ಬುಡಕಟ್ಟು ಜನರಿಗೆ ಕ್ರೈಸ್ತ ಧರ್ಮದ ಪ್ರಚಾರ ನಡೆಸಲು ಹೋಗಿದ್ದ ಅಮೇರಿಕನ್ ವ್ಯಕ್ತಿ, ಸ್ಥಳಿಯರಿಂದ ಹತ್ಯೆಯಾಗಿದ್ದಾನೆ..

0
553

ಅಂಡಮಾನ್ ದ್ವೀಪವೊಂದರ ಬಾಹ್ಯ ಜಗತ್ತಿನ ಸಂಪರ್ಕಕ್ಕೇ ಬಾರದೇ ಜೀವಿಸುತ್ತಿರುವ ಸೆಂಟಿನೆಲ್ ದ್ವೀಪ ಸಮೂಹದ ಆದಿವಾಸಿಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಹೋಗಿದ್ದ ಅಮೆರಿಕ ಪ್ರಜೆಗೆ ಬುಡಕಟ್ಟು ಜನರು ಬಿಲ್ಲು- ಬಾಣಗಳಿಂದ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಅಂಡಮಾನ್‌- ನಿಕೋಬಾರ್‌ನಲ್ಲಿ ಸಂಭವಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರದ ನಡುವೆ ಬರುವ ದ್ವೀಪ ಸಮೂಹವಾಗಿದೆ.

Also read: ನೀವು ಈ ರೀತಿ ಮಾಡ್ತಾ ಇದ್ರೆ, ನಿಮ್ಮ ಫೋನ್ ಬ್ಯಾಟರಿ ಬೇಗ ಹಾಳಾಗುತ್ತೆ..! ಫೋನ್ ಬ್ಯಾಟರಿ ಚೆನ್ನಾಗಿರಬೇಕು ಅಂದ್ರೆ ಹೀಗೆ ಮಾಡಿ..

ಇಲ್ಲಿನ ಮೂಲನಿವಾಸಿಗಳು ತಮ್ಮದೇ ಆದ ಸಣ್ಣ ಅರಣ್ಯವನ್ನೊಳಗೊಂಡ ದ್ವೀಪದಲ್ಲಿ ವಾಸಿಸುತ್ತಿದ್ದು ಹೊರಗಿನವರೊಡನೆ ಯಾವ ಬಗೆಯ ಸಂಪರ್ಕವನ್ನು ಇಟ್ಟುಕೊಂಡಿಲ್ಲ. ಅಲ್ಲದೆ ಅವರ ನಿವಾಸದ ಸಮೀಪ ಸುಳಿದಾಡುವ ಅಪರಿಚಿತ ವ್ಯಕ್ತಿಗಳ ಮೇಲೆ ಅವರು ಆಕ್ರಮಣ ಮಾಡುವುದು ಸಾಮಾನ್ಯವಾಗಿದೆ.

ಸೆಂಟಿನಲೀಸ್ ಬುಡಕಟ್ಟು ಜನರು ಕೊಲೆಗೈದಿದ್ದು ಯಾಕೆ?

ಅಂಡಮಾನ್ ದ್ವೀಪ ಸಮೂಹದ ಉತ್ತರ ಸೆಂಟಿನೆಲ್ ದ್ವೀಪದಲ್ಲಿ ಸೆಂಟಿನಲೀಸ್ ಬುಡಕಟ್ಟು ಜನರು ವಾಸಿಸುತ್ತಿದ್ದು, ಈ ಪ್ರದೇಶವನ್ನು ಭಾರತ ಸರ್ಕಾರ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದೆ. ಆದರೆ ಅಮೆರಿಕ ಪ್ರಜೆ ಜಾನ್ ಅಲೆನ್ ಚೌ ಅಕ್ರಮವಾಗಿ ಇತರ ಏಳು ಮಂದಿ ಮೀನುಗಾರರು ಜೊತೆಗೂಡಿ ಈ ದ್ವೀಪವನ್ನು ಪ್ರವೇಶಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಬುಡಕಟ್ಟು ಜನರ ಜತೆ ಮಾತನಾಡಲು ಹೋಗಿದ್ದಾರೆ, ಆದರೆ ಈ ಬುಡಕಟ್ಟು ಜನರು ಹೊರಜಗತ್ತಿನ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ ಆದರಿಂದ ಮೂಲನಿವಾಸಿಗಳು ಈತನನ್ನು ಶತ್ರುವೆಂದು ತಿಳಿದು ಹತ್ಯೆ ಮಾಡಿದ್ದಾರೆ.

Also read: ಈ ಮಹಿಳೆಗೆ ಫ್ರೆಂಚ್ ಮೂಲವಿದ್ದರೂ ತಮ್ಮ ಉತ್ತಮ ಕೆಲಸಗಳಿಂದ ಗ್ರಾಮ ಪಂಚಾಯತಿ ಅಧ್ಯಕ್ಷೆ ಸ್ಥಾನಕ್ಕೇರಿರುವ ವಿಚಾರ ನಿಮ್ಮನ್ನು ಅಚ್ಚರಿಗೊಳಿಸುತ್ತದೆ.

