ಕೊನೆಗೂ ಪಾಕ್ ಬಣ್ಣ ಬಯಲು ಅಮೆರಿಕಾದಿಂದ ಪಾಕ್‘ಗಿನ್ನು ಭದ್ರತಾ ನೆರವು ಕಟ್; ಭಾರತದ ವಿರುದ್ದ ಪಾಕ್ ಕೆಂಡಾಮಂಡಲ

0
518

ಭಯೋತ್ಪಾದನೆ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ನಡೆಯನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ ಇದೀಗ ಪಾಕಿಸ್ತಾನಕ್ಕೆ ತಾನು ನೀಡಬೇಕಿದ್ದ ಭದ್ರತಾ ನೆರವಿಗೆ ಕತ್ತರಿ ಹಾಕಿದೆ. ಈ ಹಿನ್ನೆಲೆಯಲ್ಲಿ ಭಾರತದ ವಿರುದ್ದ ಪಾಕ್ ಹರಿಹಾಯ್ದಿದೆ.

ಪಾಕ್‌ ಸುದ್ದಿಗಾರರೊಂದಿಗೆ ಮಾತನಾಡಿರುವ ಅಲ್ಲಿನ ವಿದೇಶಾಂಗ ಸಚಿವ ಖ್ವಾಜಾ ಆಸಿಫ್, ಭಾರತ ಹೇಳಿರುವ ಸುಳ್ಳುಗಳನ್ನೇ ನಂಬಿರುವ ಅಮೆರಿಕ ನಮಗೆ ನೀಡುತ್ತಿದ್ದ ಭದ್ರತಾ ನೆರವನ್ನು ಸ್ಥಗಿತಗೊಳಿಸಿದೆ. ಭಾರತದ ತಾಳಕ್ಕೆ ತಕ್ಕಂತೆ ಅಮೆರಿಕ ಕುಣಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಇದರ ಬೆನ್ನಲ್ಲೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ಪಾಕ್ ವಿರುದ್ಧ ಅಮೆರಿಕ ತಿರುಗಿ ಬೀಳಲು ಭಾರತದ ‘ಸುಳ್ಳು ಪ್ರತಿಪಾದನೆಗಳೇ’ ಕಾರಣ ಎಂದು ಟೀಕಿಸಿದ್ದಾರೆ. ಭಾರತ ಹೇಳಿ ಕೊಟ್ಟಿರುವುದನ್ನೇ ಅಮೆರಿಕ ನಂಬಿದೆ. ಅಮೆರಿಕ ಮತ್ತು ಭಾರತ ದೇಶಗಳು ಪರಸ್ಪರ ಕೈಜೋಡಿಸಿವೆ. ಇದೇ ಕಾರಣಕ್ಕಾಗೇ ಅಮೆರಿಕ ಈಗ ಭಾರತದ ಭಾಷೆಯಲ್ಲಿ ಮಾತನಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.