ನೀವು ಇನ್ನು ಅಂಬೇಡ್ಕರ್ ಮಹಾನ್ ವ್ಯಕ್ತಿ ಅಲ್ಲ ಅಂತ ನಂಬಿದ್ರೆ ಇದನ್ನ ಓದಲೇಬೇಕು!!!

0
7621

ಭೀಮರಾವ್‍ರಾಂಜೀ ಅಂಬೇಡ್ಕರ್ ಸ್ವತಂತ್ರ ಭಾರತದ ರೂಪೀಕರಣದಲ್ಲಿ ಎದ್ದು ಕಂಡ ಹೆಸರು. ಈ ದೇಶದ ಸಾಂಪ್ರದಾಯಿಕ ಮಾದರಿಗಳನ್ನು ಒಡೆದು ಮಾನವೀಯತೆಗಾಗಿ ಭುಗಿಲೆದ್ದ ಮನಸ್ಸು. ಅವರು ಒಂದು ಮಾತು ಹೇಳಿದ್ದರು: ‘ನಾನೊಂದು ಕಲ್ಲು ಬಂಡೆಯಂತೆ, ಕರಗುವುದಿಲ್ಲ, ಆದರೆ ನದಿಯ ದಿಕ್ಕನ್ನೇ ಬದಲಿಸುವವನು’ ಮೊತ್ತಮೊದಲ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದೂ ಆ ಪಕ್ಷದ ಸದಸ್ಯರಾಗದೇ ಹಾಗೆ ಉಳಿದುಕೊಂಡದ್ದಕ್ಕೆ ಉತ್ತರರೂಪವಾಗಿ ಆ ಮಾತು ಹೇಳಿದ್ದರು. ಅವರು ಪ್ರವಾಹದಲ್ಲಿ ಒಂದಾದವರಲ್ಲ. ಹರಿಯುವ ದಿಕ್ಕನ್ನೇ ಬದಲಿಸಿದವರು.

ಅವರಾಡಿದ ಮಾತು ತನ್ನ ಜನರನ್ನು ದೇಶದ ಇತಿಹಾಸದ ಮುಂಚೂಣಿಗೆ ತಂದ ರೀತಿಯನ್ನು ಬಿಂಬಿಸಿದಂತಿತ್ತು. ಹುಟ್ಟಿನಿಂದ ಹಿಡಿದು ಮರಣದವರೆಗೆ ಅಂಬೇಡ್ಕರ್ ಬದುಕಿದ ಬಗೆ ರೋಚಕ, ವಿಸ್ಮಯಕಾರಿ. ಭರತ ಭೂಮಿಯ ಉದ್ದಗಲಕ್ಕೂ ಕಣ್ಣು ಕಾಣದಂತೆ ಆವರಿಸಿದ್ದ ಅಸಮಾನತೆಯ ಕಾರ್ಗತ್ತಲಲ್ಲಿ ಕ್ರಾಂತಿದೀಪದಂತೆ 1891ರ ಏಪ್ರಿಲ್ 14ರಂದು ಮಹರ್ ಎಂಬ ದಲಿತ ಜನಾಂಗದಲ್ಲಿ ಅಂಬೇಡ್ಕರ್ ಜನಿಸಿದರು. ಇವರಿಗೆ ಜನ್ಮನೀಡಿದ ಪುಣ್ಯಭೂಮಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡೆ ಗ್ರಾಮ.

