ಯಶ್ ಮಗಳಿಗೆ ರೆಬೆಲ್ ಸ್ಟಾರ್ ಸ್ವರ್ಗದಿಂದ ಕಳುಹಿಸಿದ್ರು ಸರ್ಪ್ರೈಸ್ ಗಿಫ್ಟ್; ಇದನ್ನು ನೋಡಿದ್ರೆ ತಿಳಿಯುತ್ತೆ ಅಂಬಿಗೆ ಯಶ್ ಮೇಲೆ ಎಷ್ಟೊಂದು ಪ್ರೀತಿ ಅಂತ…

0
879

ರೆಬೆಲ್ ಸ್ಟಾರ್ ಅಂಬರೀಶ್ ಗೆ ಯಶ್ ಎಂದರೆ ಅಪಾರ ಪ್ರೀತಿ. ಅದೇ ರೀತಿ ಯಶ್ ಕೂಡ ಅಂಬರೀಶ್ ಅವರ ಮೇಲೆ ಅಷ್ಟೇ ಅಭಿಮಾನ ಹಾಗೂ ಗೌರವ ಇಟ್ಟಿದ್ದರು. ಅದರಿಂದಲೇ ರಾಧಿಕಾ ಯಶ್ ಸೀಮಂತಕ್ಕೆ ಆಗಮಿಸಿ ದಂಪತಿಗಳಿಗೆ ಆಶಿರ್ವದಿಸಿದ್ದರು. ದುರಾದೃಷ್ಟವಶಾತ್ ಅದೇ ಅವರ ಕೊನೆ ಕಾರ್ಯಕ್ರಮವಾಯಿತು. ಯಶ್ ಮಗುವಿಗೆ ತೊಟ್ಟಿಲನ್ನು ಕೊಡಬೇಕೆಂಬುದು ಅಂಬಿ ಆಸೆಯಾಗಿತ್ತು. ಆದರೆ ವಿಧಿಯ ಗೊಬ್ಬೆಯ ಆಟ ಬೇರೆಯಾಗಿತ್ತು.

ಅಂಬಿ ಪ್ರೀತಿಗೆ ಸಾಕ್ಷಿಯಾದ ಗಿಫ್ಟ್ ಯಾವದು?

ಸಂಧರ್ಬಿಕ ಚಿತ್ರ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ ಹೆಣ್ಣು ಮಗು ಆಗಿದ್ದು ಗೊತ್ತೇ ಇದೆ. ಆ ಮಗುವಿಗೆ ಅಂಬರೀಶ್ ಕಡೆಯಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ ಎಂದು ಹೇಳಲಾಗ್ತಿದೆ. ಈ ಉಡುಗೊರೆ ಸ್ವರ್ಗದಿಂದ ಬಂದಿದೆ ಎಂದೇ ಬಿಂಬಿತವಾಗ್ತಿದೆ. ಯಾಕಂದ್ರೆ, ಅಂಬರೀಶ್ ಅವರು ಆನ್ ಲೈನ್ ನಲ್ಲಿ ಬುಕ್ ಮಾಡಿದ್ದ ಗಿಫ್ಟ್ ಇದು. ಅಷ್ಟಕ್ಕೂ, ಈ ಗಿಫ್ಟ್ ಹೇಗೆ ಬಂತು ಅನ್ನೋ ವಿಚಾರ ಈಗ ತಿಳಿದಿದೆ.

ಅಂಬಿ ಸ್ವರ್ಗದಿಂದ ತೊಟ್ಟಿಲು ಕಳುಹಿಸಿದ್ರಾ?

ರಾಧಿಕಾ ಪಂಡಿತ್ ಗರ್ಭಿಣಿ ಎಂದು ತಿಳಿದ ಮೇಲೆ ರೆಬೆಲ್ ಸ್ಟಾರ್ ಅಂಬರೀಶ್, ಪ್ರೀತಿಯಿಂದ ಅವರಿಗೆ ಏನಾದರೂ ಗಿಫ್ಟ್ ನೀಡಬೇಕು ಎಂದು ಯೋಚಿಸಿ, ಸುಮಾರು 1.50 ಲಕ್ಷ ಮೌಲ್ಯದ ತೊಟ್ಟಿಲನ್ನು ಅಂಬಿ ಬುಕ್ ಮಾಡಿದ್ದರು. ಯಶ್ ಗೆ ಸರ್ಪ್ರೈಸ್ ಆಗಿ ತೊಟ್ಟಿಲು ಕೊಡಬೇಕೆಂದು ಆಸೆಪಟ್ಟಿದ್ದರು. ಹಾಗೆಯೇ ಒಂದು ತೊಟ್ಟಿಲು ಬುಕ್ ಮಾಡಿದ್ದರಂತೆ. ಈ ವಿಷ್ಯ ಅಂಬಿಯನ್ನ ಮತ್ತು ತೊಟ್ಟಿಲು ರೆಡಿ ಮಾಡುವ ವ್ಯಕ್ತಿಗೆ ಬಿಟ್ಟರೇ ಬೇರೆ ಯಾರಿಗೂ ಗೊತ್ತಿರಲಿಲ್ಲವಂತೆ.

