ಅಮ್ಮನೊಳಗೊಂದು ಡಾಕ್ಟರ್, ಎಂಜಿನೀಯರ್, ಲಾಯರ್ ಹಾಗೂ ಇತ್ಯಾದಿ

0
758

ಅಮ್ಮ ಒಂದು ಮಾತಿನಲ್ಲಿ ಹೇಳತೀರದ ಮಹಾ ಮೇಧಾವಿ.
ಯಾವುದೇ ಅಪೇಕ್ಷೆ , ಉತ್ಪ್ರೇಕ್ಷೆ ಗಳಿಲ್ಲದೆ ಸದಾ ನಗು ಮೊಗದಿ ತನ್ನ ಕಷ್ಟಗಳನ್ನು ಮೀರಿ ನಡೆವ ಮಹಾಮಾಯಿ.

ನಾವು ಒಬ್ಬ ಡಾಕ್ಟರ್,ಎಂಜಿನಿಯರ್ ,ಲಾಯೆರ್ ಅಂತ ಹೇಳಿಕೊಳ್ತೀವಿ, ಐನಾತಿ ಐಡಿಯಾ ಇರೋ ಕಂಪೆನಿಗಳಲ್ಲಿ ಲೆಕ್ಕ ಕ್ಕಿಲ್ಲದಷ್ಟು ಪ್ರೊಫೈಲ್ ಗಳು ಹಾಳು ಮೂಳು ಆದರೆ ಬೆಳಗಿನಿಂದ ಸಂಜೆವರೆಗೂ ತನ್ನ ಮಕ್ಕಳಿಗೆ, ಮನೆ ಮಂದಿಯ ಸುಖಕ್ಕಾಗಿ ಶ್ರಮಿಸೋ ತಾಯಿಗೆ
“No Pay makes you a house wife” ಅನ್ನೊ ನಾಣ್ಣುಡಿ ಸಾಮಾನ್ಯ.

ಇನ್ನು ಕೆಲವರ ಪ್ರಕಾರ ಗಂಡ ತರೋ ದುಡ್ಡಿನಲ್ಲಿ ತಿಂದು ಮಜ ಮಾಡೋಳು so called “House Wife” ಗಳು, ಒಂದೊಂದು ಸಲ ಕೆಲವರ Thinking ತೀರಾ ಇಷ್ಟು ಕೆಳಮಟ್ಟಕ್ಕೆ ಹೋಗುತ್ತದೆಯಾ? ಅಂತಲೂ ಅನಿಸೋದುಂಟು.

ಹೆಣ್ಣಿನ ತ್ಯಾಗಕೆ ಬೆಲಕಟ್ಟಲಾದೀತೆ ?

ಅಪ್ಪ ಅಮ್ಮನ ಮನೆ ಬಿಟ್ಟು ಬಂದು ತೀರಾ ಅಪರಿಚಿತರ ಮನೆಗೆ ಅವರ ರಿವಾಜುಗಳಿಗೆ ಒಪ್ಪಿಕೊಂಡು , ತನ್ನ ಕಷ್ಟಗಳನ್ನೆಲ್ಲ ಇಷ್ಟ ಮಾಡಿಕೊಂಡು ಬದುಕುವವಳೇ ಹೆಣ್ಣು.

ಅಮ್ಮನಲ್ಲಿರುವ ಆ ಮೇಧಾವಿ!

ಅಮ್ಮ ನನ್ನ shirt ನ ಗುಂಡಿ ಕಿತ್ತೊಗಿದೆ ಸ್ವಲ್ಪ ಹೊಲೆದು ಕೊಡಮ್ಮ ಅಂತ ಬಂದ ಮಗ
ನಿಮಿಷ ಮಾತ್ರದಲ್ಲಿ shirt ರೆಡಿ.

ಬಚ್ಚಲು ಮನೆಯ ಪೈಪ್ ನಲ್ಲಿ ನೀರು ಹೋಗ್ತಿಲ್ಲ ಅಂತ ಕೂಗಿದಳು ಮಗಳು
ಇಗೋ ಅಮ್ಮ ಬಂದೇ ಬಿಟ್ಟಳು ಉದ್ದದ ಕಡ್ಡಿಯೊಂದನ್ನು ಹಾಕಿ ಕಟ್ಟಿಕೊಂಡಿದ್ದ ಕಸವನ್ನು ತೆಗೆದೆ ಬಿಟ್ಟಳು, ನೀರು ಸರಾಗವಾಗಿ ಹರಿಯಿತು.

Cooker ನ ಹಿಡಿಕೆ ಮುರಿದಿದೆ ,ತನ್ನ ಕೈ ಚಳಕದಿಂದ screw ಹಾಗೂ ಡ್ರೈವರ್ ಹಿಡಿದು ಬಂದವಳೇ 2 ನಿಮಿಷದಲ್ಲಿ ಪಟ ಪಟ್ ಸರಿ ಮಾಡಿರುತ್ತಾಳೆ.

ಮಧ್ಯಾನವೆಲ್ಲ ಅಡುಗೆ program ನೋಡಿ ಮುಂದೆ ನಡೆಯೋದು ಅದ್ಬುತ ಅಡುಗೆ ಪ್ರಯೋಗ .

ಅಮ್ಮ ತಲೆ ನೋವು , ಜ್ವರ ಅಂದರೆ ಸಾಕು ಅಲ್ಲಿ ಮನೆ ಡಾಕ್ಟ್ರು ಮಾಡಿದ ಕಷಾಯದ ಘಮಲು.

ನಮ್ಮ ಮನೆಯಲ್ಲಿ ನಡೆಯೋ ಸಣ್ಣ ಪುಟ್ಟ ಜಗಳಗಳ judge ಕೂಡ ನನ್ನಮ್ಮನೆ.

ಇಷ್ಟೆಲ್ಲ ಮಾಡೋ ನನ್ನಮ್ಮ ಡಾಕ್ಟರ್, ಎಂಜಿನೀಯರ್, ಲಾಯರ್ ಇವೆಲ್ಲವೂ ಮೀರಿದ ಒಂದು ಅನನ್ಯ ವ್ಯಕ್ತಿ.