ಆಂಬುಲೆನ್ಸ್ ದುರ್ಬಳಕೆ ಮಾಡುತ್ತಿರುವ ಪಾಲಿಕೆ ಅಧಿಕಾರಿಗಳು!!

0
539

ರಸ್ತೆಯಲ್ಲಿ ಆಂಬುಲೆನ್ಸ್ ಹೊರಟರೆ ಎಲ್ಲರೂ, ಅದರ ಸದ್ದು ಕೇಳಿ ತಮ್ಮ ವಾಹವನ್ನು ಬದಿಗೆ ತೆಗೆದುಕೊಂಡು ಬಂದು ಜೀವ ಉಳಿಸಲು ದಾರಿ ಬಿಡುತ್ತಾರೆ. ಆದರೆ ಈ ಆಂಬುಲೆನ್ಸ್ ಸೇವೆಗಳನ್ನು ದುರ್ಬಳಿಕೆ ಮಾಡಿ ಸಿಕ್ಕಿ ಹಾಕಿಕೊಂಡ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಕೃಪೆ: ಪಬ್ಲಿಕ್ ಟಿವಿ

ಹೌದು.. ಈ ಸುದ್ದಿ ಓದಿದ ಮೇಲೆ ನಮಗೂ ಆಂಬುಲೆನ್ಸ್ ಬಂದ ತಕ್ಷಣ, ರೋಗಿಯನ್ನು ನೋಡಿ ದಾರಿ ಬಿಡಬೇಕು ಎಂಬ ಆಲೋಚನೆ ಬರದೆ ಇರದು. ಹೀಗೆ ಆಂಬುಲೆನ್ಸ್ ದುರ್ಬಳಿಕಗೆ ಮಾಡಿಕೊಂಡವರು ಬೇರ‍್ಯಾರು ಅಲ್ಲ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ಬಿಬಿಎಂಪಿ ಸಿಬ್ಬಂದಿಂಗಳು. ದಾಸಪ್ಪ ಆಸ್ಪತ್ರಗೆ ಸೇರಿದ ಆಂಬುಲೆನ್ಸ್‌ನಲ್ಲಿ ತುರ್ತು ಪರಿಸ್ಥಿತಿಯ ವೇಳೆ ರೋಗಿಗಳಿಗೆ ಬಳಸುವ ವಾಹನ. ಈ ವಾಹನವನ್ನೇ ಅಧೀಕಾರಿಗಳು ಕಮೀಷಿನರ್ ಅವರನ್ನು ಭೇಟಿ ಮಾಡಲು ಉಪಯೋಗಿಸಿ ಕೊಂಡಿದ್ದಾರೆ.

ಕೃಪೆ: ಪಬ್ಲಿಕ್ ಟಿವಿ

ಏನಿದು ಘಟನೆ: ಬಿಬಿಎಂಪಿ ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮ್ಯಾನೇಜರ್ ಶೋಭಾ ಲಕ್ಷ್ಮಿ ಹಾಗೂ ಕ್ಲಾರ್ಕ್ ಭಾಗ್ಯಮ್ಮ ಆಂಬುಲೆನ್ಸ್ ದುರ್ಬಳಿಕೆ ಮಾಡಿಕೊಂಡಿದ್ದಾರೆ. ಫೆ. ೨೧ ರಂದು ಇವರು ಮಲ್ಲೇಶ್ವರಂನಲ್ಲಿರುವ ಕಮೀಷಿನರ್ ಅವರನ್ನು ಭೇಟಿಯಾಗಲು ಆಂಬುಲೆನ್ಸ್ ಬಳಕೆ ಮಾಡಿಕೊಂಡಿದ್ದಾರೆ. ಈ ದೃಶ್ಯಗಳನ್ನು ಖಾಸಗಿ ವಾಹಿನಿ ಸೇರೆ ಮಾಡಿದೆ. ಅಲ್ಲದೆ ಈ ಬಗ್ಗೆ ತಪ್ಪು ಮಾಡಿದವರನ್ನು ಕೇಳಲಾಗಿ ಐಪಿಪಿಯಲ್ಲಿ ಸಹಿ ಮಾಡಿಸುವುದು ಅನಿವಾರ್ಯವಾಗಿತ್ತು. ಅಲ್ಲದೆ ತಡವಾಗಿತ್ತು ಇದರಿಂದ ಮೇಲಧಿಕಾರಿ ಕಲವಾತಿ ಅವರೇ ಆಂಬುಲೆನ್ಸ್‌ನಲಿ ಹೋಗುವಂತೆ ಹೇಳಿದ್ದಾರೆ ಎಂದು ಹೇಳಿ ಜಾರಿಕೊಳ್ಳುತ್ತಾರೆ.
ಈ ಬಗ್ಗೆ ಮೇಲಧಿಕಾರಿ ಕಲಾವತಿಯನ್ನು ಕೇಳಿದಾಗ ಅವರು ಆಂಬುಲೆನ್ಸ್‌ನಲ್ಲಿ ಹೋಗಿರುವ ವಿಷಯ ನನಗೆ ತಿಳಿಯದು. ನಾನು ಯಾರಿಗೂ ಹೀಗೆ ಹೇಳಿಲ್ಲ. ಸಹಿ ಮಾಡಿಸಿಕೊಂಡು ಬರುವಂತೆ ತಿಳಿಸಿದ್ದು ನಿಜ ಎಂದು ತಿಳಿಸಿದ್ದಾರೆ.

ಎಲ್ಲರಿಗೂ ಬುದ್ದಿ ಹೇಳಬೇಕಾದ ಅಧಿಕಾರಿಗಳೇ ಹೀಗೆ ತಪ್ಪು ಮಾಡಿದರೆ, ಅನಕ್ಷರಸ್ಥರ ಕಥೆ ಏನು? ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಿ, ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ತಡೆಯಬೇಕೆಂದು ಜನಸಾಮನ್ಯರು ಕೇಳುತ್ತಿದ್ದಾರೆ.