ಬಿ.ಜೆ.ಪಿ.ಯವರ ಪರಿವರ್ತನಾ ರ್ಯಾಲಿಯಿಂದ ಬಿ.ಜೆ.ಪಿ. ಅಧಿಕಾರಕ್ಕೆ ಬರುವುದು ಗ್ಯಾರಂಟಿ ಅಂತ ಹೇಳ್ತಾರೆ ರಾಜಕೀಯ ಪಂಡಿತರು! ನಿಮಗೆ ಏನು ಅನ್ನಿಸುತ್ತೆ??

0
623

ಕರ್ನಾಟಕದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಗೆಲ್ಲಲು ಪಕ್ಷಗಳು ಭರದ ತಯಾರಿ ನಡೆಸಿವೆ. ಅಲ್ಲದೆ ಸರ್ಕಾರದ ವಿರುದ್ಧ ಪ್ರಚಾರ ಹಾಗೂ ಹಲವು ವರ್ಷಗಳಿಂದ ಅನುಭವಿಸುತ್ತಿರುವ ಅಧಿಕಾರ ಹಿಡಿಯಲು ಬಿಜೆಪಿ, ಜೆಡಿಎಸ್ ಪ್ಲಾನ್ ಮಾಡಿಕೊಂಡಿವೆ.


ಅದರಂತೆ ಬಿಜೆಪಿ ಪಕ್ಷ ಇತ್ತೀಚಿಗೆ ಬಿಜೆಪಿ ವರಿಷ್ಠರಾದ ಅಮಿತ್ ಶಾ ಅವರನ್ನು ಬೆಂಗಳೂರಿಗೆ ಕರೆಸಿ, ಪರಿವರ್ತನಾ ರ್ಯಾಲಿ ನಡೆಸಿತು. ಈ ರ್ಯಾಲಿಯ ಉದ್ದೇಶ ಸರ್ಕಾರದ ನ್ಯೂನತೆಗಳನ್ನು ಜನರ ಮುಂದೆಡಿವುದಾಗಿದೆ. ಇದರ ಮುಂದುವರೆದ ಭಾಗವಾಗಿ ಬಿಜಿಪಿ ಹೊಸ ರಣ ತಂತ್ರ ರೂಪಿಸಿಕೊಂಡಿದೆ. ಅದ್ರಂತೆ ಜಿಲ್ಲಾವಾರು ಪರಿವರ್ತನಾ ರ್ಯಾಲಿ ನಡೆಸುವ ಪ್ಲಾನ್ ಮಾಡಿಕೊಂಡಿದೆ. ಅದರಂತೆ ಪ್ರತಿ ಜಿಲ್ಲೆಗಳಲ್ಲಿಯೂ ಒಬ್ಬೊಬ್ಬ ಕೇಂದ್ರ ನಾಯಕರು ಬಂದು ಭಾಷಣ ಮಾಡಲಿದ್ದಾರೆ. ಈ ರ್ಯಾಲಿಗಾಗಿ ಬಿಜೆಪಿ ಹೈಟೆಕ್ ಬಸ್‍ ಸಿದ್ಧ ಪಡಿಸಿದೆ. ಇದರಂತೆ ಈ ಬಸ್ ನಲ್ಲಿ ಸಕಲ ಐಶಾರಾಮಿ ಸೌಲಭ್ಯವೂ ಸಿಗಲಿವೆ.


ಇನ್ನು ನಾವು ಏನು ಕಮ್ಮಿ ಇಲ್ಲ ಎಂಬಂತೆ ತೆನೆ ಹೊತ್ತ ಮಹಿಳೆ ತಿಳಿಸಿದ್ದಾಳೆ. ಪರಿಣಾಮ ರಾಜ್ಯದಲ್ಲಿ ಜೆಡಿಎಸ್ ಪ್ರಚಾರ ಮಾಡಲು ಯೋಜನೆಯನ್ನು ಹೆಣೆದುಕೊಂಡಿದೆ. ಇತ್ತೀಚಿಗೆ ಕುಮಾರ್ ಸ್ವಾಮಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದರ ಕಾರಣದಿಂದ ಕುಮಾರ್ ಸ್ವಾಮಿ ಅವರು ತಮ್ಮ ಸುರಕ್ಷತೆಯನ್ನು ಗಮನದಲಿಟ್ಟುಕೊಂಡು ಒಂದು ಸುಸಜ್ಜಿತ ಟೆಂಪು ಮಾಡಿಕೊಂಡಿದ್ದಾರೆ. ಈ ವಾಹನದಲ್ಲೂ, ಪ್ರಥಮ ಚಿಕಿತ್ಸೆಯಿಂದ ಹಿಡಿದು ಎಲ್ಲ ಮೂಲಭೂತ ಸೌಲಭ್ಯಗಳು ಸಿಗಲಿವೆ.
ಎರಡು ಪಕ್ಷಗಳು ರ್ಯಾಲಿ ನಡೆಸಿದ್ರೆ, ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಸುಮ್ಮನೆ ಕೈ ಕೈ ಹಿಚಿಕೊಳ್ಳುತ್ತಾ ಕೂಡುತ್ತದೆ ಎಂದ್ರೆ ಅದು ತಪ್ಪು ಕಲ್ಪನೆ. ಕೈ ಪಾಳಯದಿಂದ ಬಂದ ಮಾಹಿತಿಯ ಪ್ರಕಾರ ಕಾಂಗ್ರೆಸ್‍ ಸಹ ರ್ಯಾಲಿ ನಡೆಸಲು ತೀರ್ಮಾನಿಸಿದ್ದು, ಇದು ಆರ್ಶಿವಾದ ಎಂಬ ಹೆಸರಿನಿಂದ ಹೊರಡುವ ಸಾಧ್ಯತೆ ಇದೆ.