BJP MP ಅನಂತಕುಮಾರ ಹೆಗಡೆ ಇಂದ ವೈದ್ಯರ ಮೇಲೆ ಹಲ್ಲೆ

0
596

ತನ್ನ ತಾಯಿಯ ಚಿಕಿತ್ಸೆಗೆ ವೈದ್ಯರು ಮತ್ತು ಸಿಬ್ಬಂದಿಗಳು ನಿಷ್ಕಾಳಜಿ ತೋರಿಸಿದ್ದಾರೆ ಎಂದು ಉದ್ರಿಕ್ತರಾದ ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಹಲ್ಲೆ ಎಸಗಿದ್ದಾರೆ.

ವಿಡಿಯೋ ನೋಡಿ :

ಮೂಳೆ ಮುರಿತಕ್ಕೊಳಗಾಗಿದ್ದ ತನ್ನ ತಾಯಿಯ ಚಿಕಿತ್ಸೆಗೆ ನಿಷ್ಕಾಳಜಿ ತೋರಿಸಿದ್ದೀರಿ ಎಂದು ಆರೋಪಿಸಿ, ಸೋಮವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ನಗರದ ಟಿಎಸ್ಎಸ್ ಆಸ್ಪತ್ರೆಗೆ ಬಂದ ಅನಂತಕುಮಾರ ಹೆಗಡೆ.‘ಸಂಸದರ ತಾಯಿಯ ಚಿಕಿತ್ಸೆಗೇ ಸರಿಯಾಗಿ ಸ್ಪಂದಿಸದ ನೀವು ಜನಸಾಮಾನ್ಯರಿಗೆ ಇನ್ನೇನು ಮಾಡಬಲ್ಲಿರಿ’ ಎಂದು ವೈದ್ಯರ ಮೇಲೆ ಹರಿಹಾಯ್ದು, ಮೂವರ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ.

ಎಲುಬು ಕೀಲು ತಜ್ಞ ಡಾ. ಮಧುಕೇಶ್ವರ ಅವರ ತುಟಿಗೆ ಪೆಟ್ಟಾಗಿದ್ದು, ಡಾ. ಬಾಲು ಭಟ್ಟ ಮತ್ತು ರಿಸೆಪ್ಶನಿಸ್ಟ್ ರಾಹುಲ್ ಅವರಿಗೆ ಸಂಸದರು ಕೆನ್ನೆಗೆ ಬಾರಿಸಿದ್ದಾರೆ ಎನ್ನಲಾಗಿದೆ. ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ನಗರದ ವೈದ್ಯರೆಲ್ಲ ಸೇರಿ ಮಧ್ಯರಾತ್ರಿ ದಿಢೀರ್ ಸಭೆ ನಡೆಸಿ ಸಂಸದರ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಟಿಎಸ್ಎಸ್ ಆಸ್ಪತ್ರೆ ಅಧ್ಯಕ್ಷ ಶಾಂತಾರಾಮ ಹೆಗಡೆ, ಎಲ್ಲ ವೈದ್ಯರು, ಸಂಸದರ ಉಪಸ್ಥಿತಿಯಲ್ಲಿ ರಾಜೀ ಸಂಧಾನ ಸಭೆ ನಡೆಯಿತು ಎಂದು ಮೂಲಗಳು ತಿಳಿಸಿವೆ.