕೊಳ್ಳಲೇ ಬೇಕು

al

ಇತನ ಹೆಸರು ಅಲೋಮ್ ಬೋಗ್ರ ,ಫೇಸ್ಬುಕ್ ಮತ್ತು ಯುಟ್ಯೂಬ್ ನಲ್ಲಿ ತನ್ನ ಜನಪ್ರಿಯ ಸಂಗೀತ ವೀಡಿಯೊಗಳು ಹೆಸರುವಾಸಿಯಾಗಿದೆ .

ಬಾಂಗ್ಲಾದೇಶ ಬೋಗರ ಜಿಲ್ಲೆಯ ಯೂರಿಲಾ ಗ್ರಾಮದವನು.ಸೋಕಲ್-ಸಾಂಧಾ ಎಂಬ ಯಶಸ್ವಿ ಕೇಬಲ್ ನೆಟ್ವರ್ಕ್ ವ್ಯಾಪಾರ ನಡೆಸುತ್ತಿದ್ದಾನೆ.
೨೦೦೮ ರಲ್ಲಿ , ತನ್ನ ಮೊದಲ ಸಂಗೀತ ವೀಡಿಯೊವನ್ನು ಯಾರೋ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಾಗ ಅದು ರಾತ್ರೋರಾತ್ರಿ ಪ್ರಖ್ಯಾತವಾಗಿತ್ತು, ಈಗ 500 ಕ್ಕೂ ಹೆಚ್ಚು ಸಂಗೀತ ವೀಡಿಯೊಗಳನ್ನು ಸೃಷ್ಟಿಸಿದ್ದಾರೆ ಎಲ್ಲವು ವೈರಲ್ ಆಗಿದೆ.

amol-3

ಅಲೋಮ್ ಗೆ ೧೦ ವರ್ಷ ವಯಸಿದ್ದಾಗ ಆತನ ತಂದೆ ಮರು ಮದುವೆ ಮಾಡಿಕೊಂಡು ಅಲೋಮ್ ಹಾಗು ಅವರ ತಾಯಿಯನ್ನು ಬೀದಿ ಪಾಲು ಮಾಡಿಬಿಟ್ಟರು, ಕುಟುಂಬಕ್ಕೆ ಯಾವುದೇ ಆದಾಯದ ಮೂಲವಿಲ್ಲದ ಕಾರಣ ಅಲೋಮ್ ಸ್ವತಃ ತನ್ನ ತಂದೆ ಮಾಡುತ್ತಿದ್ದ ಕುರುಕಲು ತಿಂಡಿ ವ್ಯಾಪಾರವನ್ನು ತಾನು ಮಾಡಲು ನಿರ್ಧರಿಸಿದ್ದ.

8 ನೇ ತರಗತಿ ಪರೀಕ್ಷೆಯಲ್ಲಿ ವಿಫಲವಾದ ನಂತರ ಕುರುಕಲು ತಿಂಡಿ ವ್ಯಾಪಾರದೊಂದಿಗೆ ಒಂದು ಸಣ್ಣ ವಿಡಿಯೋ ಅಂಗಡಿಯಲ್ಲಿ ಕೆಲಸ ಮಾಡಲು ಶುರು ಮಾಡಿದನು ಸಮಯ ಸಿಕ್ಕಾಗಲೆಲ್ಲ ವೀಡಿಯೊಗಳನ್ನು ವೀಕ್ಷಿಸುತ್ತಿದ್ದನು.

ಅಲೋಮ್ಗೆ ಇತ್ತೀಚೆಗೆ 2 ಚಿತ್ರ , ಎರಡು ಟಿವಿ ನಾಟಕಗಳು ಮತ್ತು ಟಿವಿ ಜಾಹೀರಾತುಗಳಲ್ಲಿ ಕೆಲಸ ಮಾಡಲು ಅವಕಾಶಗಳು ದೊರೆತವು ಹಾಗು ಒಂದು ರಾಪ್ ಹಾಡನ್ನು ಸಹ ಹಾಡಿದ್ದಾರೆ.
USA ಹಾಗು ಸಿಂಗಾಪುರದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶಗಳು ಸಹ ದೊರೆತವು.ಸಲ್ಮಾನ್ ಖಾನ್ ಚಿತ್ರದ ಹಾಡುಗಳನ್ನು ಆದರಿಸಿ ಒಂದು ಸಂಗೀತ ವೀಡಿಯೊವನ್ನು ಸಹ ಮಾಡಿದರು.

Why-girls-are-geeting-mad-over-Alom-Bogra-500x263

ಕಷ್ಟಪಟ್ಟು ಬೆಳೆದ ಅಲೋಮ್ ಇಂದು ಎರಡು ವ್ಯವಹಾರಗಳನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. ಇದಲ್ಲದೆ ತನ್ನ ಬಹಳ ಇಷ್ಟದ ಮಾಡೆಲಿಂಗ್ ಲೋಕದಲ್ಲಿ ಅಂದದ ಚಂದದ ಹೆಣ್ಮಕ್ಳ ಜೊತೆ ಮಿಂಚುತ್ತಿದ್ದಾರೆ ಇದನ್ನು ಕಂಡು ಹೊಟ್ಟೆ ಉರಿ ಪಟ್ಟ ಗಂಡ್ಮಕ್ಳ ಸಂಖ್ಯೆ ಅಸಂಖ್ಯಾತ ಇತ ನೋಡಲು ಕಪ್ಪು ಅಷ್ಟೇನು ಆಕರ್ಷಕವಾಗಿಲ್ಲ ಆದರೆ ಯಾವಾಗಲೂ ಚಂದದ ಚೆಲುವೆಯರ ಜೊತೆ ನಟನೆ ಮಾಡುತ್ತಾರೆ ಅದೇ ಕಾರಣಕ್ಕೆ ಇತ ಅತಿ ಹೆಚ್ಚು ಟ್ರೊಲ್ ಹಾಗು ಮೆಮೆ ಗಳಿಗೆ ಒಳಗಾಗಿರುವುದು.

2016_12image_23_57_047132432alom

ಇತನು ಒಂದು ರೋಲ್ ಮಾಡೆಲ್ ಅಲ್ಲವೇ ತನ್ನ ಬಾಲ್ಯವನ್ನು ಕತ್ತಲಲ್ಲಿ ಕಳೆದು ತನ್ನ ಕನಸನ್ನು ಹುಡುಕುತ್ತ ಹೊರಟವನು , ಕನಸನ್ನು ನನಸು ಮಾಡಿಕೊಂಡವನು
ದೇಹದ ಕುರೂಪವನ್ನೇ ಪಾಸಿಟಿವ್ ಆಗಿ ಬದಲಾಯಿಸಿಕೊಂಡವನ್ನು ಇತನು ನಿಜ ಜೀವನದ ಹೀರೋ ಅಲ್ಲವೇ ?