ಪಾಲಕರೇ ಮಕ್ಕಳ ಕೈಯಲ್ಲಿ ವಾಹನ ಕೊಡುವ ಮುನ್ನ ಎಚ್ಚರ; ನಿಮಗೆ ಬಿಳ್ಳುತ್ತೆ 25 ಸಾವಿರ ದಂಡದ ಜೊತೆಗೆ 3 ವರ್ಷ ಜೈಲು ವಾಸ.!

0
216

ಮಕ್ಕಳು ವಾಹನ ಓಡಿಸಲು ಕಲಿತರೆ ತಂದೆ-ತಾಯಿಗಳಿಗೆ ಅದೇನೋ ಸಂತೋಷ. ಹಾಗಂತ ಒಂದು ವೇಳೆ ಅಪ್ರಾಪ್ತರ ಕೈಯಲ್ಲಿ ವಾಹನ ಕೊಟ್ಟರೆ ಪಾಲಕರು 25 ಸಾವಿರ ದಂಡದ ಜೊತೆಗೆ ಜೈಲಲ್ಲಿ ಮುದೇ ಮುರಿಯಬೇಕಾಗುತ್ತೆ. ಅದಕ್ಕಾಗಿ ನೂತನ ಮೊಟಾರು ವಾಹನಗಳ (ತಿದ್ದುಪಡಿ) ಕಾಯ್ದೆ -2019 ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ನಿಯಮ ಉಲ್ಲಂಘಿಸಿದವರಿಗೆ ಭಾರಿ ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಇದರಲ್ಲಿ ಮುಖ್ಯ ನಿಯಮವೆಂದರೆ ಅಪ್ರಾಪ್ತರು ವಾಹನ ಚಾಲನೆ ಮಾಡಿ ಪೋಲಿಸರು ಕೈಗೆ ಸಿಕ್ಕಿಬಿದ್ದರೆ ಮನೆಯವರೇ ಜೈಲು ಶಿಕ್ಷೆಗೆ ಹೋಗಬೇಕಾಗುತ್ತೆ.

Also read: ಹೇರ್ ಫಾಲ್ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುವ ಮುನ್ನ ಎಚ್ಚರ; ಸ್ವಲ್ಪ ಹೆಚ್ಚು ಕಡಿಮೆಯಾದರೆ ಪ್ರಾಣಕ್ಕೆ ಕುತ್ತು, ಯಾಕೆ ಅಂತ ಈ ಮಾಹಿತಿ ನೋಡಿ.!

ಮಕ್ಕಳ ಕೈಯಲ್ಲಿ ವಾಹನ ಕೊಟ್ಟರೆ ಹುಷಾರ್;

ಹೌದು ಮನೆಯಲ್ಲಿ ಮಕ್ಕಳು ವಾಹನ ಓಡಿಸಿದರೆ ಮನೆಯವರಿಗೆ ಸ್ವಲ್ಪ ಹಗುರಾಗುತ್ತೆ, ಕೆಲವು ಕೆಲಸವನ್ನು ಮಕ್ಕಳೇ ಮಾಡಿ ಬಿಡುತ್ತಾರೆ ಎನ್ನುವ ನೆಮ್ಮದಿ ಇರುತ್ತೆ. ಆದರೆ ಈಗ ಬಂದಿರುವ ರಸ್ತೆ ನಿಯಮದಂತೆ. 18 ವರ್ಷದ ಒಳಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದರೆ ರೂ.25000 ದಂಡ ಮತ್ತು ವಾಹನ ನೀಡಿದವರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ. ದಂಡವನ್ನು ನ್ಯಾಯಾಲಯದಲ್ಲೇ ಹೋಗಿ ಪಾವತಿ ಮಾಡಬೇಕು. ಮಗಳು ಸ್ಕೂಟಿ ಓಡಿಸ್ತಾಳೆ ಎಂಬ ಸಂಭ್ರಮ ಕೆಲಕಾಲದಲ್ಲೇ ಆತಂಕದ ವಾತಾವರಣ ಸೃಷ್ಟಿಸಲಿದೆ. ಅಪ್ರಾಪ್ತಳಿಗೆ ಸ್ಕೂಟಿ ಕೊಡಿಸಿದ ಕಾರಣಕ್ಕೆ ಪೋಷಕರು ಜೈಲು ಹೋಗಬೇಕಾಗುತ್ತದೆ.

ಅದರಂತೆ ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡಿದರೆ ಪೋಷಕರಿಗೆ 25 ಸಾವಿರ ದಂಡ ಮತ್ತು 3 ವರ್ಷ ಜೈಲು ಶಿಕ್ಷೆ ಕಾಯಂ ಆಗಿದ್ದು. ಜುಲೈನಲ್ಲಿ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮೊಟಾರು ವಾಹನ (ತಿದ್ದುಪಡಿ ) ಕಾಯ್ದೆಗೆ ಅಂಗಿಕಾರ ಪಡೆದುಕೊಂಡಿತ್ತು. ಕಳೆದ ತಿಂಗಳಷ್ಷೇ (ಆಗಸ್ಟ್) ರಾಷ್ಟ್ರಪತಿ ಅವರ ಅಂಕಿತ ಪಡೆದುಕೊಂಡಿದ್ದರು. ಸೆಪ್ಟೆಂಬರ್ 1ರಿಂದ ಈ ನಿಯಮ ಸೇರಿದಂತೆ ಸಂಚಾರಿ ನಿಯಮ ಉಲ್ಲಂಘನೆಗೆ ಭಾರಿ ಪ್ರಮಾಣದ ದಂಡ ವಿಧಿಸಿ ದೇಶದಾದ್ಯಂತ ಜಾರಿಗೆ ತಂದಿದೆ.

