ಆಲೂ ದೋಸಕಾಯ ಮಸಾಲೆ

0
1734

Kannada News | Health tips in kannada

ಬೇಕಾಗುವ ಸಾಮಗ್ರಿ:

 • ಬೇಯಿಸಿದ ಆಲೂಗಡ್ಡೆ ಹೋಳು-1/2 ಕಪ್ (ಆಲೂ ಹೋಳು ಗಟ್ಟಿಯಾಗಿ ಬೆಂದಿರಲಿ),
 • ಸಿಪ್ಪೆ ತೆಗೆದ ದಪ್ಪ ಸೌತೆಕಾಯಿ ಹೋಳು-1/2 ಕಪ್,
 • ಹಸಿಮೆಣಸಿನಕಾಯಿ-4,
 • ಖಾರದ ಪುಡಿ-1 ಚಮಚ,
 • ಶುಂಠಿ, ಬೆಳ್ಳುಳ್ಳಿ ಮಿಶ್ರಣ-1 ಚಮಚ,
 • ಈರುಳ್ಳಿ-1/2 ಕಪ್,
 • ಟೊಮೆಟೊ-1,
 • ಜೀರಿಗೆ-1/4 ಚಮಚ,
 • ಗೋಡಂಬಿ-3,
 • ಶೇಂಗಾ ಬೀಜ-1 1/2 ಚಮಚ,
 • ಚಕ್ಕೆ-1 ತುಂಡು,
 • ಲವಂಗ-3,
 • ಕಸೂರಿ ಮೇಥಿ-1 ಚಮಚ,
 • ಗರಂ ಮಸಾಲ-1/4 ಚಮಚ,
 • ಎಣ್ಣೆ-ಕರಿಯಲು,
 • ಕೊತ್ತಂಬರಿ ಸೊಪ್ಪು-1 ಚಮಚ,
 • ಧನಿಯಾ-1/2 ಚಮಚ.

ಮಾಡುವ ವಿಧಾನ:

ಆಲೂಗಡ್ಡೆ ಸಿಪ್ಪೆ ತೆಗೆದ ಹೋಳುಗಳನ್ನು ಎಣ್ಣೆಯಲ್ಲಿ ಕರಿದು ತೆಗೆದು ಟಿಶ್ಶೂ ಹಾಳೆಯ ಮೇಲೆ ಹರಡಿ. ಗೋಡಂಬಿ, ಶೇಂಗಾ ಬೀಜ, ಧನಿಯಾ ಹು-ರಿದು ಅದಕ್ಕೆ ಟೊಮೆಟೊ ಸೇರಿಸಿ ಹುರಿದು ರುಬ್ಬಿಕೊಳ್ಳಿ. ಒಗ್ಗರಣೆಯಲ್ಲಿ ಸಾಸಿವೆ, ಜೀರಿಗೆ, ಚಕ್ಕೆ, ಲವಂಗ ಹುರಿದು ಈರುಳ್ಳಿ, ಸೌತೆಕಾಯಿ ಹೋಳು, ಉಪ್ಪು ಸೇರಿಸಿ ಹುರಿಯಿರಿ. ಬೆಂದು ಮೆತ್ತಗಾದಾಗ ಶುಂಠಿ, ಬೆಳ್ಳುಳ್ಳಿ ಮಿಶ್ರಣ ಸೇರಿಸಿ ಹು-ರಿಯಿರಿ. ನಂತರ ರುಬ್ಬಿದ ಮಸಾಲೆ ಸೇರಿಸಿ ಒಂದು ಕುದಿ ಬಂದಾಗ ಆಲೂಗಡ್ಡೆ, ಗರಂ ಮಸಾಲೆ, ಖಾರದ ಪುಡಿ ಸೇರಿಸಿ ಗ್ರೇವಿ ಹದಕ್ಕೆ ಕುದಿಸಿ. ಕಸೂರಿ ಮೇಥಿ ಸೇರಿಸಿ. ಚೆನ್ನಾಗಿ ಕುದಿ ಬಂದ ನಂತರ ಇಳಿಸಿ. ಚಪಾತಿ, ಪುಲ್ಕ ಜೊತೆ ಸವಿಯಲು ರುಚಿ.

Also Read: ಇವೆಲ್ಲಾ ರಾತ್ರಿಯಲ್ಲು ಸಹ ಸಾಕಷ್ಟು ಆಮ್ಲಜನಕವನ್ನು ಬಿಡುಗಡೆ ಮಾಡುವ ಸಸ್ಯಗಳು – ಮನೆಯಲ್ಲಿದ್ದರೆ ಬಹಳ ಒಳ್ಳೆಯದು!