ನಟಿ ಅಮೂಲ್ಯಗೆ ಕೂಡಿ ಬಂತು ಕಂಕಣ ಬಲ

0
604

 

ಸ್ಯಾಂಡಲ್ ವುಡ್ ನಟಿ ಅಮೂಲ್ಯಗೆ ಕಂಕಣ ಬಲ ಕೂಡಿ ಬಂದಿದೆ. ವರ ಆರ್.ಆರ್.ನಗರದ ಮಾಜಿ ಕಾರ್ಪೋರೇಟರ್ ರಾಮಚಂದ್ರ ಅವರ ಪುತ್ರ ಜಗದೀಶ್ ಜೊತೆ ನಿಶ್ಚಿತಾರ್ಥ ನಡೆಸಲು ಮಾತುಕತೆ ನಡೆದಿದೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.

ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ಅಮೂಲ್ಯ ಮತ್ತು ಜಗದೀಶ್ ವಿವಾಹದ ಕುರಿತು ಮಾತುಕತೆ ನಡೆಸಲಾಗಿದೆ. ಅದರಂತೆ ಮಾರ್ಚ್ 6ರಂದು ಅಮೂಲ್ಯ ಮತ್ತು ಜಗದೀಶ್ ನಿಶ್ಚಿತಾರ್ಥ ನಡೆಯಲಿದೆ.ಆರ್.ಜಗದೀಶ್ ಲಂಡನ್ ನಲ್ಲಿ ಎಂಬಿಎ ಪದವಿ ಪಡೆದಿರುವುದಾಗಿ ಕುಟುಂಬದ ಮೂಲದಿಂದ ತಿಳಿದು ಬಂದಿದೆ.

ಜಗದೀಶ್ ಮತ್ತು ತಂದೆ ರಾಮಚಂದ್ರ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಗಣೇಶ್ ರವರಿಗೆ ಆಪ್ತರಾದಿದ್ದು, ಗಣೇಶ್ ರವರ ನಿವಾಸದಲ್ಲಿಯೇ ನಟಿ ಅಮೂಲ್ಯಗೆ ಜಗದೀಶ್ ರವರ ಪರಿಚಯ ಆಗಿತ್ತು. ಈ ಕುಟುಂಬಗಳ ನಿರ್ಧಾರದಿಂದ ಮೂರು ತಿಂಗಳ ಹಿಂದೆ ಇಬ್ಬರ ಜಾತಕ ಕೂಡಿಬಂದಿತ್ತು. ಮೂರು ದಿನಗಳಿಂದ ನಟ ಗಣೇಶ್ ಮನೆಯಲ್ಲಿ ಮಾತುಕತೆ ನಡೆಸಿ ಮದುವೆಯ ನಿರ್ಧಾರಕ್ಕೆ ಬಂದಿದ್ದಾರೆ.

ಒಕ್ಕಲಿಗರ ಕುಟುಂಬಕ್ಕೆ ಸೇರಿರುವ ಅಮೂಲ್ಯ, ಜಗದೀಶ್ ರವರ ನಿಶ್ಚಿತಾರ್ಥ ಮಾರ್ಚ್ 6 ರಂದು ನಡೆಯಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.