ಸೋರೆಕಾಯಿಯಿಂದ ಇಷ್ಟೆಲ್ಲ ಒಳ್ಳೇದಾಗುತ್ತೆ ಅಂತ ಗೊತ್ತಾದ್ರೆ ಬೆಳಿಗ್ಗೆ ಎದ್ದ ತಕ್ಷಣ ಸೋರೆಕಾಯಿ ಜ್ಯೂಸು ಕುಡಿತೀರಾ….

0
2233

ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಸೊರೆಕಾಯಿ ರಸ ಕುಡಿಯುವುದರಿಂದ ಅಸಿಡಿಟಿ, ಹೊಟ್ಟೆ ಉಬ್ಬರ, ಸ್ಥೂಲಕಾಯ ನಿಯಂತ್ರಣಕ್ಕೆ ಬರುತ್ತದೆ.

ಬೆಂದ ಸೋರೆಕಾಯಿ ತಿನ್ನುವುದರಿಂದ ದೇಹವು ತಂಪಾಗುತ್ತದೆ.

ಸೋರೆಕಾಯಿ ಮಾನಸಿಕ ಉದ್ವೇಗಗಳನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ವೀರ್ಯ ವೃದ್ಧಿಗೆ ಮತ್ತು ವೀರ್ಯಸ್ಖಲನ ತಡೆಯುವುದಕ್ಕೆ ಸೋರೆಕಾಯಿ ಉತ್ತಮವಾಗಿದೆ.

ಕ್ಷಯ, ಉನ್ಮಾದ, ರಕ್ತದೊತ್ತಡ, ಮೂಲವ್ಯಾಧಿ, ಮಧುಮೇಹ, ಕಾಮಾಲೆ, ಜಠರದ ಹುಣ್ಣು ಇತ್ಯಾದಿ ರೋಗಗಳಿಂದ ನರಳುವವರಿಗೆ ಸೋರೆಕಾಯಿ ದಿವ್ಯ ಔಷಧ.

ಒಂದು ಲೋಟ ಸೋರೆಕಾಯಿ ರಸಕ್ಕೆ ಒಂದು ಹೋಳು ನಿಂಬೆ ರಸ ಬೆರೆಸಿ ಕುಡಿದ್ದಲ್ಲಿ ಉರಿ ಮೂತ್ರ ನಿಯಂತ್ರಣಕ್ಕೆ ಬರುತ್ತದೆ.

 

ಒಂದು ಲೋಟ ಸೋರೆಕಾಯಿ ರಸಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕುಡಿದರೆ ಮಲಬದ್ಧತೆ ಗುಣವಾಗಿ ಜೀರ್ಣಶಕ್ತಿ ಹೆಚ್ಚುತ್ತದೆ.

ಸೋರೆಕಾಯಿ ರಸವನ್ನು ಅಂಗೈ-ಅಂಗಾಲು ಉರಿಗೆ ಮತ್ತು ಮೈನವೆಗೆ ಹಚ್ಚಿದ್ದಲ್ಲಿ ಗುಣ ಕಂಡುಬರುತ್ತದೆ.