ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ ನಿವೃತ್ತ ನೌಕರಿಗೆ ಅಮೆಜಾನ್-ನಿಂದ ಪಾರ್ಟ್ ಟೈಮ್ ಜಾಬ್; ದಿನದ 4 ಗಂಟೆಯಲ್ಲಿ 500 ರೂ ಗಳಿಸಬಹುದು..

0
1272

ದೇಶದ ಆನ್ಲೈನ್ ಶಾಪಿಂಗ್-ನಲ್ಲಿ ಹೆಚ್ಚು ಮನ್ನಣೆ ಪಡೆದ ಅಮೆಜಾನ್ ಗ್ರಾಹಕರಿಗೆ ಒಂದು ದೊಡ್ಡ ಮಾರುಕಟ್ಟೆಯಾಗಿ ಕೆಲಸ ನಿರ್ವಹಿಸುತ್ತಿದ್ದೆ. ಸಣ್ಣ ವಸ್ತುಗಳಿಂದ ಹಿಡಿದು ದೊಡ್ಡ ವಸ್ತುಗಳಿಗೆ ಬಹಳಷ್ಟು ಆಫರ್ ನೀಡಿ. ಗ್ರಾಹಕರನ್ನು ಸೆಳೆಯುತ್ತಿದ್ದು, ಕೆಲವರಂತೂ ಬಟ್ಟೆಯಿಂದ ಹಿಡಿದು ಮನೆಯ ದಿನಚರಿ ವಸ್ತುಗಳನ್ನು ಅಮೆಜಾನ್ ಮೂಲಕ ತರಿಸುತ್ತಿದ್ದಾರೆ. ಇದರಿಂದ ಶಾಪಿಂಗ್ ಪ್ರಿಯರಿಗೆ ಅನುಕೂಲತೆ ಮಾಡಿಕೊಳ್ಳುತ್ತಿರುವ ಅಮೆಜಾನ್ ಮತ್ತೊಂದು ಗುಡ್ ನ್ಯೂಸ್ ತಿಳಿಸಿದ್ದು, ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ, ನಿವೃತ್ತಿ ನೌಕರರಿಗೆ ಪಾರ್ಟ್ ಟೈಮ್ ಜಾಬ್ ನೀಡಲು ಮುಂದಾಗಿದೆ.

ಏನಿದು ಅಮೆಜಾನ್ ಹೊಸ ಯೋಜನೆ?

ಹೌದು ಆನ್ಲೈನ್ ಮಾರುಕಟ್ಟೆಯಲ್ಲಿ ಹೆಚ್ಚು ಮೆಚ್ಚುಗೆ ವ್ಯಕ್ತವಾಗುವುದು ಎಂದರೆ ಸರಿಯಾದ ರೀತಿಯಲ್ಲಿ ಮತ್ತು ವೇಗವಾದ ಗ್ರಾಹಕರಿಗೆ ತಲುಪಿಸುವುದು ಬಹುಮುಖ್ಯವಾಗಿದೆ. ಅದರಂತೆ ಅಮೆಜಾನ್ ಇಂಡಿಯಾ ಒಂದು ದಿನ, ಎರಡು ದಿನ ಮತ್ತು ಶೇಡ್ಯೂಲ್ಡ್ ಡೆಲಿವರಿ ಒಳಗೊಂಡಂತೆ ನಿರ್ಣಾಯಕ ಮತ್ತು ವೇಗವಾಗಿ ತಲುಪಿಸುವ ಹಲವಾರು ವಿಧಾನಗಳನ್ನು ಪರಿಚಯಿಸಿದೆ. ಕೆಲವು ಉತ್ಪನ್ನಗಳನ್ನು ಒಂದೇ ದಿನದಲ್ಲಿ ವಿತರಣೆ ಮತ್ತು ಕೆಲ ದಿನಸಿಗಳನ್ನು ಎರಡು ಗಂಟೆಯೊಳಗೆ ವಿತರಣೆ ಮಾಡುವ ಸೌಲಭ್ಯ ಒದಗಿಸುತ್ತದೆ. ಅದಕ್ಕಾಗಿ ಹಲವು ಪಾರ್ಟ್ ಟೈಮ್ ಜಾಬ್ ಅವಕಾಶವನ್ನು ನೀಡುತ್ತಿದೆ.

ಏನಿದು ಅಮೆಜಾನ್ ಜಾಬ್?