Also read: ಜಿಮ್-ಗಳಲ್ಲಿ ಬಾಡಿ ಬಿಲ್ಡಿಂಗ್ ಮಾಡಲು ಟ್ರೈನರ್-ಗಳ ಮಾತು ಕೇಳಿ ಔಷಧಿಗಳನ್ನು ತೆಗೆದುಕೊಳ್ಳಬೇಡಿ, ಅದರಿಂದ ನಿಮ್ಮ ಪುರುಷತ್ವಕ್ಕೇ ಕುತ್ತು ಬಂದೀತು!!

ಶಾಲಾ ಹಂತದಲ್ಲೇ ಮಕ್ಕಳಿಗೆ ವಾಹನದ ಹುಚ್ಚು;

ಮಕ್ಕಳು ಪ್ರೌಡ ಶಾಲೆ ಹಂತದಲ್ಲೇ ವಾಹನ ಓಡಿಸುವುದು ಕಲಿತು ಓದಿನ ಕಡೆಗೆ ಹೆಚ್ಚು ಗಮನ ನೀಡುತ್ತೇವೆ ಎಂದು ವಿದ್ಯಾರ್ಥಿಗಳು ಸ್ಕೂಟಿ ಕೊಡಿಸುವಂತೆ ಪೋಷಕರಿಗೆ ದುಂಬಾಲು ಬೀಳುತ್ತಿದ್ದಾರೆ. ಪರಿಣಾಮ ಇರುವ ಆರ್ಥಿಕ ಸಂಕಷ್ಟಗಳ ನಡುವೆಯೇ ಪೋಷಕರು ಪರಿಪಾಟಲುಪಟ್ಟು ವಾಹನ ಕೊಡಿಸುತ್ತಿದ್ದಾರೆ. ಆದರೆ, ಸ್ಕೂಟಿ ಓಡಿಸಲು ಚಾಲನಾ ಪರವಾನಗಿಬೇಕು ಎನ್ನುವುದನ್ನು ಅರಿಯದೆ. ಮುಂಜಾನೆ 6 ಗಂಟೆಗೆ ಟ್ಯೂಷನ್‌ ಹೋಗುವ ವಿದ್ಯಾರ್ಥಿಗಳು ತಾವು ಹೋಗುತ್ತಿರುವುದು ಅಪಾಯಕಾರಿ ಚಾಲನೆ ಎಂಬುದನ್ನು ಗಮನಿಸುತ್ತಿಲ್ಲ. ಇದರಿಂದ ಸಾಕಷ್ಟು ಸಂಚಾರಿ ನಿಯಮಗಳ ಉಲ್ಲಂಘನೆಯಲ್ಲಿ ಅಪ್ರಾಪ್ತರ ಸಂಖ್ಯೆ ಹೆಚ್ಚುತ್ತಿದೆ. ಇವರ ಚಾಲನೆಯಿಂದ ಅಪಘಾತ ಪ್ರಕರಣಗಳು ಕೂಡ ಹೆಚ್ಚಿವೆ. ಇದರಿಂದ ಸಾರ್ವಜನಿಕರು, ಅಮಾಯಕರಿಗೆ ತೊಂದರೆ ಆಗುತ್ತಿದೆ. ಅಪ್ರಾಪ್ತರ ಆಟಕ್ಕೆ ಸಾಮಾನ್ಯರ ಜೀವಕ್ಕೆ ಕುತ್ತು ಬರುತ್ತಿದೆ.

ತಪ್ಪಿಸಿಕೊಳ್ಳುವ ಮಾತೇ ಇಲ್ಲ;

Also read: ಇನ್ಮುಂದೆ ಎಟಿಎಂ ಬಳಕೆ ಸುಲಭವಲ್ಲ; ಒಮ್ಮೆ ಹಣ ಡ್ರಾ ಮಾಡಿದ್ರೆ ಕನಿಷ್ಠ 6 ಗಂಟೆ ಹಣ ಡ್ರಾಗೆ ಅವಕಾಶವಿಲ್ಲ, ಏನಿದು ಹೊಸ ನಿಯಮ?

ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್‌ ಇಲಾಖೆಯಿಂದ ಈಗಾಗಲೇ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕ್ಯಾಮೆರಾಗಳ ಪ್ರತಿ ಹಂತದ ರೀಡಿಂಗ್‌ ಮೇಲೆ ಇಲಾಖೆ ಅಧಿಕಾರಿಗಳು ಕಣ್ಣಾಯಿಸುತ್ತಿದ್ದಾರೆ. ನಿಮ್ಮ ಗಾಡಿಗಳನ್ನು ಪೊಲೀಸರೇ ತಡೆದು ತಪಾಸಣೆ ಮಾಡಬೇಕೆಂದೇನಿಲ್ಲ. ಸಿಸಿಟಿವಿ ಕ್ಯಾಮೆರಾಗಳು ಆ ಕೆಲಸ ಮಾಡುತ್ತವೆ. ನಿಮಗೆ ಗೊತ್ತಿಲ್ಲದಂತೆ ವಾಹನಗಳ ಮಾಲೀಕರಿಗೆ ನೋಟಿಸ್‌ಗಳು ಜಾರಿಯಾಗುತ್ತವೆ. ಆಮೇಲೆ ದಂಡ ಕಟ್ಟುವುದು, ಕೋರ್ಟ್‌ಗೆ ಹೋಗಿ ಗಾಡಿ ಬಿಡಿಸಿಕೊಂಡು ಬರುವುದು, ವಕೀಲರ ಇಡುವುದು ಎಲ್ಲ ಶುರುವಾಗುತ್ತದೆ. ಒಂದು ವೇಳೆ ಜೈಲಿಗೆ ಹೋಗುವ ಪ್ರಸಂಗ ಬರುತ್ತೆ ಎಚ್ಚರ.