ಅಂಬಿ ಬುಕ್ ಮಾಡಿದ ತೊಟ್ಟಿಲು ಹೇಗೆ ಬಂತು?

ಸುಮಲತಾ ಅವರಿಗೆ ಒಂದು ಮಸೆಜ್ ಬಂದಿದೆ. ಆ ಮೆಸೆಜ್ ನಲ್ಲಿ ‘ಸರ್ ನೀವು ಆರ್ಡರ್ ಮಾಡಿದ್ದ ತೊಟ್ಟಿಲು ಸಿದ್ಧವಾಗಿದೆ. ತೆಗೆದುಕೊಂಡು ಹೋಗಿ’ ಎಂದು ಆ ವಾಟ್ಸಾಪ್ ಸಂದೇಶ ಬಂದಿದೆ. ನಾನು ಬುಕ್ ಮಾಡಿಲ್ಲ ಅಲ್ವಾ, ಮಿಸ್ ಆಗಿ ಮೆಸೆಜ್ ಬಂದಿದ್ಯಾ ಎಂದು ತಿಳಿಯಲು ವಾಪಸ್ ಆ ನಂಬರ್ ಗೆ ಕರೆ ಮಾಡಿದ್ದಾರೆ. ಕರೆ ಮಾಡಿದಾಗ ಅಂಬರೀಶ್ ತೊಟ್ಟಿಲು ಬುಕ್ ಮಾಡಿದ ವಿಷ್ಯ ಬಹಿರಂಗವಾಗಿದೆ. ಸಂಪರ್ಕಕ್ಕಾಗಿ ಸುಮಲತಾ ನಂಬರ್ ಕೊಟ್ಟಿದ್ದರಂತೆ. ಇಲ್ಲಿ ಗಮನಿಸಬೇಕಾದ ವಿಷ್ಯ ಅಂದ್ರೆ ಆ ತೊಟ್ಟಿಲು ಮಾಡುವ ವ್ಯಕ್ತಿಗೆ ಇದು ಅಂಬರೀಶ್ ಅವರು ಮಾಡಿರುವ ಆರ್ಡರ್ ಎಂದು ಗೊತ್ತೇ ಇರಲಿಲ್ಲವಂತೆ. ನಂತರ ಈ ಬಗ್ಗೆ ಸುಮಲತಾ ವಿಚಾರಿಸಿದಾಗ ಅಂಬರೀಷ್​ ಅವರು ಯಶ್​ ದಂಪತಿಗೆ ಹುಟ್ಟುವ ಮಗುವಿಗಾಗಿ ತೊಟ್ಟಿಲು ಆರ್ಡರ್​ ಮಾಡಿದ್ದರು ಎಂಬ ವಿಷಯ ತಿಳಿದುಬಂದಿದೆ.

ಈ ಎಲ್ಲಾ ವಿಚಾರ ತಿಳಿದ ಸುಮಲತಾ ಯಶ್​ಗೆ ಕಾಲ್​ ಮಾಡಿ “ಸ್ವರ್ಗದಿಂದ ನಿನ್ನ ಮಗಳಿಗೆ ತೊಟ್ಟಿಲು ಬಂದಿದೆ. ನಿನ್ನ ಮಗಳು ಅದೃಷ್ಟ ಮಾಡಿದ್ದಾಳೆ,” ಎಂದು ಹೇಳಿದ್ದಾರೆ. ಈ ವಿಚಾರ ತಿಳಿದ ಯಶ್ ಮತ್ತು ಅಂಬಿ ಕುಟುಂಬದವರು ಅಂಬಿ ನಮ್ಮನು ಬಿಟ್ಟು ಹೋಗಿಲ್ಲ ಇಲ್ಲಿ ನಡೆಯುವ ಎಲ್ಲ ಸಮಾರಂಭಕ್ಕೂ ಹಾರೈಸಲು ಮತ್ತೆ ಮತ್ತೆ ಹುಟ್ಟಿಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ.