ಬೆಳ್ಳುಳ್ಳಿಯ ಉಪಯೋಗಗಳು ಗೊತ್ತಾದ್ರೆ ಎದ್ದ ತಕ್ಷಣ ಒಂದು ಎಸಳು ಬಾಯಿಗೆ ಹಾಕ್ಕೊತೀರಾ…

1
7632

ನಾವು ದಿನನಿತ್ಯ ಬಳಸುವ ಆಹಾರದಲ್ಲಿ ಪ್ರಮುಖವಾದವು ಬೆಳ್ಳುಳ್ಳಿ.ಬೆಳ್ಳುಳ್ಳಿಯು ಅತ್ತ್ಯುತ್ತಮ ಜೀರ್ಣಕಾರಕ ವಸ್ತು.ಇದು ನರಗಳಲ್ಲಿ ಚೈತನ್ಯ ತುಂಬುತ್ತದೆ. ಚಳಿಗಾಲದಲ್ಲಿ ನಮ್ಮ ದೇಹವನ್ನು ಶಾಖವಾಗಿಡಲು ಬೆಳ್ಳುಳ್ಳಿ ಅಗತ್ಯ. ಬೆಳ್ಳುಳ್ಳಿ ಸೇವಿಸುವುದರಿಂದ ಶುದ್ಧೀಕರಣಾಂಗಗಳ ಆರೋಗ್ಯ ರಕ್ಷಣೆಯಾಗುವುದು.

 • ಗಾಯಗಳಾಗಿರುವ ಭಾಗವನ್ನು ಬೆಳ್ಳುಳ್ಳಿ ಬೇಯಿಸಿದ ನೀರಿನಲ್ಲಿತೊಳೆದರೆ ರೋಗಾಣುಗಳು ನಾಶ ಹೊಂದುವವು.

 • ರಕ್ತದೊತ್ತಡದಿಂದ ಬಳಲುತ್ತಿರುವವರು ದಿನವೂ ಬೆಳ್ಳುಳ್ಳಿಯನ್ನು ಸೇವಿಸಿದ್ದಲ್ಲಿ ರಕ್ತ ನೀರಾಗಿ ಒತ್ತಡ ಕಡಿಮೆಯಾಗುತ್ತದೆ.

 • ಕ್ಷಯರೋಗಿಗಳು ರೋಗ ಮುಕ್ತರಾದ ಮೇಲೆ ಎರಡು ವರ್ಷಗಳ ಕಾಲ ಪ್ರತಿದಿನವೂ ಬೆಳ್ಳುಳ್ಳಿ ಬಳಸಿದ್ದಲ್ಲಿ ರೋಗ ಮರುಕಳಿಸುವುದಿಲ್ಲ.

 • ಬೆಳ್ಳುಳ್ಳಿಯನ್ನು ಬೆಣ್ಣೆಯೊಂದಿಗೆ ಬೆರೆಸಿ ಕುರುವಿರುವ ಜಾಗಕೆ ಹಚ್ಚಿದರೆ ಗಾಯ ಒಣಗುತ್ತದೆ.

 • ಒಂದು ಟೀ ಚಮಚ ಬೆಳ್ಳುಳ್ಳಿ ರಸವನ್ನು ಅಷ್ಟೇ ಪ್ರಮಾಣದ ಜೇನುತುಪ್ಪದೊಂದಿಗೆ ಸೇವಿಸಿದ್ದಲ್ಲಿ ಹೊಟ್ಟೆಯ ಜಂತುಗಳು ನಾಶವಾಗುತ್ತದೆ.

 • ಉಬ್ಬಸವಿರುವವರು ಪ್ರತಿದಿನ ೩-೪ ಬೆಳ್ಳುಳ್ಳಿ ತೊಳೆಗಳನ್ನು ಹಲ್ಲಿನೊಂದಿಗೆ ಸೇವಿಸದರೆ ರೋಗ ಉಲ್ಬಣವಾಗುವುದಿಲ್ಲ.

 • ಬೆಳ್ಳುಳ್ಳಿಯನ್ನು ಬಿಡಿಸಿ ಚೂರು ಮಾಡಿ ಹಟ್ಟಿಯಲ್ಲ ಸುತ್ತಿ ಕಿವಿಗೆ ಇಟ್ಟುಕೊಂಡರೆ ಶೀತದಿಂದ ಕಿವುಡಾಗುವ ಭಯವಿರುವುದಿಲ್ಲ.

 • ಬೆಳ್ಳುಳ್ಳಿಯನ್ನು ಒಂದು ಬಟ್ಟಲು ನೀರಿನಲ್ಲಿ ಚೆನ್ನಾಗಿ ಬೇಯಿಸಿ ಆ ನೀರನ್ನು ಕುದಿದ್ದಲ್ಲಿ ಮುಟ್ಟಿನ ನೋವು ಗುಣವಾಗುವುದು.

 • ಬೆಳ್ಳುಳ್ಳಿಯನ್ನು ಪ್ರತಿದಿನ ಆಹಾರದಲ್ಲಿ ಸೇವಿಸಿದರೆ ಕೊಲೆಸ್ಟ್ರಾಲ್ ಕಡಿಮೆಯಾಗುವುದು.

 • ಅಜೀರ್ಣ ಮತ್ತು ಹೊಟ್ಟೆ ಉಬ್ಬರವಾದರೆ ಬಿಸಿ ಬೆಳ್ಳುಳ್ಳಿಯನ್ನು ತಿನ್ನಬೇಕು.

 • ಬೆಳ್ಳುಳ್ಳಿಯ ಸತತ ಸೇವನೆಯಿಂದ ಧೀರ್ಘಕಾಲದ ಕೆಮ್ಮು ನೆಗಡಿ ಗುಣವಾಗುವುದು.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840