ವಿಶ್ವದ ನಂ.1 ಶ್ರೀಮಂತರ ಪಟ್ಟಿ ಬಿಡುಗಡೆ; ಎರಡನೇ ಸ್ಥಾನಕ್ಕಿಳಿದ ಅಮೆಜಾನ್​ ಸಂಸ್ಥಾಪಕ ಬೆಜೋಸ್ ಹಾಗಾದ್ರೆ ವಿಶ್ವದ ನಂ.1 ಶ್ರೀಮಂತ ಯಾರು.?

0
217

ವಿಶ್ವದ ಅತೀದೊಡ್ಡ ಶ್ರೀಮಂತ ಪಟ್ಟಿಯನ್ನು ಫೋರ್ಬ್ಸ್​​​ ಬಿಡುಗಡೆ ಮಾಡಿದ್ದು, ವಿಶ್ವದ ಅತ್ಯಂತ ಆಗರ್ಭ ಶ್ರೀಮಂತ ಬಿರುದನ್ನು ಅಮೆಜಾನ್ ಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಕಳೆದುಕೊಂಡಿದ್ದಾರೆ. ಇದೀಗ ಆ ಸ್ಥಾನ ಮೈಕ್ರೊಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಪಾಲಿಗೆ ಸೇರಿದೆ. ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಅಮೆಡಾನ್ ಷೇರುಗಳ ಬೆಲೆ ಶೇ.7ರಷ್ಟು ಕುಸಿದು ಬೆಸ್ ಅವರ ಕಂಪೆನಿ ಆದಾಯ 103.9 ಶತಕೋಟಿ ಡಾಲರ್‍ನಷ್ಟು ಕಡಿಮೆಯಾಗಿದ್ದು ಮುಖ್ಯ ಕಾರಣವಾಗಿದೆ.

ವಿಶ್ವದ ನಂ.1 ಶ್ರೀಮಂತ ಯಾರು?

ಹೌದು ವಿಶ್ವದ ಅತೀದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ಅಮೇಜಾನ್​​​​ ಸಂಸ್ಥಾಪಕ ಹಾಗೂ ಸಿಇಒ ಜೆಫ್​​​ ಬೆಜೋಸ್ ಈ ಬಾರಿ 2ನೇ ಸ್ಥಾನಕ್ಕಿಳಿದಿದ್ದಾರೆ. 2019-20 ವರ್ಷದ ಮೂರನೇ ತ್ರೈಮಾಸಿಕದಲ್ಲಿ ಅಮೇಜಾನ್ ಕಂಪನಿಯ ನಿವ್ವಳ ಲಾಭಾಂಶ ಕಡಿಯಾಗಿದೆ. ಹಾಗಾಗಿ ಜೆಫ್​​​ ಬೆಜೋಸ್ ಒಟ್ಟು ಆಸ್ತಿ ಮೌಲ್ಯ 103.9 ಬಿಲಿಯನ್ ಡಾಲರ್​​ಗೆ ಇಳಿಕೆಯಾಗಿದ್ದು, 2ನೇ ಸ್ಥಾನಕ್ಕಿಳಿದಿದ್ದಾರೆ. ಇದೀಗ ವಿಶ್ವದ ಅತ್ಯಂತ ದೊಡ್ಡ ಶ್ರೀಮಂತ ಸ್ಥಾನವನ್ನು ಮತ್ತೆ ಮೈಕ್ರೋಸಾಫ್ಟ್​​​ ಸಹ ಸಂಸ್ಥಾಪಕ ಬಿಲ್​​ ಗೇಟ್ಸ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಫೋರ್ಬ್ಸ್​​​ ಬಿಡುಗಡೆ ಮಾಡಿರುವ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಬಿಲ್ ಗೇಟ್ಸ್ ಈ ಬಾರಿ 105.7 ಬಿಲಿಯನ್ ಡಾಲರ್ ಆಸ್ತಿ ಹೊಂದುವ ಮೂಲಕ ಮೊದಲ ಸ್ಥಾನಕ್ಕೇರಿದ್ದಾರೆ. ಅಮೇಜಾನ್​​ ಷೇರು ಬೆಲೆ ಶೇ. 9 ಕುಸಿದು 1624 ಡಾಲರ್​ಗೆ ಅಂತ್ಯಗೊಂಡಿದೆ. ಹಾಗೆಯೇ ಬಿಲ್ ಗೇಟ್ಸ್ ಆಸ್ತಿ ಮೌಲ್ಯ 8800 ಕೋಟಿ ರೂ. ಆಗಿದ್ದು, ಬೆಜೋಸ್​​ರನ್ನು ಹಿಂದಿಕ್ಕಿದ್ದಾರೆ, ಇಷ್ಟೊಂದು ಮಟ್ಟದಲ್ಲಿ ಆದಾಯ ಕಡಿಮೆಗೆ ಕಾರಣ. ಇತ್ತೀಚೆಗಷ್ಟೇ ಜೆಫ್​​​ ಮತ್ತು ತನ್ನ ಹೆಂಡತಿ ಮೆಕೆಂಜಿ ಬೆಜೋಸ್​​ ದಾಪಂತ್ಯದಲ್ಲಿ ಬಿರುಕು ಮೂಡಿತ್ತು.
ಈ ಬಗ್ಗೆ ಖುದ್ದು ಸ್ವತಃ ಜೆಫ್ ಮತ್ತು ಅವರ ಮಾಜಿ ಪತ್ನಿಯೇ ಜಂಟಿಯಾಗಿ ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿದ್ದು, ಡಿವೋರ್ಸ್​​ ಪಡೆದುಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡಿದ್ದರು.

