ಪಕ್ಷಾಂತರ ಶಾಸಕರಿಗೆ ಸಚಿವ ಸ್ಥಾನ ಹಂಚಿಕೆಯಲ್ಲಿ ಅಮಿತ್ ಶಾ ನಿರ್ಣಯವೇ ಅಂತಿಮ; ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟನೆ.!

0
113

ಉಪ ಚುನಾವಣೆ ಮುಗಿದು ತಿಂಗಳು ಆದರು ಇನ್ನೂ ಸಂಪುಟ ವಿಸ್ತರಣೆ ಆಗದೆ ಇರುವುದು ಪಕ್ಷಾಂತರಿಗಳಿಗೆ ದೊಡ್ಡ ಆಂತಕಕ್ಕೆ ತಳ್ಳಿದೆ, ಈಗಾಗಲೇ ತಮಗೆ ಬೇಕಾದ ಸೀಟ್-ಗೆ ತವಲ್ ಹಾಕಿ ಕಾಯುತ್ತಿರುವ ಶಾಸಕರಿಗೆ ದಿನಕ್ಕೊಂದು ನಿರಾಶೆ ಕೇಳಿ ಬರುತ್ತಿದೆ, ಏಕೆಂದರೆ ಗೆದ್ದ ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದ್ದರೆ, ಈಗ ಮುಖ್ಯಮಂತ್ರಿ ಯಡಿಯೂರಪ್ಪನವರು ಮತ್ತೊಂದು ಸುದ್ದಿಯನ್ನು ತಿಳಿಸಿದ್ದು, ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರ್ಣಯವೇ ಅಂತಿಮ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದು ರಾಜಕೀಯ ವಲಯದಲ್ಲಿ ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸಿದೆ.


Also read: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಹುತೇಕ ಡಿ.ಕೆ.ಶಿವಕುಮಾರ್ ಹೆಸರು ಅಂತಿಮ; ನಾಳೆಯೇ ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆ.!

ಹೌದು ‘ಅರ್ಹ’ರಾಗಿರುವ ಶಾಸಕರ ಹಿತ ಕಾಯುವ ಸಿಎಂ ಯಡಿಯೂರಪ್ಪ ಅವರ ವಚನ ಹಾಗೂ ಬಿಜೆಪಿ ಮೂಲನಿವಾಸಿಗಳ ಹಿತಾಸಕ್ತಿ ನಡುವಿನ ಸಂಘರ್ಷದಿಂದಾಗಿ ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಕಗ್ಗಂಟಿನ ಹಾದಿ ಹಿಡಿದಿದೆ. ದಿಲ್ಲಿ ವಿಧಾನಸಭೆ ಚುನಾವಣೆಗೆ ತೆರೆ ಬೀಳುವವರೆಗೂ ಸಂಪುಟ ವಿಸ್ತರಣೆಯಾಗುವ ಲಕ್ಷಣವಿಲ್ಲ ಎನ್ನಲಾಗುತ್ತಿದೆ. ವಾಸ್ತವದಲ್ಲಿ ಉಪ ಚುನಾವಣೆ ಬಳಿಕ ಯಡಿಯೂರಪ್ಪ ಅವರಿಗೆ ಹೆಚ್ಚಿನ ರಾಜಕೀಯ ಶಕ್ತಿ ಬಂದಿತ್ತು. ಅವರು ಅಂದುಕೊಂಡಂತೆ ಸಂಪುಟ ವಿಸ್ತರಣೆಯಾಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಬಿಎಸ್‌ವೈ ಲೆಕ್ಕಾಚಾರವೇ ತಲೆಕೆಳಗಾಗುವಂತಹ ಬೆಳವಣಿಗೆಗಳು ನಡೆಯುತ್ತಿವೆ.

ಅಮಿತ್ ಶಾ ನಿರ್ಣಯವೇ ಅಂತಿಮ?

Also read: ಮಂಗಳೂರು ಗೋಲಿಬಾರ್-ನಲ್ಲಿ ಪೊಲೀಸರ ದೌರ್ಜನ್ಯ ಕುರಿತ 35 ವಿಡಿಯೋ ರಿಲೀಸ್ ಮಾಡಿದ ಕುಮಾರಸ್ವಾಮಿ; ರಾಜ್ಯ ರಾಜಕೀಯವೇ ಅಲ್ಲೋಲ ಕಲ್ಲೋಲ.!