ಇವರನ್ನು ಹೆತ್ತ ಭಾಗ್ಯಶಾಲಿಗಳು ತಂದೆ ಸುಭೇದಾರ್‍ರಾಮ್‍ಜೀ ಸಕ್ಬಾಲ್, ತಾಯಿ ಶ್ರೀಮತಿ ಭೀಮಾಬಾಯಿ. ಇವರು ಕಬೀರ್ ಪಂಥಕ್ಕೆ ಸೇರಿದವರು. ಜಾತಿ ಧರ್ಮಗಳ ಭೇದಗಳಲ್ಲಿ ಇವರಿಗೆ ನಂಬಿಕೆ ಇರಲಿಲ್ಲ. ಹರಿಭಜನೆ ಮಾಡುವವರೆಲ್ಲದೇವ-ರಿಗೆ ಸೇರಿದವರೆಂಬ ಭಾವನೆ ಇವರದು. ಅಂಬೇಡ್ಕರರು ಸತಾರಾ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಅಸ್ಪಶ್ಯತೆಯ ಬಿಸಿ ಕ್ಷಣಕ್ಷಣವೂ ಇವರನ್ನು ಸುಡುತ್ತಲೇ ಇತ್ತು. ಇದೆಲ್ಲ ಏಕೆಂದು ಬಾಲಕ ಅಂಬೇಡ್ಕರರಿಗೆ ಅರ್ಥವಾಗುತ್ತಿರಲಿಲ್ಲವಾದರೂ ಕ್ರಮೇಣ ಇವರ ಬುದ್ಧಿ ಬೆಳೆದಂತೆ ತನಗಾಗುತ್ತಿರುವ ಅಪಮಾನ, ಮೇಲ್ಜಾತಿ ಎನಿಸಿಕೊಂಡಿರುವ ಅವಿವೇಕಿಗಳಿಂದ ನಡೆಯುತ್ತಿರುವ ಶೋಷಣೆ, ದಬ್ಬಾಳಿಕೆ ಇವರ ಮನಸ್ಸಿನ ಮೇಲೆ ಆಳವಾಗಿ ಪರಿಣಾಮ ಬೀರಿದ್ದವು.

ಇದರ ಪರಿಣಾಮ ಹಿಂದೂ ಧರ್ಮಕ್ಕೆ ಅಂಟಿದ ಜಾತೀಯತೆಯ ವಿರುದ್ಧ ವಿದ್ಯಾರ್ಥಿ ದಿಸೆಯಲ್ಲೇ ಇವರು ಭೀಮಖಡ್ಗವನ್ನು ಮಸೆಯ ತೊಡಗಿದ್ದರು. 1907ರಲ್ಲಿ ಮೆಟ್ರಿಕ್ಯೂಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಂಬೇಡ್ಕರರಿಗೆ ಆ ವರ್ಷವೇ ರಮಾಬಾಯಿಯೊಂದಿಗೆ ವಿವಾಹವಾಯಿತು. ಆನಂತರ ಅವರು ಮುಂಬೈನ ಎಲ್ಫಿನ್‍ಸ್ಟನ್ ಕಾಲೇಜಿನಲ್ಲಿ ಇಂಟರ್‍ಮೀಡಿಯಟ್ ಮುಗಿಸಿ 1921ರಲ್ಲಿ ಬಿ.ಎ. ಪದವೀಧರರಾದರು. ನಂತರ ಬರೋಡ ಮಹಾರಾಜರ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ಆದರೆ ಜ್ಞಾನದ ಹಸಿವಿನಿಂದ ಇವರು ಓದುವ ಹಠಕ್ಕೆ ಬಿದ್ದರು.

ಆಗ ಬರೋಡ ಮಹಾರಾಜರೇ ಇವರ ಬುದ್ಧಿಶಕ್ತಿಗೆ ಮಾರುಹೋಗಿ ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದ ನಂತರ ತಮ್ಮಲ್ಲೇ ಹತ್ತು ವರ್ಷಗಳ ಕಾಲ ಕೆಲಸ ಮಾಡಬೇಕೆಂಬ ಕರಾ-ರಿನೊಂದಿಗೆ ಉನ್ನತ ವ್ಯಾಸಂಗಕ್ಕೆ ಇವರನ್ನು ಅಮೇರಿಕಾಕ್ಕೆ ಕಳುಹಿಸಿದರು. ಅಲ್ಲಿ ಎಂ.ಎ. ಪದವಿಯೊಡನೆ ಪಿಹೆಚ್‍ಡಿಯನ್ನುಗಳಿಸಿ 1917ರ ಆಗಸ್ಟ್ 21ರಂದು ಮತ್ತೆ ಭಾರತಕ್ಕೆ ಮರಳಿದರು. ಇಷ್ಟಾದರೂ ಅವರ ಜ್ಞಾನದಾಹ ಇಂಗಿರಲಿಲ್ಲ. ಹಾಗಾಗಿ ಪುನಃ 1920ರಲ್ಲಿ ಮತ್ತಷ್ಟು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನಿಗೆ ಹೋದ ಇವರು 1922ರಲ್ಲಿ “ಬ್ಯಾರಿಸ್ಟರ್” ಎಂಬ ಪದವಿಯೊಡನೆ ಭಾರತಕ್ಕೆ ವಾಪಸ್ಸಾದರು.ವಿದೇಶದಲ್ಲಿ ಕಲಿತು ಒಂದು ಸಾಲದು ಅಂತ ಹಲವಾರು ಡಾಕ್ಟರೇಟ್ ಪದವಿಗಳನ್ನುಗಳಿಸಿದ ಅಂಬೇಡ್ಕರ್ ಅವರನ್ನು ಅಸ್ಪಶ್ಯತೆ ಅಪಮಾನಿಸುತ್ತಿತ್ತು.