ಈಗ ಅಮೆಜಾನ್ ಫ್ಲೆಕ್ಸ್ ನೊಂದಿಗೆ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಅಮೆಜಾನ್ ಇಂಡಿಯಾ ಸಿದ್ದವಾಗಿದೆ. ಉದ್ಯೋಗಿಗಳಿಗೆ ತಮ್ಮ ಫ್ರೀ ಸಮಯದಲ್ಲಿ ಹೆಚ್ಚುವರಿ ಹಣವನ್ನು ಮಾಡುವ ಅವಕಾಶವನ್ನು ನೀಡುತ್ತದೆ. ವ್ಯಕ್ತಿಯು ದಿನಕ್ಕೆ ನಾಲ್ಕು ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಪ್ಯಾಕೇಜ್ ಗಳನ್ನು ತಲುಪಿಸುವವರಿಗೆ ಪ್ರತಿ ಗಂಟೆಗೆ ರೂ. 120-140 ವರೆಗೆ ಗಳಿಸಬಹುದು. ಪ್ರತಿ ಬುಧವಾರ ವಿತರಣೆ ಪಾಲುದಾರರಿಗೆ ಸಂಬಳ ಪಾವತಿಸಲಾಗುತ್ತದೆ. ಪ್ರತಿ ಗಮಟೆಗೆ 140ರಂತೆ ನಾಲ್ಕು ಗಂಟೆಗಳಿಗೆ 560 (140×4=560) ಗಳಿಸಬಹುದು. ಕೊನೆಪಕ್ಷ ಸರಾಸರಿ 500ರವರೆಗೆ ಆದಾಯ ಗಳಿಸಬಹುದು.

ಅಮೆಜಾನ್ ಸಂಸ್ಥೆಯು ಇನ್ನೊಂದು ವಿತರಣಾ ಸೇವೆಯನ್ನು ಮಾಡುತ್ತಿದ್ದು, ಅಮೆಜಾನ್ ಫ್ಲೆಕ್ಸ್ ಅಮೆಜಾನ್ ಫ್ಲೆಕ್ಸ್ ಉತ್ತರ ಅಮೆರಿಕಾ, ಜರ್ಮನಿ, ಸ್ಪೇನ್, ಜಪಾನ್, ಸಿಂಗಾಪುರ್ ಮತ್ತು ಯುಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ದೇಶಗಳಲ್ಲಿ ವಿತರಣಾ ಸಾಮರ್ಥ್ಯವನ್ನು ಮತ್ತು ಗ್ರಾಹಕರಿಗೆ ವಿತರಣಾ ಪ್ರಮಾಣವನ್ನು ಅಗಾಧವಾಗಿ ಹೆಚ್ಚಿಸಿದ್ದು. ಅಮೆಜಾನ್ ಫ್ಲೆಕ್ಸ್ ಪ್ರಾರಂಭಿಸಿದ ಏಳನೇ ದೇಶವಾಗಿದೆ.

7 ಲಕ್ಷ ರೂ ಆರ್ಥಿಕ ನೆರವು:

ನೌಕರಿ ತೊರೆದು ಅಮೆಜಾನ್ ನಲ್ಲಿ ಡೆಲಿವರಿ ಸೇವೆ (Delivery Service ) ಶುರು ಮಾಡುವವರಿಗೆ ಆರ್ಥಿಕ ರೂಪದಲ್ಲಿ ಸಹಾಯ ಮಾಡಲಿದೆ. ಅಮೆಜಾನ್ ನೊಂದಿಗೆ ಕೈಜೋಡಿಸುವ ನೌಕರರಿಗೆ 7 ಲಕ್ಷ ರೂಪಾಯಿ ಹಾಗೂ ಇದರೊಂದಿಗೆ ಮೂರು ತಿಂಗಳ ಸಂಬಳವನ್ನು ಕೂಡ ಕಂಪನಿ ನೀಡಲಿದೆ. ಅಮೆಜಾನ್ ದೇಶದಾದ್ಯಂತ ಡೆಲಿವರಿ ಸೇವೆಯನ್ನು ಇನ್ನಷ್ಟು ಭದ್ರಗೊಳಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ಕಂಪನಿ ಸುಂದರ ಒಂದು ಆಫರ್ ನೀಡಿದ್ದು, ನೌಕರಿ ಬಿಟ್ಟು ಡಿಲೆವರಿ ಸೇವೆ ಆರಂಭಿಸಿದರೆ ಹಣಕಾಸು ನೆರವು ನೀಡುವುದಾಗಿ ಕಂಪನಿ ಹೇಳಿದೆ. ಇದನ್ನು ಅಮೆಜಾನ್ ನಲ್ಲಿ ಕೆಲಸ ಮಾಡುವ ಫುಲ್ ಟೈಂ ಹಾಗೂ ಪಾರ್ಟ್ ಟೈಂ ಉದ್ಯೋಗಿಗಳಿಬ್ಬರೂ ಇದರ ಪ್ರಯೋಜನ ಪಡೆಯಬಹುದಾಗಿದೆ. ಅಮೆಜಾನ್ ಪ್ರೈಂ ಸದಸ್ಯರು ಸರಕು ಖರೀದಿ ಮಾಡಿದ ಎರಡನೇ ದಿನಕ್ಕೆ ಡಿಲೆವರಿ ಆಗುತ್ತಿತ್ತು. ಅದನ್ನು ಒಂದು ದಿನಕ್ಕೆ ಇಳಿಸುವ ಯೋಜನೆಯಲ್ಲಿದೆ.