ಸುಸ್ತು ಸುಸ್ತು ಅಂತ ಸುಮ್ನೆ ಮಲಗಿ ಜೀವನ ವೇಸ್ಟ್ ಮಾಡ್ಕೊಳೋ ಬದ್ಲು ಈ ಟಿಪ್ಸ್ ಅಳವಡಿಸ್ಕೊಳಿ ಲೈಫ್ ಎಂಜಾಯ್ ಮಾಡಿ!!!

0
5464

ಹಲವರಲ್ಲಿ ನಿಶ್ಯಕ್ತಿ ಸಿಕ್ಕಾಪಟ್ಟೆ ಕಾಟ ಕೊಡ್ತಿರುತ್ತೆ. ಸ್ವಲ್ಪನೇ ಕೆಲಸ ಮಾಡಿದ್ರು ಜಾಸ್ತಿ ಸುಸ್ತಾಗೋವಂತ ತುಂಬಾ ಜನ ನಮ್ಮ ಮಧ್ಯನೇ ಇದಾರೆ. ಸುಸ್ತು ಖಾಯಿಲೆಯ ಗುರುತಾಗಿರಬಹುದು.ಥೈರಾಯಿಡ್ ಸಮಸ್ಯೆ, ಅಜೀರ್ಣ, ಮಲಬದ್ಧತೆ, ಮಧುಮೇಹ, ಅಧಿಕ ರಕ್ತದೊತ್ತಡ, ಅಪೌಷ್ಟಿಕತೆ, ರಕ್ತಹೀನತೆ, ಮಾನಸಿಕ ಒತ್ತಡ  ಇತರೆ ಹತ್ತು ಹಲವು ಸಮಸ್ಯೆಗಳು ನಿಶ್ಯಕ್ತಿಗೆ ಮೂಲ ಕಾರಣವಾಗಿರಬಹುದು.

ನಿಶ್ಯಕ್ತಿಯನ್ನು ಹೋಗಲಾಡಿಸಲು ಸಹಾಯ ಮಾಡುವ ಆಹಾರಗಳು ಯಾವುದೆಂದು ಹೇಳ್ತಿವಿ ಮುಂದೆ ಓದಿ.

೧) ಬಾಳೆಹಣ್ಣು, ಸೇಬು ಮತ್ತು ಕ್ಯಾರಟ್ ಅನ್ನು ಸಣ್ಣದಾಗಿ ಹೆಚ್ಚಿ ಎಲ್ಲವನ್ನು ಸೇರಿಸಿ ಅದಕ್ಕೆ ೧/೨ ಚಮಚ ಬಾದಾಮಿ ಪುಡಿ ಮತ್ತು ಬೆಲ್ಲ (ಬೇಕಾದರೆ) ಹಾಕಿ ಸೇವಿಸುವುದರಿಂದ  ಒಳ್ಳೆಯ ಪೌಷ್ಟಿಕಾಂಶಗಳು ದೇಹಕ್ಕೆ ಸೇರಿ ಶಕ್ತಿ ಬರುತ್ತದೆ.

source: evolutionfresh.com

೨) ಅಂಜೂರ ಮತ್ತು ದ್ರಾಕ್ಷಿಯನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಿಶ್ಯಕ್ತಿ ದೂರವಾಗುತ್ತದೆ.

source: yogarose.net

೩) ಪ್ರತಿನಿತ್ಯ ೫೦ ಗ್ರಾಂ ನಟ್ಸ್ ಸೇವಿಸಬೇಕು.

೪) ಓಟ್ಸ್ ನಲ್ಲಿ ನೀರಿನಲ್ಲಿ ಕರಗುವಂತಹ ನಾರಿನಂಶವಿದ್ದು ಉತ್ತಮ ಕಾರ್ಬೊಹೈಡ್ರಾಟ್ಗಳು ನಿಧಾನವಾಗಿ  ರಕ್ತಗತವಾಗುವುದರಿಂದ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.

೫) ಖರ್ಜೂರದಲ್ಲರುವ ಕಬ್ಬಿನಂಶವು ರಕ್ತಹೀನತೆಯನ್ನು ಹಿಮ್ಮೆಟಿಸಿ ನಿಶ್ಯಕ್ತಿಯನ್ನು ಕಡಿಮೆ ಮಾಡುತ್ತದೆ.

೬) ಚಿಕ್ಕು ಹಣ್ಣಿನ ಒಳತಿರುಳಿಗೆ ಒಣಖರ್ಜೂರ, ಕಾಲು ಚಮಚ ಗಸಗಸೆ, ಹಾಲನ್ನು ಬೆರಸಿ ಸೇವಿಸುವುದರಿಂದ ಸುಸ್ತು ಕಡಿಮೆಯಾಗುತ್ತದೆ.

source: i2.wp.com

೭) ಮಾವಿನಹಣ್ಣು, ಬಾಳೆಹಣ್ಣು ಮತ್ತು ಸ್ಟ್ರಾಬೆರಿ ಗಳಲ್ಲಿರುವ ಪೋಷಕಾಂಶಗಳು ಸುಸ್ತನ್ನು ಶಮನಗೊಳಿಸಲು ಸಹಕಾರಿಯಾಗಿವೆ.

source: marinmamacooks.com

೮) ಯಾವುದೇ ಕಾರಣಕ್ಕೂ ಊಟವನ್ನು ತಪ್ಪಿಸಬೇಡಿ ಇದರಿಂದ ನಿಮ್ಮ ಮೆಟಬೋಲಿಸಂ ಕಡಿಮೆಯಾಗುವುದೇ ಸುಸ್ತನ್ನು ಅಧಿಕಗೊಳಿಸುತ್ತದೆ. ನಿರ್ಧಿಷ್ಟ ವೇಳೆಯಲ್ಲಿ ನಿಯಮಿತ ಆಹಾರ ಸೇವಿಸಿ.

೯ ) ದಿನಕ್ಕೆ ೬-೭ ಗಂಟೆಯ ಕಾಲ ಯಾವುದೇ ತಡೆಯಿಲ್ಲದೆ ನಿದ್ದೆ ಮಾಡಿ. ನಿದ್ರೆಯ ಸಮಯದಲ್ಲಿ ಮೊಬೈಲ್, ಟಿವಿ ಮತ್ತು ಮನಸ್ಸಿಗೆ ಉದ್ವೇಗ ನೀಡುವ ವಸ್ತು/ವ್ಯಕ್ತಿ/ಸನ್ನಿವೇಶಗಳಿಂದ  ದೂರವಿರಿ.

೧೦ ) ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡಿ ಇದರಿಂದ ಸ್ನಾಯುಗಳ ಬಲ ಹೆಚ್ಚಾಗಿ ಮಂಕುತನ ಕಡಿಮೆಯಾಗುತ್ತದೆ.