ಆಗ ಅಂಬೇಡ್ಕರರು“ಮೂಕನಾಯಕ” ಎಂಬ ಪತ್ರಿಕೆಯನ್ನು ಆರಂಭಿಸಿ ಅದರ ಮುಖೇನ ಅಸ್ಪøಶ್ಯತೆಯ ವಿರುದ್ಧ ಜನಜಾಗೃತಿಗೆ ನಿಂತರು. ಭಾರತ ಸ್ವಾತಂತ್ರ್ಯಗಳಿಸಿದ ನಂತರ ನೆಹರು ಸರ್ಕಾರದಲ್ಲಿ ಪ್ರಥಮ ಕಾನೂನು ಸಚಿವರಾಗಿದ್ದ ಹೆಗ್ಗಳಿಕೆ ಹೊಂದಿದ್ದ ಅಂಬೇಡ್ಕರರು ಭಾರತ ದೇಶಕ್ಕೆ ಸಶಕ್ತ ‘ಸಂವಿಧಾನ’ ನೀಡಿದ ಶಿಲ್ಪಿಯಾಗಿದ್ದು ಇದು ಇಡೀ ವಿಶ್ವಕ್ಕೆ ಮಾದರಿ ಸಂವಿಧಾನವಾಗಿದ್ದು ಅವರಿಗೆ ಸಂದ ಮಹಾಗೌರವವೇ ಸರಿ.ಅಧಿಕಾರ ಇರಲಿ ಇಲ್ಲದಿರಲಿ ಅಂಬೇಡ್ಕರ್ ರವರು ಹೆಜ್ಜೆ ಇಟ್ಟಲೆಲ್ಲಾ ಅಸ್ಪøಶ್ಯತಾ ನಿವಾರಣೆ ಗಾಗಿಯೇ ಅವರ ಹೆಜ್ಜೆಗಳು ತುಡಿಯುತ್ತಿದ್ದವು.

ಅಂತೆಯೇ ದಲಿತರ ಪುರೋಭಿವೃದ್ಧಿಗಾಗಿಯೇ ಅವರ ಜೀವ ಸದಾ ಮಿಡಿಯುತ್ತಿತ್ತು. ಭಾರತದಲ್ಲಿ ಅಂಬೇಡ್ಕರ್ ಎಂಬ ಕ್ರಾಂತಿ ಪುರುಷ ಜನಿಸಿದ್ದ-ರಿಂದಲೇ ದೇಶದ ಅರ್ಧ ಭಾಗದಂತಿರುವ ಉತ್ತರ ಪ್ರದೇಶ ಕಾನ್ಷಿರಾಂರಂಥ ದಲಿತ ನಾಯಕನ ಹಿಡಿತಕ್ಕೆ ಸಿಕ್ಕಿದ್ದು. ಮಾಯಾವತಿಯಂತಹ ದಲಿತ ಮಹಿಳೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ಸಾಧ್ಯವಾದದ್ದು. ಅಂಬೇಡ್ಕರ್ ಎಂಬ ಮಹಾನದಿ ಈ ದೇಶದಲ್ಲಿ ಹುಟ್ಟಿ ಹರಿಯದಿದ್ದರೆ ಇದಾವುದೂ ಸಾಧ್ಯವಾಗುತ್ತಿರಲಿಲ್ಲ.