ಈ ಬಾರಿ ಗಣಿಧಣಿಗಳು ಜೆ.ಡಿ.ಎಸ್. ಸೇರಿ ಚುನಾವಣೆ ಸ್ಪರ್ದಿಸುತ್ತಾರೆಯೇ ..?

0
419

ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಜೆಡಿಎಸ್ ಪರ್ವ ಆರಂಭವಾಗುವ ಸೂಚನೆಗಳು ಕಾಣುತ್ತಿವೆ. ಗಣಿಧಣಿಗಳಾದ ಶಾಸಕ ಆನಂದ ಸಿಂಗ್ ಹಾಗೂ ಅನಿಲಲಾಡ್‌ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಬಿಜೆಪಿ ಶಾಸಕರಾಗಿರುವ ಆನಂದಸಿಂಗ್ ಹಾಗೂ ಕಾಂಗ್ರೆಸ್ ಶಾಸಕರಾಗಿರುವ ಅನಿಲ್ ಲಾಡ್‌ ಈಗಾಗಲೇ ಜೆಡಿಎಸ್ ವರಿಷ್ಠರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ.

ಮಾತುಕತೆಯ ಬಳಿಕ ಜೆಡಿಎಸ್ ವರಿಷ್ಠರು ಸದ್ಯದಲ್ಲೇ ತಮ್ಮ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ನ ಅನಿಲ್ ಲಾಡ್ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಒಂದು ಕಾಲದ ಆಪ್ತಗೆಳೆಯರಾಗಿದ್ದವರು.

ಬಿಜೆಪಿ ಶಾಸಕ ಆನಂದ ಸಿಂಗ್ ಈಚೆಗೆ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಿಂದ ದೂರ ಉಳಿದಿದ್ದರು. ಅದೇ ರೀತಿ ಕಾಂಗ್ರೆಸ್ ಶಾಸಕ ಅನಿಲ್ ಲಾಡ್, ನನಗೆ ಮೂರು ಪಕ್ಷಗಳಿಂದ ಸ್ಪರ್ಧಿಸುವಂತೆ ಆಹ್ವಾನ ಬಂದಿದೆ ಎಂದು ಹೇಳಿದ್ದರು.