ಅಮೂಲ್ಯರ ಮದುವೆಯ ನಂತರದ ಮೊದಲ ಬರ್ತಡೆಗೆ ಪತಿ ಜಗದೀಶ್ ಕೊಟ್ಟ ಉಡುಗೊರೆ ಏನು ಎಂದು ಗೊತ್ತಾದರೆ ನೀವು ಶಾಕ್ ಆಗೋದು ಗ್ಯಾರಂಟಿ..!!

0
719

ಹೌದು ಮೊನ್ನೆ ತಾನೆ ಅಮೂಲ್ಯ ರವರು ಹುಟ್ಟಿದ ಹಬ್ಬವನ್ನ ಆಚರಿಸಿಕೊಂಡರು.. ಈ ಹುಟ್ಟಿದ ಹಬ್ಬ ಅವರಿಗೆ ಬಲು ವಿಶೇಷ ಏಕೆಂದರೆ ಇದು ಅವರ ಮದುವೆಯ ನಂತರದ ಮೊದಲ ಬರ್ತಡೆ.. ಪ್ರತಿ ಹೆಣ್ಣಿಗೂ ತನ್ನ ಗಂಡನಿಂದ ನಿರೀಕ್ಷೆಗಳು ಇದ್ದೇ ಇರುತ್ತವೆ.. ಅದರಲ್ಲೂ ಹುಟ್ಟಿದ ಹಬ್ಬ ಬಂತೆಂದರೆ ಗಂಡ ಏನು ಸರ್ಪ್ರೈಸ್ ಕೊಡುವನೊ ಎಂಬ ಕಾತುರದಲ್ಲೇ ಮುಳುಗಿ ಹೋಗುವರು ನಮ್ಮ ಹೆಣ್ಣು ಮಕ್ಕಳು.. ಅದೇ ರೀತಿಯಾಗಿ ನಮ್ಮ ಸಾಂಡಲ್ ವುಡ್ ನ ಗೋಲ್ಡನ್ ಕ್ವೀನ್ ಅಮೂಲ್ಯ ರವರು ಕಾಯುತ್ತಿದ್ದರು ಅನ್ನಿಸುತ್ತದೆ.. ಅದರೆ ಅವರಿಗೆ ಸಿಕ್ಕ ಉಡುಗೊರೆ ಅವರ ನಿರೀಕ್ಷೆಗೂ ಮೀರಿದ್ದು.. ಹೌದು ಪತಿ ಜಗದೀಶ್ ತಮ್ಮ ಮುದ್ದಿನ ಮಡದಿಗೆ ಒಂದು ದೊಡ್ಡ ಗಿಫ಼್ಟ್ ಕೊಡುವ ಮೂಲಕ ಸಂತೋಷ ಪಡಿಸಿದ್ದಾರೆ..

ಜಗದೀಶ್ ರವರು ಅಮೂಲ್ಯರಿಗೆ BENZ ಕಾರನ್ನು ಗಿಫ಼್ಟ್ ಮಾಡಿದ್ದಾರೆ..ಹೌದು ಅಮೂಲ್ಯರನ್ನು ಸರ್ಪ್ರೈಸ್ ಆಗಿ BENZ ಶೊ ರೂಮ್ ಗೆ ಕರೆದುಕೊಂಡು ಹೋಗಿ ಈ ಉಡುಗೊರೆ ನೀಡಿದ್ದಾರೆ.. ಇದೇ ಸಂದರ್ಭದಲ್ಲಿ ಅಮೂಲ್ಯ ರವರ ತಾಯಿ ಹಾಗೂ ಜಗದೀಶ್ ರವರ ತಾಯಿಯೂ ಕೂಡ ಅವರಿಬ್ಬರ ಆನಂದದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.. ಇದೇ ಸಂದರ್ಭದಲ್ಲಿ ಜಗದೀಶ್ ಸ್ವತಃ ತಾವೇ ಅಮೂಲ್ಯ ರವರಿಗೆ ಗೈಡ್ ಮಾಡುತ್ತಾ ಡ್ರೈವಿಂಗ್ ಮಾಡಿಸಿದ್ದು ವಿಷೇಶವೆನಿಸುತ್ತಿದೆ..

ಅಷ್ಟೇ ಅಲ್ಲ ಜಗದೀಶ್ ರವರು ಮಧ್ಯ ರಾತ್ರಿ 12 ಘಂಟೆಗೆ ಸರಿಯಾಗಿ ಗುಲಾಬಿ ಹೂ ಹಾಗೂ ಕ್ಯಾಂಡಲ್ ಬಳಸಿ ದೊಡ್ಡದೆರಡು ಹೃದಯವನ್ನು ಕ್ರಿಯೇಟ್ ಮಾಡಿ ಹುಟ್ಟಿದ ಹಬ್ಬ ವನ್ನು ಆಚರಿಸಿ ಅಮೂಲ್ಯರವರಿಗೆ ಖುಷಿ ಕೊಟ್ಟಿದ್ದಾರೆ..

ಏನೆ ಆದರೂ ಸಿನಿರಂಗದಲ್ಲಿ ಹೆಸರು ಮಾಡಿ ನಮ್ಮ ಮನ ಗೆದ್ದಿದ್ದ ನಮ್ಮ ನೆಚ್ಚಿನ ತಾರೆ ಎಂದಿಗೂ ಸಂತೋಷದಿಂದಿರಲಿ.. ಈ ಪ್ರೀತಿ ತುಂಬಿದ ಜೋಡಿಗೆ ಯಾರ ಕಣ್ಣೂ ಬೀಳದಿರಲಿ.