ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ತಲೆಸ್ನಾನ ಮಾಡಿದರೆ ಏನಾಗುತ್ತೆ ಗೊತ್ತಾ …?

0
2448

ನಮ್ಮ ಸಂಪ್ರದಾಯದ ಆಚರಣೆಗಳಲ್ಲಿ ವೈಜ್ಞಾನಿಕ ಸತ್ಯಗಳಿರುವಂಥವು ಎಷ್ಟೋ ವಿಷಯಗಳಿವೆ. ಸಂಪ್ರದಾಯವನ್ನು ತಿಳಿದವರು ಒಂದೇ ಆಚಾರದಲ್ಲಿ ಸದಾಚಾರದ ಅಂಶಗಳೂ ಇರಬಹುದು, ವೈಜ್ಞಾನಿಕವಾದ ಅಂಶಗಳೂ ಇರಬಹುದು ಎಂಬುವ ನಂಬಿಕೆ ಉಳ್ಳವರಾಗಿರುತ್ತಾರೆ. ಅದೇ ಸಂಪ್ರದಾಯವನ್ನು ತಿಳಿಯದೇ ಇರುವವರು ಇಂತಹ ಆಚಾರಗಳನ್ನು ಅಸಡ್ಡೆಯಿಂದ ತಳ್ಳಿಹಾಕುತ್ತಾರೆ. ಹಿಂದೂ ಸಂಪ್ರದಾಯಗಳಲ್ಲಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಮನೆಯಲ್ಲಿ ಅನುಸರಿಸಬೇಕಾದ ಕ್ರಮಗಳು ಮತ್ತು ನಿಯಮಗಳ ಬಗ್ಗೆ ತಿಳಿದುಕೊಳ್ಳುವ ಕಾಳಜಿ ಇರುವುದಿಲ್ಲ. ನಮ್ಮ ಪೂರ್ವಜರು ಸಾಮಾನ್ಯವಾಗ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಕೆಲವು ನಿಯಮಗಳನ್ನು ಮಾಡಿದ್ದಾರೆ. ನೀವು ಕೇಳೇ ಇರುತ್ತೀರಾ. ನಿಮ್ಮ ಮನೆಯಲ್ಲಿ ಹಿರಿಯರು ಅಮಾವಾಸ್ಯೆ ಮತ್ತು ಹುಣ್ಣಿಮೆ ಈ ತಿಥಿಗಳಂದು ಕೂದಲುಗಳನ್ನು ತೊಳೆಯಬಾರದು ಎಂದು ಹೇಳುತ್ತಿರುತ್ತಾರೆ. ಅದು ಯಾಕೆ ಹೀಗೆ ಅಂತ ಕೇಳುವ ಗೋಜಿಗೆ ಯಾರು ಹೋಗುವುದಿಲ್ಲ.

ಅಮಾವಾಸ್ಯೆಯಂದು ಕೆಟ್ಟ ಶಕ್ತಿಗಳ ರಜ-ತಮಾತ್ಮಕ ಪ್ರಕ್ಷೇಪಣೆಯು ಅಧಿಕವಾಗಿರುವುದರಿಂದ ವಾಯುಮಂಡಲವು ಕಲುಷಿತವಾಗಿರುತ್ತದೆ. ಮತ್ತು ಹುಣ್ಣಿಮೆಯಂದು ಕೆಟ್ಟ ಶಕ್ತಿಗಳು ಉಪಾಸನೆಯನ್ನು ಮಾಡುತ್ತವೆ, ಆದುದರಿಂದ ಅವರೆಡೆಗೆ ಬರುವ ರಜ-ತಮಾತ್ಮಕ ಲಹರಿಗಳ ಪ್ರವಾಹವು ಹೆಚ್ಚಿರುತ್ತದೆ. ಅಂದರೆ ಒಟ್ಟಿನಲ್ಲಿ ಈ ಎರಡೂ ದಿನಗಳಲ್ಲಿ ವಾಯುಮಂಡಲದಲ್ಲಿನ ರಜ-ತಮಾತ್ಮಕ ಲಹರಿಗಳು ಕೆಟ್ಟ ಶಕ್ತಿಗಳ ಕಾರ್ಯದಿಂದ ಜಾಗೃತವಾಗಿರುತ್ತವೆ. ಆದುದರಿಂದ ಈ ಎರಡು ತಿಥಿಗಳಲ್ಲಿ ತೊಳೆದರೆ ಕೂದಲುಗಳಿಂದ ತ್ರಾಸದಾಯಕ ಲಹರಿಗಳು ಗ್ರಹಿಸುತ್ತವೆ.

ಸ್ತ್ರೀಯರಂತೆ ಪುರುಷರೂ ಕೂದಲುಗಳನ್ನು ಈ ಎರಡು ದಿನಗಳಲ್ಲಿ ತೊಳೆದುಕೊಳ್ಳಬಾರದು ಕಾರಣ ಈ ಎರಡು ದಿನಗಳಲ್ಲಿ ವಾಯುಮಂಡಲದಲ್ಲಿನ ರಜ-ತಮಾತ್ಮಕ ಲಹರಿಗಳು ನಮ್ಮೆಡೆಗೆ ಆಕರ್ಷಿಸಬಾರದೆಂದು ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು. ಈ ದಿನಗಳಲ್ಲಿ ಕೂದಲನ್ನು ಬಿಚ್ಚಬಾರದು ಅಂತ ಕೂಡ ಹೇಳುತ್ತಾರೆ. ಕೂದಲುಗಳ ತುದಿಗಳು ತೆರೆಯಲ್ಪಡುವುದರಿಂದ ಕೇಶನಳಿಕೆಗಳಿಂದ ರಜ-ತಮಾತ್ಮಕ ಲಹರಿಗಳು ಕೂದಲುಗಳಲ್ಲಿ ಸೇರಿಕೊಂಡು ಕೂದಲುಗಳ ಬುಡದಲ್ಲಿ ಘನೀಭವಿಸುತ್ತವೆ. ಇದರಿಂದ ಕೂದಲುಗಳ ಬುಡದಲ್ಲಿ ಕೆಟ್ಟ ಶಕ್ತಿಗಳ ಸ್ಥಾನಗಳು ನಿರ್ಮಾಣವಾಗುತ್ತವೆ ಆದುದರಿಂದ ರಜ-ತಮದ ಪ್ರಾಬಲ್ಯವಿರುವ ದಿನಗಳಲ್ಲಿ ಕೂದಲುಗಳನ್ನು ತೊಳೆಯುವ ಕೃತಿಯನ್ನು ಮಾಡಬಾರದು.