ವಯಸ್ಸಲ್ಲಿ ಸುಧಾ ಮೂರ್ತಿಯವರಿಗಿಂತ ದೊಡ್ಡವರಾಗಿದ್ದರೂ ವ್ಯಕ್ತಿತ್ವಕ್ಕೆ ಬೆಲೆ ಕೊಟ್ಟು ಅವರ ಕಾಲಿಗೆ ನಮಸ್ಕರಿಸಿದ ಅಮಿತಾಬ್ ಬಚ್ಚನ್!!

0
443

ಸರಳತೆಗೆ ಹೆಸರುವಾಸಿಯಾದ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಸಾಧನೆ ಎನ್ನುವ ಉತ್ತುಂಗದ ಶಿಖರದ ತುತ್ತ ತುದಿಯಲ್ಲಿ ನಿಂತಿರುವ ಇವರು ಕರುಣಾಮಯಿ ಆಗಿದ್ದಾರೆ. ಇವರು ಕನ್ನಡ ಹಲವು ರಿಯಾಲಿಟಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಯುವ ಪೀಳಿಗೆಗೆ ಸ್ಪೂರ್ತಿ ತುಂಬಿದ್ದಾರೆ. ಅದರಂತೆ ಇತ್ತೀಚಿಗೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ‘ಕೌನ್ ಬನೇಗಾ ಕರೋಡ್ ಪತಿ’ ಶೋನಲ್ಲಿ ಭೇಟಿಯಾಗಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸುಧಾ ಮೂರ್ತಿ ಅವರು ಶೋಗೆ ಆಗಮಿಸುತ್ತಿದ್ದಂತೆಯೇ ಅಮಿತಾಭ್‌ ಅವರು ಸೀದಾ ಕಾಲಿಗೆ ಎರಗಿ ಆಶೀರ್ವಾದ ಪಡೆದಿದ್ದಾರೆ.


Also read: ಅಭಿವೃದ್ಧಿ ಹೆಸರಲ್ಲಿ ಕಾಡು ನಾಶ; ಮನನೊಂದು 2 ವರ್ಷದಲ್ಲಿ 25 ಕಿರು ಅರಣ್ಯ ಸೃಷ್ಟಿಸಿದ ಸರ್ಕಾರಿ ಅಧಿಕಾರಿ, ಇಡಿ ದೇಶಕ್ಕೆ ಮಾದರಿ.!

ಸುಧಾಮೂರ್ತಿ ಕಾಲಿಗೆ ಬಿದ್ದ ಅಮಿತಾಬ್ ಬಚ್ಚನ್?

ಹೌದು ಕೆಲವು ದಿನಗಳ ಹಿಂದೆ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮತ್ತು ಬಾಲಿವುಡ್ ನಟ ಅಭಿತಾಬ್ ಬಚ್ಚನ್ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಈ ಬಗ್ಗೆ ಸ್ವತಃ ಅಮಿತಾಬ್ ಬಚ್ಚನ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಸುಧಾ ಮೂರ್ತಿ ಅವರು ಅತಿಥಿಯಾಗಿ ಭಾಗವಹಿಸಿದ್ದರೆ ಅಥವಾ ಸ್ಪರ್ಧಿಯಾಗಿ ಹೋಗಿದ್ದಾರೆಯೇ ಎಂಬುದು ಗೊಂದಲಕ್ಕೆ ಕಾರಣವಾಗಿತ್ತು. ಈ ಗೊಂದಲಗಳಿಗೆಲ್ಲ ತೆರೆ ಬಿದ್ದಿದ್ದು ಸುಧಾಮೂರ್ತಿಯವರು ಸ್ಪರ್ಧಿಯಾಗಿ ‘ಕೌನ್ ಬನೇಗಾ ಕರೋಡ್ ಪತಿ’ ಶೋನಲ್ಲಿ ಭಾಗವಹಿಸಿದ್ದಾರೆ. ಕಾರ್ಯಕ್ರಮದ ಪ್ರೊಮೊ ಬಿಡುಗಡೆಯಾಗಿದೆ.


Also read: ಭಾರತೀಯ ವಾಯುಪಡೆಯಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ಮಗನ ನೆನಪಿಗಾಗಿ 350 ಸ್ಲಂ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ದಂಪತಿಗಳು.!

