ಗುಜರಾತ್, ಹಿಮಾಚಲ ಜಯಭೇರಿ ನಂತರ ಅಮಿತ್ ಶಾ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರಂತೆ, ಕರ್ನಾಟಕವೂ ಬಿಜೆಪಿ ಮಡಿಲಿಗೆ ಸೇರಲಿದೆಯೇ?

0
422

ಈಗಾಗಲೇ ಗುಜುರಾತ್ ಮತ್ತು ಹಿಮಾಚಲ್-ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ, ಪಕ್ಷದ ಎಲ್ಲ ಕಾರ್ಯಕರ್ತರಿಗೆ ಹಾಗು ಜನರಿಗೆ ಧನ್ಯವಾದ ಹೇಳಿದ ಪಕ್ಷದ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಅವರು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಸುಳಿವು ನೀಡಿದ್ದಾರೆ, ಏನು ಅವರ ಮುಂದಿನ ಯೋಜನೆ ಅಂತೀರ ನೀವೇ ನೋಡಿ.

ಗುಜುರಾತ್ ಮತ್ತು ಹಿಮಾಚಲ್-ಪ್ರದೇಶದಲ್ಲಿ ಕಮಲ ಅರಳಿಸಿದ ಹಾಗೆ ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಪಕ್ಷ ಅಧಿಕಾರಕ್ಕೇರಲು ಬೇಕಿರುವ ಎಲ್ಲ ಸಿದ್ಧತೆಗಳನ್ನು ಮಾಡಲು, ಅನುಕೂಲವಾಗಲು ಹಾಗು ರಾಜ್ಯ ನಾಯಕರುಗಳ ಜೊತೆ ಸದಾ ಸಂಪರ್ಕದಲ್ಲಿರಲು ಅಮಿತ್ ಶಾ ಅವರು ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆಯೆಂತೆ.

ಗುಜರಾತ್ ಫಲಿತಾಂಶದ ಬೆನ್ನಲ್ಲೇ ಸಂಕ್ರಾಂತಿ ವೇಳೆಗೆ ರಾಜ್ಯಕ್ಕೆ ಆಗಮಿಸಲಿರುವ ಅಮಿತ್ ಶಾ, ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ, ಬಿಜೆಪಿ ಕಚೇರಿ ಹಾಗೂ ವಿಮಾನ ನಿಲ್ದಾಣಕ್ಕೆ ಹತ್ತಿರವಾಗಲೆಂದು ಸಾದರಹಳ್ಳಿ ಸಮೀಪ ಏರ್ ಪೋರ್ಟ್ ರಸ್ತೆಯಲ್ಲಿರುವ ಬಹು ದೊಡ್ಡ ವಿಲ್ಲಾವೊಂದನ್ನು ಬಾಡಿಗೆಗೆ ಪಡೆದಿದ್ದಾರೆ. ಈ ವಿಲ್ಲಾದಲ್ಲೇ ಚುನಾವಣೆ ಕಾರ್ಯತಂತ್ರ ನಡೆಯುತ್ತದೆಯಂತೆ, ಅಮಿತ್ ಶಾ ಅವರ ತಂಡವು ಇದೆ ವಿಲ್ಲಾ-ದಲ್ಲಿ ವಾಸಿಸಲಿದೆಯಂತೆ.

ಅಮಿತ್ ಶಾ ಅವರು ಇಲ್ಲಿಂದಲೇ ಮಂಗಳೂರು, ಮೈಸೂರು, ಹುಬ್ಬಳ್ಳಿ , ಬೆಳಗಾವಿ ಮುಂತಾದ ಕಡೆಗೆ ಹೋಗಲಿದ್ದಾರೆ ಮತ್ತು ವಾರದಲ್ಲಿ ಎರಡು ಬಾರಿ ಬೆಂಗಳೂರಿಗೆ ಭೇಟಿ ಕೊಡಲಿದ್ದಾರೆ. ಅವರು ರಾಜ್ಯ ಚುನಾವಣೆಯ ಬಗ್ಗೆ ಎಷ್ಟು ಗಮನ ವಹಿಸಿದ್ದಾರೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ.

ಒಟ್ಟಿನಲ್ಲಿ ಎರಡು ರಾಜ್ಯಗಳ ಗೆಲುವಿನಿಂದ ಹಿಗ್ಗದೆ ಪಕ್ಷವನ್ನು ದೇಶದೆಲ್ಲೆಡೆ ಅಧಿಕಾರಕ್ಕೆ ತರಲು ಪ್ರಧಾನಿ ಮತ್ತು ಅಮಿತ್ ಶಾ ಜೋಡಿ ಪಣ ತೊಟ್ಟಂತೆ ಭಾಸವಾಗುತ್ತಿದೆ…!