ಹಲಸಿನ ಹಣ್ಣು ಸೇವಿಸುದರಿಂದ ೧೦ ಆರೋಗ್ಯಕರ ಲಾಭಗಳು…!

0
1075

ಆರೋಗ್ಯದ ವಿಷಯಕ್ಕೆ ಬಂದಾಗ ಹಲಸಿನ ಹಣ್ಣಿನ ಕೊಡುಗೆ ಅಪಾರ. ಇದರ ಸುವಾಸನೆಯ ಭರಿತ ಪರಿಮಳ ಎಂತವರನ್ನೂ ಕೂಡ ತನ್ನ ಬಳಿ ಆಕರ್ಷಿಸುತ್ತದೆ. ಅರೇ, ಕೇವಲ ಹಲಸಿನ ಹಣ್ಣಿನ ವಾಸನೆಯನ್ನು ಮಾತ್ರ ಸವಿದರೆ ಸಾಕೇ..? ಅದರಲ್ಲೂ ಕೆಲವರಂತೂ ಹಲಸಿನ ಹಣ್ಣು ಅಂದ ಕೂಡಲೇ ಬಾಯಲ್ಲಿ ಕೆಲವರಿಗೆ ನೀರೂರುತ್ತೆ. ಹಾಗಂತ ಬಾಯಲ್ಲಿ ನೀರೂರಿಸಿ, ತಿನ್ನಲು ಮಾತ್ರ ರುಚಿಯಾಗಿರುವ ಹಣ್ಣು ಹಲಸು ಅಂತ ಅಂದುಕೊಳ್ಳಬೇಡಿ.. ಬದಲಾಗಿ ಹಲಸು ನಿಮ್ಮ ಸೌಂದರ್ಯ ವರ್ಧಕ ಕೂಡ ಹೌದು..

Also read: ಸೌಂದರ್ಯ ವೃದ್ಧಿಗೆ ಹಲಸಿನ ಫೇಸ್ ಪ್ಯಾಕ್

ಹೌದು ಹಲಸಿನ ಹಣ್ಣು ತಿನ್ನುವುದರಿಂದ ಹಲವು ಆರೋಗ್ಯಕರ ಲಾಭಗಳಿವೆ ಇದರಲ್ಲಿ ಇರುವ ಲಾಭಗಳು ಏನು ಅಂತೀರಾ ಇಲ್ಲಿ ನೋಡಿ…

ರೋಗನಿರೋದಕ ಶಕ್ತಿ ಹೆಚ್ಚು ಮಾಡುತ್ತದೆ:

ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಉತ್ತಮ ಪೋಷಕಾಂಶಗಳಿದ್ದು ಶೀತ, ಸೋಂಕು ಇವುಗಳನ್ನು ತಪ್ಪಿಸಲು ಸಹಕಾರಿಯಾಗಿದೆ.

ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ:

ದೇಹದಲ್ಲಿ ಖನಿಜಾಂಶಗಳ ಕೊರತೆ ಉಂಟಾದರೆ ದೇಹದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗುತ್ತದೆ. ಹಲಸಿನ ಹಣ್ಣಿನಲ್ಲಿ ಖನಿಜಾಂಶಗಳು ಅಧಿಕವಾಗಿ ಇರುವುದರಿಂದ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.

ಮೂಳೆ ಸವೆತವನ್ನುತಡೆಯಬವುದು:

ಅಧಿಕ ಮ್ಯಾಗ್ನಿಷಿಯಂ ಮತ್ತು ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ.

ಥೈರಾಯ್ಡ್ ಗ್ರಂಥಿಯನ್ನು ಆರೋಗ್ಯಕರವಾಗಿ ಇರುತ್ತದೆ:

ಥೈರಾಯ್ಡ್ ಗ್ರಂಥಿಯ ಆರೋಗ್ಯವನ್ನು ಕಾಪಾಡುತ್ತದೆ. ದೇಹದಲ್ಲಿ ಹಾರ್ಮೋನ್ ಗಳ ಉತ್ಪತ್ತಿಯನ್ನು ಸರಿ ಪ್ರಮಾಣದಲ್ಲಿ ಇರಲು ಥೈರಾಯ್ಡ್ ಗ್ರಂಥಿ ಮುಖ್ಯ ಪಾತ್ರವಹಿಸುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ:

ಒಂದು ಹಲಸಿನ ಹಣ್ಣಿನಲ್ಲಿ ಬಾಳೆಹಣ್ಣಿನಲ್ಲಿರುವಷ್ಟು ಪೊಟಾಷ್ಯಿಯಂ ಅಂಶವಿರುತ್ತದೆ. ಪೊಟಾಷ್ಯಿಯಂ ದೇಹದಲ್ಲಿ ರಕ್ತದೊತ್ತಡವನ್ನು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಜೀರ್ಣಶಕ್ತಿಗೆ ಸಹಾಯವಾಗುತ್ತದೆ:

ಇದರಲ್ಲಿ ನಾರಿನಂಶವಿರುವುದರಿಂದ ಮಲಬದ್ಧತೆ ಸಮಸ್ಯೆ ಇರುವವರು ಇದನ್ನು ತಿನ್ನುವುದು ಒಳ್ಳೆಯದು.

ಇರುಳು ಕುರುಡುತನ ನಿವಾರಣೆಗೆ ಸಹಕಾರಿಯಾಗಿದೆ:

ಇದರಲ್ಲಿ ವಿಟಮಿನ್ ಎ ಅಂಶವಿರುವುದರಿಂದ ಹಣ್ಣಿನ ದೃಷ್ಟಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ವಿಟಮಿನ್ ಎ ಕೊರತೆ ಉಂಟಾದರೆ ಇರುಳು ಕುರುಡುತನ ಉಂಟಾಗುವುದು.

ಹೃದಯದ ಸ್ವಾಸ್ಥ್ಯ ಹೆಚ್ಚಿಸುತ್ತದೆ:

ಇದರಲ್ಲಿ ವಿಟಮಿನ್ ಬಿ6 ಅಂಶವಿರುವುದರಿಂದ ರಕ್ತದಲ್ಲಿರುವ ಹೋಮೋಸಿಸ್ಟೀಯ್ನ್ ಪ್ರಮಾಣ ಕಡಿಮೆ ಮಾಡಿ ಹೃದಯದ ಸ್ವಾಸ್ಥ್ಯ ಹೆಚ್ಚಿಸಲು ಸಹಕಾರಿಯಾಗಿದೆ.

ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ:

ಇದರಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳು ದೇಹದಲ್ಲಿ ರಕ್ತ ಸರಾಗವಾಗಿ ಹರಿಯಲು ಸಹಕಾರಿಯಾಗಿದೆ. ಮೂಳೆಗಳನ್ನು ಬಲಪಡಿಸಿ ಶರೀರದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯನ್ನು ತಡೆಗಟ್ಟುತ್ತದೆ.

ರಕ್ತ ಹೀನತೆಯನ್ನು ತಡೆಗಟ್ಟುತ್ತದೆ:

ಇದರಲ್ಲಿ ಕಬ್ಬಿಣದಂಶ ಕೂಡ ಇರುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಗೆ ಇದನ್ನು ತಿನ್ನುವುದು ಒಳ್ಳೆಯದು.

ಇಷ್ಟೆಲ್ಲಾ ನೋಡಿದಮೇಲೆ ನೀವು ಹಲಸಿನ ಹಣ್ಣು ತಿನ್ನದೆ ಇರೋಕೆ ಆಗುತ್ತಾ. ಖಂಡಿತ ತಿನ್ನಲೇಬೇಕು ಅಲ್ವ.