ಯಾರೋ ಹೇಳಿದರು ಅಂತ ಯಾರಿಗೆ ಬೇಕು ಅವರಿಗೆ ಸಚಿವ ಸ್ಥಾನ ನೀಡಲಾಗದು. ಅದನ್ನು ರಾಷ್ಟ್ರೀಯ ಅಧ್ಯಕ್ಷರೇ ನಿರ್ಧರಿಸುತ್ತಾರೆ ಯಡಿಯೂರಪ್ಪ ಎಂದರು. ಇಂದು ಅಮಿತ್ ಶಾ ಭೇಟಿಯಾಗಲು ಹೇಳಿದ್ದರು. ಆದರೆ ಹಾಲುಮತ ಸಂಸ್ಕೃತಿ ಕಾರ್ಯಕ್ರಮ ನಿಮಿತ್ತ ಹೋಗಲಾಗಿಲ್ಲ. ಭೇಟಿಗೆ ಅವಕಾಶ ನೀಡಿದರೆ ಇಂದು ರಾತ್ರಿಯೇ ದೆಹಲಿ ತೆರಳಲಾಗುವುದು. ಸಾಧ್ಯವಾದಷ್ಟು ಶೀಘ್ರದಲ್ಲಿಯೇ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಗಿಸಲಾಗುವುದು. ನಾನು ಹೊರದೇಶಕ್ಕೆ ಹೋಗುವುದೊರಳಗೆ ಸಂಪುಟ ವಿಸ್ತರಣೆ ಮಾಡುವ ಉದ್ದೇಶವಿದೆ. ಆದರೆ, ಇಂದು ಅಮಿತ್ ಶಾ ಭೇಟಿಗೆ ಅವಕಾಶ ಸಿಗದಿದ್ದಲ್ಲಿ ನಾಳೆಯಾದರೂ ಭೇಟಿ ಮಾಡುವೆ. ಆದರೆ ಎಲ್ಲವೂ ಕೇಂದ್ರದ ಕೈಯಲ್ಲಿದೆ ಎಂದು ಮುಖ್ಯಮಂತ್ರಿ ಬಿಎಸ್ ವೈ ಹೇಳಿದ್ದಾರೆ.

ಬರಿ 8 ಶಾಸಕರಿಗೆ ಸಂಪುಟಕ್ಕೆ ಸೇರ್ಪಡೆಯಾಗುವ ಅವಕಾಶ?


Also read: ಹೈಕಮಾಂಡ್ ಸೂಚನೆಯಂತೆ 9 ಶಾಸಕರಿಗೆ ಮಾತ್ರ ಮಂತ್ರಿ ಸ್ಥಾನ? ಮಂತ್ರಿಗಿರಿ ಕೊಡಿಸಿ ಎಂದು ಸ್ವಾಮೀಜಿಗಳಿಗೆ ದುಂಬಾಲು ಬಿದ್ದ ಎಂಟಿಬಿ, ವಿಶ್ವನಾಥ್​.!

ಉನ್ನತ ಮೂಲಗಳ ಪ್ರಕಾರ ಈ ಬಾರಿ 8 ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಸಲು ಹೈಕಮಾಂಡ್‌ಗೆ ಒಲವಿದೆ. ಇವರಲ್ಲಿ ಅರ್ಹ ಶಾಸಕರ ಕೋಟಾದಿಂದ 6 ಮಂದಿಯಿರುತ್ತಾರೆ. ಉಳಿದೆರಡು ಸ್ಥಾನವನ್ನು ಮೂಲ ಬಿಜೆಪಿ ಶಾಸಕರಿಗೆ ನೀಡಲಾಗುತ್ತದೆ. ಇದು ಬಹುಮಟ್ಟಿಗೆ ಹೈಕಮಾಂಡ್‌ನ ಸೂತ್ರವೂ ಆಗಿದೆ. ಆದರೆ, ಇದು ಬಿಎಸ್‌ವೈ ಅವರಿಗೆ ಇಷ್ಟವಿಲ್ಲ. ಯಾಕೆಂದರೆ ಈ ಸರಕಾರ ರಚನೆಗೆ ಕಾರಣರಾದ ಹೊಸ ಶಾಸಕರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಸಿಎಂ ಸಿಲುಕಿದ್ದಾರೆ. ಮಹೇಶ್‌ ಕುಮಠಳ್ಳಿ, ಶ್ರೀಮಂತ ಪಾಟೀಲ್‌ ಅವರನ್ನು ಬೇಕಾದರೆ ಸಂಪುಟದಿಂದ ಹೊರಗಿಡಬಹುದು. ಉಳಿದ 9 ಮಂದಿಗೆ ಮಂತ್ರಿ ಸ್ಥಾನ ನೀಡಲೇಬೇಕೆಂದು ಯಡಿಯೂರಪ್ಪ ಪಟ್ಟು ಹಾಕುತ್ತಿದ್ದಾರೆ. ಆದರೆ ಗೆದ್ದ ಎಲ್ಲ ಶಾಸಕರು ಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ ಒಂದು ವೇಳೆ ಮಂತ್ರಿ ಸ್ಥಾನ ಸಿಗದಿದ್ದರೆ ಮುಂದಿನ ನಿರ್ಣಯ ಏನು ಎನ್ನುವುದು ಕಾದು ನೋಡಬೇಕಿದೆ.