ಅಲ್ಲದೇ ನಮ್ಮ ದಾಂಪತ್ಯ ಜೀವನದ ಬೆಳವಣಿಗೆ ಬಗ್ಗೆ ಜನರಿಗೆ ಮಾಹಿತಿ ಇರಲಿ. ನಾನು ಜೆಫ್​​​ ಕಳೆದ 25 ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿದ್ದೇವೆ. ಈಗ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಗೆಳೆಯರಾಗಿರಲು ನಿರ್ಧರಿಸಿದ್ದೇವೆ. ಇಷ್ಟು ದಿನ ದಂಪತಿಗಳಾಗಿ ನಾವಿಬ್ಬರೂ ವೈವಾಹಿಕ ಜೀವನ ಸಂತೋಷದಿಂದ ಕಳೆದಿದ್ದೇವೆ ಎಂದು ತಿಳಿಸಿದ್ದರು ಮೆಕೆಂಜಿ ಬೆಜೋಸ್. ಅದರಂತೆ ಜೆಫ್​​ ಈಗಾಗಲೇ ತಮ್ಮ ಪತ್ನಿ ಮೆಕೆಂಜಿ ಬೆಜೋಸ್ ಗೆ ವಿಚ್ಛೇದನ ನೀಡಿದ್ದಾರೆ. ಹಾಗೆಯೇ ಪತ್ನಿಗೆ ಜೆಫ್​ ಅವರು ನೀಡಿರುವ ಜೀವನಾಂಶ ಬರೋಬ್ಬರಿ 69 ಶತಕೋಟಿ ಡಾಲರ್​. ನೀಡಿದ್ದಾರೆ.

ಕಳೆದ ವರ್ಷ ಬಿಜೋಸ್ ಅವರನ್ನು ಹಿಂದಿಕ್ಕಿ ದಾಖಲೆ ನಿರ್ಮಿಸಿದ್ದರು. ಆಗ ಅವರ ಒಟ್ಟಾರೆ ಸಂಪತ್ತಿನ ಮೌಲ್ಯ 160 ಶತಕೋಟಿ ಡಾಲರ್ ಆಗಿತ್ತು. 2017ರ ನಂತರ ತ್ರೈಮಾಸಿಕ ಅವಯ ಆದಾಯದಲ್ಲಿ ಅಮೆಜಾನ್ ಆದಾಯ ಶೇ.26ರಷ್ಟು ಇಳಿಕೆ ಕಂಡು ಬಂದಿದೆ. ವಿಶ್ವದ ಅತಿ ಶ್ರೀಮಂತರ ಫೋಬ್ರ್ಸ್ ಮ್ಯಾಗಜಿನ್ ಪಟ್ಟಿಯಲ್ಲಿ ಬಿಲ್ ಗೇಟ್ಸ್ 1987ರಲ್ಲಿ ಸ್ಥಾನ ಪಡೆದುಕೊಂಡಿದ್ದರು. ಆಗ ಅವರ ಆಸ್ತಿ ಮೌಲ್ಯ 1.25 ಶತಕೋಟಿ ಡಾಲರ್ ಆಗಿತ್ತು. ಫೋಬ್ರ್ಸ್ ಪಟ್ಟಿಗೆ ಬೆಜೊಸ್ ಸೇರ್ಪಡೆಯಾಗಿದ್ದು 1998ರಲ್ಲಿ. ಅದರ ಹಿಂದಿನ ವರ್ಷವಷ್ಟೇ ಅದು ಸಾರ್ವಜನಿಕ ಕ್ಷೇತ್ರದಲ್ಲಿ ವಹಿವಾಟು ಆರಂಭಿಸಿದ್ದು. ಆಗ ಕಂಪೆನಿಯ ಒಟ್ಟಾರೆ ಆದಾಯ 1.6 ಶತಕೋಟಿ ಡಾಲರ್ ಆಗಿತ್ತು.