ಜಾನ್ ಈ ಹಿಂದೆ ಒಟ್ಟು ಐದು ಬಾರಿ ಈ ದ್ವೀಪಕ್ಕೆ ಭೇಟಿ ನೀಡಿದ್ದ ಎಂದು ಮತ್ತೊಂದು ವರದಿ ಹೇಳಿದೆ. ದ್ವೀಪದಲ್ಲಿ ಕ್ರೈಸ್ತ ಧರ್ಮದ ಪ್ರಚಾರ ನಡೆಸಲು ಈತ ಉದ್ದೇಶಿಸಿದ್ದ ಎಂದೂ ಹೇಳಲಾಗಿದೆ. ಆದರೆ ಈ ವರದಿಯನ್ನು ಇದುವರೆಗೆ ಯಾರೂ ದೃಢೀಕರಿಸಿಲ್ಲ. ವಿಶೇಷವೆಂದರೆ ಈ ದ್ವೀಪಕ್ಕೆ ಪ್ರವಾಸಿಗರ ಭೇಟಿಗೆ ಸರ್ಕಾರದಿಂದ ನಿರ್ಬಂಧವಿದೆ. ಆದರೂ ಈ ಸಾಹಸಕ್ಕೆ ಸಾಹಸ ಮಾಡಿದ ಏಳು ಮೀನುಗಾರರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ವಿಜಯ್ ಸಿಂಗ್ ಹೇಳಿದ್ದಾರೆ.

ಮಾದ್ಯಮಗಳ ವರದಿಯ ಆಧಾರದ ಮೇಲೆ ಹೇಳುವುದಾದರೆ:

Also read: ಮೈಸೂರು ಬೆಂಗಳೂರು ಪ್ರಯಾಣಿಕರಿಗೆ ಇಲ್ಲಿದೆ ಸಿಹಿ ಸುದ್ದಿ; ಇನ್ಮುಂದೆ ಮೈಸೂರಿಗೆ ಹೋಗಲು ಬರಿ 1. 20 ಗಂಟೆ ಸಾಕು..

ಮೃತಪಟ್ಟ ಅಮೆರಿಕನ್ ವ್ಯಕ್ತಿಯು ಅಂಡಮಾನ್ ದ್ವೀಪಗಳಿಗೆ ಸಾಹಸಮಯ ಪ್ರವಾಸಕ್ಕಾಗಿ ಆಗಮಿಸಿ ಸಾವನ್ನಪ್ಪಿರುವ ವ್ಯಕ್ತಿಯ ದೇಹವನ್ನು ಇನ್ನೂ ವಶಪಡಿಸಿಕೊಂಡಿಲ್ಲ. ಮತ್ತು ಚೆನ್ನೈನಲ್ಲಿನ ಅಮೆರಿಕನ್ ದೂತಾವಾಸ ಕಛೇರಿಗೆ ಅಂಡಮಾನ್ ನಲಿ ಪ್ರವಾಸಕ್ಕೆ ತೆರಳಿದ್ದ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದರೂ ಅದನ್ನು ಬಹಿರಂಗಪಡಿಸಲು ನಿರಾಕರಿಸಿದೆ. ಎಂದು ಮದ್ಯಮ ವರದಿ ಮಾಡಿದೆ.

ಹತ್ಯೆಯಾದ ಅಮೆರಿಕ ಜಾನ್ ಗೆ ಮೊದಲೇ ತಿಳಿದಿತ್ತು ಸಾವಿನ ಸೂಚನೆ?

ಅಂಡಮಾನ್ ದ್ವೀಪಕ್ಕೆ ಅಲ್ಲಿನ ಆದಿವಾಸಿಗಳನ್ನು ಮತಾಂತರ ಮಾಡಲು ತೆರಳಿದ ಅಮೆರಿಕ ವ್ಯಕ್ತಿಗೆ ಸಾವಿನ ಸೂಚನೆ ಮೊದಲೇ ತಿಳಿದಿತ್ತು. ಅಲ್ಲಿಗೆ ತೆರಳುವ ಮುನ್ನ ಆ ವ್ಯಕ್ತಿ ಬರೆದಿರುವಂತಹ ಪತ್ರದಲ್ಲಿ ಮೊದಲು ತಮ್ಮ ಪೋಷಕರಿಗೆ ಬರೆದಿರುವ ಪತ್ರವೊಂದು ಇದೀಗ ಎಲ್ಲೆಡೆ ವೈರಲ್ ಆಗಿದೆ. ಕಳೆದ ನವೆಂಬರ್ 16ರಂದು ಈ ವ್ಯಕ್ತಿ ಬರೆದ ಪತ್ರದಲ್ಲಿ. ನಾವು ಅಂಡಮಾನ್ ದ್ವೀಪಕ್ಕೆ ಹೋಗವ ಸಾಹಸಕ್ಕೆ ಕೈ ಹಾಕಿದ್ದು, ಅಲ್ಲಿಗೆ ತೆರಳಿದಾಗ ಅಲ್ಲಿನ ಆದಿವಾಸಿಗಳು ನನ್ನನ್ನು ಹತ್ಯೆ ಮಾಡಿದಲ್ಲಿ ಯಾವುದೇ ಕಾರಣಕ್ಕೂ ಕೂಡ ವಿತಲಿತರಾಗದಿರಿ. ಇನ್ನೊಂದು ಜನ್ಮ ತಾಳಿ ನಿಮ್ಮನ್ನು ಮತ್ತೆ ನೋಡುತ್ತೇನೆ. ಜೇಸುಗಿಂತ ನಿಮ್ಮನ್ನು ಹೆಚ್ಚು ಪ್ರೀತಿ ಮಾಡುವವರು ಯಾರೂ ಇರಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.