ಸುಧಾ ಮೂರ್ತಿ ಅವರು ಶೋಗೆ ಆಗಮಿಸುತ್ತಿದ್ದಂತೆಯೇ ಅಮಿತಾಭ್‌ ಅವರು ಸೀದಾ ಕಾಲಿಗೆ ಎರಗಿ ಆಶೀರ್ವಾದ ಪಡೆದಿದ್ದಾರೆ. ವಿಶೇಷವೆಂದರೆ, ಅವರು ಸುಧಾ ಮೂರ್ತಿ ಅವರಿಗಿಂತ ಹಿರಿಯರು. ಆದರೂ, ಸುಧಾ ಅವರ ಮಾಡಿರುವ ಸಾಮಾಜಿಕ ಕಾರ್ಯಗಳಿಗೆ ಗೌರವ ನೀಡುವ ಸಲುವಾಗಿ ಕಾಲಿಗೆ ಮುಗಿದಿರುವುದು ವಿಶೇಷ. ಈ ಹಿಂದೆ ಅನೇಕ ಬಾರಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ಗುರುಗಳ ಕಾಲಿಗೆ ಬಿದ್ದು ಸುಧಾ ಮೂರ್ತಿ ಅವರು ಆಶೀರ್ವಾದ ಪಡೆದುಕೊಂಡಿದ್ದರು. ‘ವೀಕೆಂಡ್ ವಿತ್‌ ರಮೇಶ್‌’ ಕಾರ್ಯಕ್ರಮದಲ್ಲಿ ಅವರು ಬಂದಾಗಲೂ ಶಿಕ್ಷಣ ಕಲಿಸಿದ ಗುರುಗಳ ಕಾಲಿಗೆ ವಂದಿಸಿದ್ದರು. ಆದರೆ, ಕಾರ್ಯಕ್ರಮವೊಂದರಲ್ಲಿ ಅವರ ಕಾಲಿಗೆ ಅಮಿತಾಭ್ ನಮಸ್ಕರಿಸಿರುವುದು ವಿಶೇಷ.


Also read: ಕ್ಯಾನ್ಸರ್ ರೋಗದಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ನೆರವಾಗಲು ತಮ್ಮ ತಲೆಕೂದಲನ್ನು ದಾನ ಮಾಡಿ ಮಾದರಿಯಾದ ಮಹಿಳೆ ಪೊಲೀಸ್.!

ಅದರಂತೆ ಈ ಶೋನಲ್ಲಿ ಇನ್ಫೋಸಿಸ್‌ ಫೌಂಡೇಶನ್ ಮೂಲಕ ಸುಧಾ ಮೂರ್ತಿ ಅವರು ಮಾಡಿರುವ ಅನೇಕ ಜನಪರ ಕಾರ್ಯಕ್ರಮಗಳ ಬಗ್ಗೆ ಬಚ್ಚನ್ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ, ಕೆಲವು ದಿನಗಳ ಹಿಂದೆಯೇ ಈ ಶೋನಲ್ಲಿ ಭಾಗವಹಿಸಿದ್ದರ ಕುರಿತು ಸುಧಾ ಮೂರ್ತಿ ಮಾಹಿತಿ ಹಂಚಿಕೊಂಡಿದ್ದಾರೆ. ‘ನಾನು ಸಿನಿಮಾ ಪ್ರೇಮಿ ಹಾಗಾಗಿ ಅಮಿತಾಭ್ ಬಚ್ಚನ್‌ ಅವರಂತಹ ಮೇರು ಪ್ರತಿಭೆಯನ್ನು ಭೇಟಿಯಾಗಿದ್ದು ತುಂಬಾ ಖುಷಿಯಾಗಿದೆ. ಸೋಲು, ಗೆಲುವು ದೊಡ್ಡದಲ್ಲ, ನಾವು ಮಾಡುವ ಕೆಲಸದ ಮೂಲಕ ಜನರನ್ನು ತಲುಪುವುದು ನಮ್ಮ ಉದ್ದೇಶ ಮುಖ್ಯ’ ಎಂದಿದ್ದರು. ಪ್ರೋಮೋದಲ್ಲಿ ಅಮಿತಾಬ್ ಬಚ್ಚನ್, ಸುಧಾಮೂರ್ತಿ ಅವರ ಸಾಧನೆ ಮತ್ತು ಸಮಾಜ ಸೇವೆಯನ್ನು ಪ್ರೇಕ್ಷಕರಿಗೆ ವಿವರಿಸಿದ್ದಾರೆ. ಜೊತೆಗೆ ಬಿಗ್ ಬಿ ಅವರ ಕಾಲಿಗೆ ಬಿದ್ದು, ಆಶೀರ್ವಾದ ಪಡೆದಿದ್ದಾರೆ. ಈ ಕಾರ್ಯಕ್ರಮ ನವೆಂಬರ್ 29 ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ‘ಕೌನ್ ಬನೇಗಾ ಕರೋಡ್ ಪತಿ 11’ ಅಂತಿಮಘಟ್ಟ ತಲುಪಿದೆ. ಹೀಗಾಗಿ ಅಂತಿಮ ಸಂಚಿಕೆಯನ್ನು ಕನ್ನಡತಿ ಸುಧಾಮೂರ್ತಿ ಅವರ ಮೂಲಕ ಸುಖ್ಯಾಂತ ಮಾಡಲಾಗುತ್ತಿದೆ.